ತೆರೆದ ಚರಂಡಿ ಕಾಮಗಾರಿಗೆ ಚಾಲನೆ

ಬಳ್ಳಾರಿ, ಜೂ.09; ಇಲ್ಲಿನ ಸಂಗನಕಲ್ಲು ರಸ್ತೆಯಿಂದ ನೆಹರು ಕಾಲೋನಿವರೆಗೆ 40 ಲಕ್ಷ ರೂ ವೆಚ್ಚದಿಂದ ನಿರ್ಮಾಣ ಮಾಡುವ ತೆರೆದ ಚರಂಡಿ ಕಾಮಗಾರಿಗೆ ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಸ್.ಮಲ್ಲನಗೌಡ, ಬಿಜೆಪಿ ಜಿಲ್ಲಾ ವಕ್ತಾರ ಡಾ.ಬಿ.ಕೆ.ಸುಂದರ್ ಮೊದಲಾದವರು ‌ಇದ್ದರು.