ತೆರ್‍ನಹಳ್ಳಿ ಗ್ರಾ.ಪಂ ಉಪಚುನಾವಣೆಯಲ್ಲಿ ದಳದ ಮಂಜುನಾಥ್ ಭರ್ಜರಿ ಗೆಲುವು

ಕೋಲಾರ,ಜು,೨೮-ಶ್ರೀನಿವಾಸಪುರತಾಲೂಕಿನ ಮಾಸ್ತೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ತೆರ್‍ನಹಳ್ಳಿ ಸದಸ್ಯ ವೀರಭದ್ರೇಗೌಡ ಕಳೆದ ತಿಂಗಳು ಸಾವನ್ನಪ್ಪಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವೀರಭದ್ರೇಗೌಡರ ಮಗ ಟಿ.ವಿ.ಮಂಜುನಾಥ್೨೪೩ ಮತಗಳ ಅಂತರದಿಮದ ಗೆಲುವು ಸಾಧಿಸಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ೮೮೯ ಮತ ಚಲಾವಣೆಯಾಗಿದ್ದು ಬುಧವಾರ ಎಣಿಕೆ ನಡೆದಾಗ ಮಂಜುನಾಥ್ ೫೬೨ ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್‌ನ ರಾಧಾಕೃಷ್ಣ ೩೧೯ ಮತ ಗಳಿಸಿದ್ದರು. ೮ ಮತಗಳು ತಿರಸ್ಕೃತವಾಗಿತ್ತು.
ವಿಧಾನಸಭಾ ಚುನಾವಣೆ ನಂತರ ತಾಲೂಕಿನಲ್ಲಿ ನಡೆದ ಮೊದಲ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲವು ಸಾಧಿಸಿದೆ. ಮಂಜುನಾಥ್‌ರನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿನಂದಿಸಿದರು.