ತೆರಿಗೆ ಸರ್ಕಾರದ ಆದಾಯದ ಮೂಲ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.22: ತೆರಿಗೆಯು ಸರ್ಕಾರದ ಮುಖ್ಯ ಆದಾಯದ ಮೂಲವಾಗಿದೆ. ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಮತ್ತು ಇಲಾಖೆಗಳ ವೆಚ್ಚಗಳ ನಿರ್ವಹಣೆ ತೆರಿಗೆಯ ಮೇಲೆ ನಿಂತಿದೆ ಎಂದು ಬಳ್ಳಾರಿಯ ಆದಾಯ ತೆರಿಗೆ ಅಧಿಕಾರಿಗಳಾದ ಡಿ.ಪಾಂಡುರಂಗ ಅಭಿಪ್ರಾಯಪಟ್ಟರು.
ಶ್ರೀ ಗುರು ತಿಪ್ಪೇರುದ್ರ ಕಾಲೇಜಿನಲ್ಲಿ ಆಯೋಜಿಸಿದ್ದು ತೆರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಉಧ್ಘಾಟಿಸಿ ಮಾತನಾಡುತ್ತಾ, ಇತರೆ ಆದಾಯಗಳು, ವಿವಿಧ ರೀತಿಗಳಿಂದ ಬರುವ ಆದಾಯಗಳು, ಕೃಷಿ ಆದಾಯ, ಇವುಗಳನ್ನು ಹೇಗೆ ಪರಿಗಣಿಸಿ ಲೆಕ್ಕ ಮಾಡಬೇಕಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟರು. ಆದಾಯ ತೆರಿಗೆ ರಿಟರ್ನ್‍ನನ್ನು ಸಕಾಲದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸಲ್ಲಿಸಿದ್ದೇ ಆದರೆ ಬಹಳಷ್ಟು ಅನುಕೂಲಗಳನ್ನು ಪಡೆಯಬಹುದಾಗಿದೆ ಎಂದರು. 
ಈ ಕಾರ್ಯಕ್ರಮದಲ್ಲಿ ಎಸ್.ಜಿ.ಟಿ. ಸಂಸ್ಥೆಯ ಅದ್ಯಕ್ಷರಾದ ಹಾಗು ಚಾರ್ಟರ್ಡ್ ಅಕೌಂಟೆಂಟ್ ಆದ ಎಸ್.ಎನ್,ರುದ್ರಪ್ಪನವರು ಮಾತನಾಡಿ 2.5ಲಕ್ಷಕ್ಕಿಂತ ಅಧಿಕವಾದ ಯಾವುದೇ ಆದಾಯವನ್ನು ಮರೆಮಾಚದೆ ಸರ್ಕಾರಕ್ಕೆ ಆದಾಯ ತೆರಿಗೆ ರಿಟರ್ನ್‍ನಲ್ಲಿ ತೋರಿಸಬೇಕು. ಬ್ಯಾಂಕ್ ಲೋನ್ ಅಥವ ಸಾಲ ಸೌಲಭ್ಯಗಳನ್ನು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಇದು ಅಗತ್ಯವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಹಾಗು ಸ್ನೇಹಿತರಿಗೆ ತೆರಿಗೆ ಪಾವತಿ ಮಾಡವುವರಿಗೆ ಈ ಅರಿವನ್ನು ಹಂಚಿಕೊಳ್ಳಬೇಕೆಂದು ತಿಳಿಸಿದರು.
ಪದವಿ ಕಾಲೇಜಿನ ಪ್ರಚಾರ್ಯರಾದ ಜಿ.ನಾಗರಾಜ್‍ರವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ನಿರೀಕ್ಷಕರಾದ ವೆಂಕಟರಮಣ ಹಾಗು ವಿಜಯಲಕ್ಷಿ ರವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.