ತೆರೆದ ಚರಂಡಿ-ವಿಪರೀತ ದೂಳು ಬಸವೇಶ್ವರ ವೃತ್ತದಲ್ಲಿರುವ ಸಮಸ್ಯೆಗಳ ಮುಕ್ತಿ

ಸಿರವಾರ.ಜ.೧೮- ಅಧಿಕ ಜನಸಂದಣಿ ಇರುವ ವೃತ್ತಗಳಲ್ಲಿ ಚರಂಡಿ, ರಸ್ತೆಗಳು ಚೆನ್ನಾಗಿದ್ದೂ, ಪ್ರಯಾಣಿಕರಿಗೆ ಅನುಕೂಲವಾಗಿರಬೇಕು, ಆದರೆ ಅದಕ್ಕೆ ದದ್ವಿರುದ ಎಂಬಂತೆ ತೆರೆದ ಚರಂಡಿಯಿಂದ ದೂರ್ನಾತ, ಒಂದು ವಾಹನ ತೆರಳಿದರೆ ವಿಫರೀತ ದೂಳು ಇನೂ ಅನೇಕ ಸಮಸ್ಯೆಗಳ ಆಗರ ಬಸವೇಶ್ವರ ವೃತ್ತ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಪಟ್ಟಣದಲ್ಲಿರುವ ಪ್ರಮುಖ ವೃತ್ತದಲ್ಲಿ ಬಸವೇಶ್ವರ ವೃತ್ತವೂ ಒಂದಾಗಿದೆ. ಸರ್ಕಾರಿ ಆಸ್ಪತ್ರೆಯು ಸ್ವಲ್ಪ ದೂರದಲ್ಲಿ ಇದೆ, ೪-೫ ವಾರ್ಡಿನ ಜನರು, ಪಕ್ಕದ ದೇವದುರ್ಗ ತಾಲೂಕ ಜನರು ಬೇರೆಕಡೆ ಪ್ರಯಾಣ ಬೆಳೆಸಬೇಕೆಂದರೆ ಈ ವೃತ್ತದ ಮೂಲಕ ತೆರಳಬೇಕು.ಚರಂಡಿ ಹಾಳಾಗಿದ್ದೂ ನಿರ್ಮಾಣ ಮಾಡಿ ಎಂದರೆ ಪಂಚಾಯತಿಯಲ್ಲಿ ಅನುದಾನ ಇಲ್ಲಾ, ಮುಖ್ಯರಸ್ತೆಗೆ ಹೊಂದಿಕೊಂಡಿರುವುದರಿಂದ ಲೋಕೋಪಯೋಗಿ ಇಲಾಖೆಯವರು ನಿರ್ಮಾಣ ಮಾಡುತ್ತಾರೆಂಬ ಇಬ್ಬರ ನಡುವಿನ ಆರೋಪದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಮುಖ್ಯರಸ್ತೆಗೆ ಹೊಂದಿಕೊಂಡಿರುವ ಅಂಗಡಿ ಮಾಲಿಕರು ತೆರೆದ ಚರಂಡಿಯ ಮೇಲೆ ಹಲಗೆ, ಕಡಿಗೆ ತುಂಡುಗಳನ್ನು ಅಡ್ಡವಾಗಿ ಇಟ್ಟು ಗ್ರಾಹಕರು ಬರುವುದಕ್ಕೆ ಅನುಕೂಲ ಮಾಡಿಕೊಂಡಿದ್ದಾರೆ, ಹೊಟೋಲ್, ತರಕಾರಿ, ಹಣ್ಣಿನ ಅಂಗಡಿ, ಇನ್ನಿತರ ಅಂಗಡಿಗಳು ತೆರೆದ ಚರಂಡಿಯ ಪಕ್ಕದಲ್ಲಿ ಇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.
ಈ ದೇವದುರ್ಗ ರಸ್ತೆಯು ಹಾಳಾಗಿದ್ದೂ, ವಾಹನ ಚಲಿಸಿದರೆ ಅಧಿಕ ದೂಳು ಏಳುವುದು ಇದು ಆಹಾರ, ಹಣ್ಣು, ಬೇಕರಿ ತಿನಿಸುಗಳ ಮೇಲೆ ಬಿಳುತ್ತದೆ, ಇದನು ಸೇವನೆ ಮಾಡುವುದರಿಂದ ಖಾಯಿಲೆ ಹರಡುವುದು ಸಾಮಾನ್ಯ ಈ ದೂಳಿನಿಂದ ನಿತ್ಯ ವ್ಯಾಪಾರಸ್ಥರಿಗೆ ಅಸ್ತಮ, ಇನ್ನಿತರ ರೋಗಕ್ಕೆ ತುತ್ತಾಗುವುದರಲ್ಲಿ ಅನುಮಾನವೆ ಇಲ್ಲಾ. ಅಧಿಕ ಸಂಚಾರ ದಟ್ಟಣೆ:-ರಾಯಚೂರು- ದೇವದುರ್ಗಕ್ಕೆ ತೆರಳಬೇಕಾದರೆ ಈ ವೃತ್ತದ ಮೂಲಕವೇ ತೆರಳಬೇಕು. ದೇವದುರ್ಗ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾ ದಿಡ್ಡಿಯಾಗಿ ನಿಲ್ಲಿಸುವದರಿಂದ ಟ್ರಾಪೀಕ್ ಸಮಸ್ಯೆಯಾಗುತ್ತಿದೆ. ದೇವದುರ್ಗ ತಾಲೂಕಿನ ಗ್ರಾಮೀಣ ಪ್ರದೇಶದ ರೈತರ ಜಮೀನು ಕೆಲಸಕ್ಕೆ ಕೂಲಿ ಕಾರ್ಮಿಕರನ್ನು ಸಾಗಿಸುವ ವಾಹನಗಳು ಇದೇ ರಸ್ತೆಯ ಮೂಲಕ ತೆರಳಬೇಕು.
ಬೆಳಗ್ಗೆ ಯಿಂದ ಸಂಜೆವರೆಗೂ ವಿವಿದ ಕಡೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಇದೇ ವೃತ್ತದಲ್ಲಿ ನಿಂತುಕೊಳ್ಳಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸೇಲ್ಟರ್ ನಿರ್ಮಾಣ ಮಾಡಬೇಕಿದೆ. ಈಷ್ಟೇಲ ಸಮಸ್ಯೆಗಳ ಆಗರ ಇದರೂ ಸಹ ವ್ಯಾಪಾರಸ್ಥರು ಮಾತ್ರ ವರ್ಷ ಪಂಚಾಯತಿಗೆ ಕರ ಪಾವತಿ ಮಾಡಬೇಕಾಗಿದೆ. ಕೂಡಲೇ ಈ ವೃತ್ತದಲ್ಲಿರುವ ಚರಂಡಿ, ರಸ್ತೆಯನ್ನು ನಿರ್ಮಾಣ ಮಾಡಿದರೆ, ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಅನುಕೂಲ ಆಗುತ್ತದೆ.