ತೆರೆಕಂಡ ವಿಕ್ರಾಂತ್ ರೋಣ ಕಿಚ್ಚ ಅಭಿಮಾನಿಗಳು ಫಿದಾ

ಬೆಂಗಳೂರು,ಜು.೨೮- ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ವಿಶ್ವದಾದ್ಯಂತ ತೆರೆಗೆ ಬಂದಿದ್ದು ಅಭಿಮಾನಿಗಳ ಅಬ್ಬರ ಮುಗಿಲುಮುಟ್ಟಿದೆ.

ಮುಂಜಾನೆಯಿಂದಲೇ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಮುಗಿಬಿದ್ದಿದ್ದು .ಕಿಚ್ಚನ ಸ್ಟೈಲಿಶ್ ಲುಕ್‌ನೋಡಿ ಫಿದಾಆಗಿದ್ದಾರೆ

ರಾಜ್ಯದಲ್ಲಿ ೩೨೫ಕ್ಕೂ ಹೆಚ್ಚು ಚಿತ್ರಮಂದಿರ ಸೇರಿದಂತೆ, ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ ೨,೫೦೦ ಪ್ರದರ್ಶನ ನಡೆಯಲಿದೆ. ಸುಮಾರು ೯೦೦ ಪರದೆಗಳಲ್ಲಿ ೩ಡಿ ಹಾಗೂ ೧,೬೦೦ ಪರದೆಗಳಲ್ಲಿ ೨ಡಿ ವರ್ಷನ್ ಬಿಡುಗಡೆಯಾಗಿದೆ.

ಬೆಂಗಳೂರಿನ ೪೦ ಮಲ್ಟಿಪ್ಲೆಕ್ಸ್‌ನಲ್ಲಿ ೮೦೦ ಪ್ರದರ್ಶನ ಹಾಗೂ ಒಟ್ಟು ೭೦ ಏಕಪರದೆಯಲ್ಲಿ ೪೦೦ ಪರದೆಯಲ್ಲಿ ಬೆಳಿಗ್ಗೆ ೫.೩೦ಕ್ಕೆ ಶಂಕರ್‌ನಾಗ್ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ಪ್ರಾರಂಭವಾಗಿದೆ.

ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಮುಂಜಾನೆಯೇ ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ಭೇಟಿನೀಡಿದ್ದು, ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದರು. ಚಿತ್ರಮಂದಿರದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಚಿತ್ರತಂಡ ಸಿನಿಮಾ ವೀಕ್ಷಿಸಿದರು.

೫೦ಕ್ಕೂ ಹೆಚ್ಚು ದೇಶದಲ್ಲಿ ತೆರೆಗೆ:

ಕಿಚ್ಚನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಹಬ್ಬದ ರೀತಿ ಸಂಭ್ರಮ ಮಾಡುತ್ತಿದ್ದಾರೆ.ಕನ್ನಡ, ಇಂಗ್ಲೀಷ್ ಸೇರಿದಂತೆ ೬ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗಿದ್ದು, ಆಂಧ್ರ-ತೆಲಂಗಾಣ, ತಮಿಳುನಾಡು, ಕೇರಳ, ಉತ್ತರ ಭಾರತ ಸೇರಿದಂತೆ ೫೦ಕ್ಕೂ ಹೆಚ್ಚು ದೇಶಗಳಲ್ಲಿ ವಿಕ್ರಾಂತ್ ರೋಣ ಅಬ್ಬರಿಸಿದೆ.

ನಿರ್ದೇಶಕ ಅನೂಪ್ ಭಂಡಾರಿ ಆ?ಯಕ್ಷನ್ ಕಟ್ ಹೇಳಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ನಾಯಕ ನಟರಾಗಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕೆಲ್ವಿನ್ ಫರ್ನಾಂಡಿಸ್, ರವಿಶಂಕರ್ ಗೌಡ ಸೇರೆದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

ಹುಚ್ಚೆದ್ದು ಕುಣಿದ ಅಭಿಮಾನಿಗಳು

ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡೀಸ್ ಜೊತೆ ಹೆಜ್ಜೆ ಹಾಕಿರುವ ರಾ ರಾ ರಕ್ಕಮ್ಮ ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ ಸಿಕ್ಕ ಮತ್ತೊಂದು ಅಭೂತಪೂರ್ವ ಪ್ರತಿಕ್ರಿಯೆ ಇದಾಗಿದೆ.