ತೆರಿಗೆ ಹಣ ಸಂಗ್ರಹಿಸಲು ಕಟ್ಟು ನಿಟ್ಟಿನ ಕ್ರಮ

ಮಸ್ಕಿ.ಜ.೮- ಜಾಗಗಳ ಸಂಬಂಧ ಪಟ್ಟಂತೆ ಅಗತ್ಯ ದಾಖಲೆ ನೀಡಿದ ಸಾರ್ವಜನಿಕರಿಗೆ ಖಾತಾ ನಕಲು ನೀಡಲು ಯಾವದೇ ರೀತಿಯ ತೊಂದರೆ ಇಲ್ಲ ಎಂದು ಪುರಸಭೆ ನೂತನ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹೇಳಿದರು.ಪುರಸಭೆ ಕಚೇರಿಯಲ್ಲಿ ಭೇಟಿ ಯಾದ ಸುದ್ದಿಗಾರರ ಜತೆ ಗುರುವಾರ ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಶೇ. ೫ ರಷ್ಟು ಮಾತ್ರ ತೆರಿಗೆ ಸಂಗ್ರಹ ಮಾಡಲಾಗಿದೆ ಇಲ್ಲಿವರೆಗೆ ಶೇ.೮೦ ರಷ್ಟು ಮನೆ, ನಳ, ಆಸ್ತಿ, ವಾಣಜ್ಯ ಕಟ್ಟಡ ತೆರಿಗೆ ವಸೂಲು ಮಾಡಬೇಕಾಗಿತ್ತು ಎಂದರು.
ತೆರಿಗೆ ಹಣ ಸಂಗ್ರಹಕ್ಕೆ ಪುರಸಭೆ ವ್ಯಾಪ್ತಿಯ ೨೩ ವಾಡ್ ಗಳಲ್ಲಿ ೪ ವಾಡ್ ಗಳಿಗೆ ಒಬ್ಬ ಸಿಬ್ಬಂದಿ ಕರ ವಸೂಲಿ ಮಾಡಲು ನಿಯೋಜನೆ ಮಾಡಲಾಗಿದೆ ತಮಗೆ ನೀಡಿದ ಜವಾಬ್ದಾರಿಯನ್ನು ಕಟ್ಟು ನಿಟ್ಟಾಗಿ ನಿರ್ವಹಿಸಲು ಸಿಬ್ಬಂದಿ ಗಳಿಗೆ ತಾಕೀತು ಮಾಡಲಾಗಿದೆ. ಆಸ್ತಿ ವರ್ಗಾವಣೆ, ಖಾತಾ ನಕಲು ನೀಡುವ ಬಗ್ಗೆ ಸಾಕಷ್ಟು ಅರ್ಜಿ ಗಳು ಬಂದಿವೆ ಪರಿಶೀಲನೆ ಮಾಡಿದ ನಂತರ ಕ್ರಮ ಬದ್ದ ಆಸ್ತಿ ಗಳ ಖಾತಾ ನಕಲು ನೀಡಲು ಕ್ರಮ ಕೈ ಗೊಳ್ಳುವೆ ಎಂದರು.
ನನ್ನ ವಸತಿ ಯೋಜನೆಗಳಲ್ಲಿ ಅರೆ ಬರೆಯಾಗಿ ನಿರ್ಮಾಣ ವಾಗಿರುವ ಮನೆಗಳನ್ನು ಪೂರ್ಣಗೊಳಿಸಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುವೆ ತಾಜ್ಯ ವಿಲೇವಾರಿಗೆ ಜಾಗ ಗುರುತಿಸುವ ಕೆಲಸ ಉಳಿದಿದೆ ಸೂಕ್ತ ಜಾಗ ಗುರುತಿಸಿದ ನಂತರ ತಾಜ್ಯ ವಿಲೇವಾರಿ ಸಮಸ್ಯೆ ನಿವಾರಣೆ ಯಾಗಲಿದೆ ಪಟ್ಟಣದಲ್ಲಿ ಕುಡಿವ ನೀರಿನ ಅಭಾವ ಇಲ್ಲ ೨೩ ವಾರ್ಡ್‌ಗಳಲ್ಲಿ ಸ್ವಚ್ಚತೆ ಕಾಪಾಡುವುದು ಎಲ್ಲರ ಕರ್ತವ್ಯ ಸಾರ್ವಜನಿಕರು ರಸ್ತೆ ಎಲ್ಲೆಂದರಲ್ಲಿ ಕಸ ಎಸೆಯ ಬಾರದು ನೀರು ಪೋಲಾಗದಂತೆ ನೋಡಿ ಕೊಳ್ಳ ಬೇಕು ಎಂದು ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತುಂಗ ಭದ್ರ ಎಡ ದಂಡೆ ಕಾಲುವೆ ಪಕ್ಕದಲ್ಲಿ ಕೆಲ ವ್ಯಕ್ತಿಗಳು ಕಸ, ಸತ್ತ, ಕುರಿ, ಕೋಳಿ ಎಸೆಯುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವೆ ಸ್ವಚ್ಚ ಪರಿಸರ ಕಾಪಾಡಲು ಪುರಸಭೆ ಆಡಳಿತ ಜತೆ ಸಾರ್ವಜನಿಕರು ಸಾಥ್ ನೀಡಬೇಕು ಎಂದರು. ಸಮಸ್ಯೆಗಳನ್ನು ಹೇಳಲು ಬರುವ ಸಾರ್ವಜನಿಕರ ಜತೆ ಪುರಸಭೆ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸ ಬೇಕು ಸಿಬ್ಬಂದಿಗಳು ಕಾಯಕ ನಿಷ್ಟೆಯಿಂದ ಕ್ರಿಯಾ ಶೀಲ ರಾಗಿ ಕೆಲಸ ಮಾಡಲು ಸೂಚನೆ ನೀಡಿದ್ದೆನೆ ಎಂದರು ಪುರಸಭೆ ಅಧ್ಯಕ್ಷೆ ವಿಜಯ ಲಕ್ಷ್ಮೀ ಬಸನಗೌಡ ಪಾಟೀಲ್ ಉಪಾಧ್ಯಕ್ಷೆ ಕವಿತಾ ಅಮರೇಶ ಮಾಟೂರು ಇದ್ದರು.

(೭,ಜ.ಎಂಎಸ್ಕೆ ಪೋಟೋ೦೧)