ತೆರಿಗೆ ಹಣದಲ್ಲಿ ಉಚಿತ ಶಿಕ್ಷಣ ನೀಡಲು ಮನವಿ

ಚನ್ನಗಿರಿ. ಜೂ.೯: ತೆರಿಗೆ ಹಣದಲ್ಲಿ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ನೀಡಿ ಎಂದು ವಕೀಲರಾದ ಪ್ರವೀಣ್ ಕುಮಾರ್ ಚಿಕ್ಕೋಡ ಹೇಳಿದರು.ಚನ್ನಗಿರಿ ತಾಲೂಕಿನ ಚಿಕ್ಕೋಡ ಗ್ರಾಮದಲ್ಲಿ ಭಾರತೀಯ ಪರಿವರ್ತನ ಸಂಘ ವತಿಯಿಂದ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡಿ ಎಂದು ಅಭಿಯಾನ ಮಾಡಲಾಗಿತ್ತು.ವಕೀಲರಾದ ಅಂತ ಪ್ರವೀಣ್ ಕುಮಾರ್ ಮಾತನಾಡಿ ನಮ್ಮ ರಾಜ್ಯದಲ್ಲಿ ದಿನನಿತ್ಯ ಕೊರೊನಾ ಸೋಂಕು ಹರಡುತ್ತಿದ್ದು ಬಡಜನರಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳುವಂತಹ ಸಾಮರ್ಥ್ಯ ಇಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದಂತೆ ಚಿಕಿತ್ಸೆ ನೀಡುತ್ತಾರೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ತಂತ್ರಗಾರಿಕೆ ಯಂತ್ರಗಳು ಇರುವುದಿಲ್ಲ ಆದ್ದರಿಂದ ಖಾಸಗಿ ಆಸ್ಪತ್ರೆಗೆ ಬರೆದುಕೊಡುತ್ತಾರೆ ಇಂತಹ ಸಂದರ್ಭದಲ್ಲಿ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ನಾವು ಕಟ್ಟುವ ತೆರಿಗೆ ಹಣವನ್ನು ಆರೋಗ್ಯ ಶಿಕ್ಷಣಕ್ಕೆ ಉಪಯೋಗಿಸಿದರೆ ಎಲ್ಲಾ ರೀತಿಯ ವರ್ಗದವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.