(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.29: ನಗರ ಪಾಲಿಕೆಗೆ ಸಂದಾಯವಾಗಬೇಕಿರುವ ತೆರಿಗೆ ವಸೂಲಿಗಾಗಿ ಜೂನ್ 1 ರಿಂದ 5 ಜನರ ತಂಡಗಳನ್ನು ರಚಿಸಲಾಗಿದೆಂದು ಪಾಲಿಕೆಯ ಆಯುಕ್ತ ಎಂ.ಎನ್. ರುದ್ರೇಶ್ ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ನಗರದಲ್ಲಿ ಶೇ.60 ಜನ ತೆರಿಗೆಯನ್ನು ಪಾವತಿಸುತ್ತಿಲ್ಲ. ಚುನಾವಣೆ ಮತ್ತಿತರ ಕಾರಣಗಳಿಂದ ವಸೂಲಿ ಕಾರ್ಯವೂ ನಿಂತಿತ್ತು. ಈಗ ಎಲ್ಲಾ ಮುಗಿದಿದೆ. ಆಸ್ತಿ, ನೀರು, ಒಳ ಚರಂಡಿ ಬಳಕೆಯ ತೆರಿಗೆಯನ್ನು ಕಟ್ಟು ನಿಟ್ಟಾಗಿ ವಸೂಲಿ ಮಾಡಲು ಪಾಲಿಕೆ ಸಿಬ್ಬಂದಿಯ ಐದಾರು ಜನರ 6 ತಂಡಗಳನ್ನು ರಚಿಸಲಾಗಿದೆ.
ನಾಳೆ ಜೂನ್ ಒಂದರಿಂದ ಈ ತಂಡಗಳು ಮನೆ, ಮನೆಗೆ ತೆರಳಿ ತೆರಿಗೆ ವಸೂಲಿ ಮಾಡಲಿದೆ. ಜನತೆ ಸ್ವಯಂ ಪ್ರೇರಣೆಯಿಂದ ಬಂದು ಪಾಲಿಕೆಯಲ್ಲೂ ಸಂದಾಯ ಮಾಡಬಹುದಾಗಿದೆಂದರು. ಒಟ್ಟಾರೆ ಈ ವರ್ಷ ಪಾಲಿಕೆಗೆ 150 ಕೋಟಿ ರೂಗಳ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮರು ಟೆಂಡರ್
ನಗರದ ರಂಗಮಂದಿರದ ಬಳಿ ನಿರ್ಮಿಸಲಾಗಿರುವ ಫುಡ್ ಪ್ಲಾಜದ 15 ಮಳಿಗೆಗಳಲ್ಲಿ 5ನ್ನು ಮಾತ್ರ ಹಣಸಂದಾಯ ಮಾಡಿ ಪಡೆದು ಇಬ್ಬರು ಟೀ ಅಂಗಡಿ ತೆರೆದಿದ್ದಾರೆ. ಉಳಿದ 10 ಮಳಿಗೆಯನ್ನು ಪಡೆದಿದ್ದವರು.
ಪೂರ್ಣ ಪ್ರಮಾಣದ ಹಣ ನೀಡದ ಕಾರಣ ಅವರು ನೀಡಿದ್ದ 25ಸಾವಿರ ಇ.ಎಂ.ಡಿ ಹಣ ಮುಟ್ಟುಗೋಲು ಹಾಕಿಕೊಂಡಿದೆ. ಇಂದು ಈ ಹತ್ತು ಮಳಿಗೆಗಳಿಗೆ ಮರುಟೆಂಡರ್ ಕರೆಯಲು ಆದೇಶ ಮಾಡಿದೆ. ಜೊತೆಗೆ ಬಾಡಿಗೆ ಬಾಕಿ ವಸೂಲಾತಿಗಾಗಿ ಅವರ ಆಸ್ತಿಯನ್ನು ಟೆಂಡರ್ ನಲ್ಲಿ ಆಟ್ಯಾಚ್ ಮಾಡುವ ಹೊಸ ಷರತ್ತು ಹಾಕಲಾಗುತ್ತಿದೆಂದು ಹೇಳಿದ್ದಾರೆ.
ಫುಡ್ ಪ್ಲಾಜದಲ್ಲಿ ಹಗಲು ವೇಳೆಯಲ್ಲೂ ವಿದ್ಯುತ್ ದೀಪಗಳು ಉರಿಯುತ್ತಿರುವ ಬಗ್ಗೆ ಕ್ರಮ ಜರುಗಿಸಲಿದೆಂದು ಹೇಳಿದ್ದಾರೆ.
One attachment • Scanned by Gmail