ತೆರೆಯ ಮೇಲೆ ಲವ್ ಸ್ಟೋರಿ `ಪ್ರಣಯಂ’

ನಟ ರಾಜವರ್ಧನ್ ಹಾಗು ನೈನಾ ಗಂಗೂಲಿ ನಟಿಸಿರುವ ಪ್ರೇಮಕಥೆಯ  “ಪ್ರಣಯಂ”  ಕಥೆ ಸೇರಿದಂತೆ ವಿವಿಧ‌ ವಿಷಯಗಳಿಂದ ಗಮನ ಸೆಳೆದಿದೆ.

ನಿರ್ಮಾಪಕ  ಪರಮೇಶ್ ಕಥೆ ಬರೆದಿದ್ದು ನ ಎಸ್. ದತ್ತಾತ್ರೇಯ  ಆಕ್ಷನ್ ಕಟ್ ಹೇಳಿದ್ದಾರೆ.

 ಪ್ರಣಯಂ ಚಿತ್ರಕ್ಕೆ  ಸಾಹಿತಿ ಜಯಂತ್ ಕಾಯ್ಕಿಣಿ ಅವರು ೩ ಸುಂದರ ಪ್ರೇಮಗೀತೆ ಬರೆದಿದ್ದು, ಮನೋಮೂರ್ತಿ  ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಶ್ ಆಚಾರ್ಯ ಕ್ಯಾಮೆರಾ ವರ್ಕ್ ಮಾಡಿದ್ದಾರೆ.ನಾಳೆ ಬಿಡುಗಡೆಯಾಗಲಿದೆ.

ಪರಮೇಶ್ ಬಂಡವಾಳ‌ ಹಾಕುವುದಷ್ಟೇ ನನ್ನ ಕೆಲಸ ಎಂದುಕೊಳ್ಳದೆ ಎಲ್ಲಾ ವಿಭಾಗದಲ್ಲೂ ಜವಾಬ್ದಾರಿ ತೆಗೆದುಕೊಂಡು ತಾವೇ ನಿಭಾಯಿಸಿದ್ದಾರೆ.

 ನಿರ್ದೇಶಕ ದತ್ತಾತ್ರೇಯ ಮಾತನಾಡಿ ಮಡಿಕೇರಿಯಲ್ಲಿ ನಮಗೆ ಬೇಕಾದ  ಲೊಕೇಶನ್ ಸಿಕ್ತು.  ಎಲ್ಲರ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಮೂಬಂದಿದೆ ಎಂದರು

ವಿದೇಶದಿಂದ ಬರುವ ಎಂಬ ಗೌತಂ ಯುವಕನ  ಪಾತ್ರದಲ್ಲಿ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ.  ಸ್ವಂತ ಸಂಬಂಧದಲ್ಲೇ ಹುಡುಗಿಯೊಬ್ಬಳನ್ನು ಮದುವೆಯಾಗ್ತಾನೆ. ಆನಂತರ  15-20 ದಿನಗಳಲ್ಲಿ ನಡೆಯುವ ಕಥೆ ತುಂಬಾ ಇಂಟರೆಸ್ಟಿಂಗ್ ಹಾಗೂ ಇನ್ ಟೆನ್ಸಿವ್  ಆಗಿದೆ.

ಚಿಕ್ಕಮಗಳೂರು, ಮಡಿಕೇರಿಯ ಸುಂದರ ಲೊಕೇಶನ್ ಗಳಲ್ಲಿ  ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್  ದನಿಯಾಗಿದ್ದಾರೆ. ಚಿತ್ರದಲ್ಲಿ ಗೋವಿಂದೇಗೌಡ,  ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಉಳಿದ ಪಾತ್ರಗಳಲ್ಲಿ  ನಟಿಸಿದ್ದಾರೆ. ಮದನ್ ಹರಿಣಿ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ  ಸಾಹಸ ನಿರ್ದೇಶನ ಪ್ರಣಯಂ ಚಿತ್ರಕ್ಕಿದೆ.