ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರವಾಸಿಗರ ದಂಡು

ಮುದುಮಲೈ (ತಮಿಳುನಾಡು), ಮಾ, ೧೪ – ಈ ಬಾರಿಯ ಆಸ್ಕರ್ ಪ್ರಶಸ್ತಿ ಪಡೆದ ಸಾಕ್ಷ್ಯಚಿತ್ರ ‘ಎಲಿಫೆಂಟ್ ವಿಸ್ಪರರ್ಸ್’ ಮೂಲಕ ಪ್ರಸಿದ್ಧವಾದ ಮರಿ ಆನೆ ವೀಕ್ಷಿಸಲು ಮುದುಮಲೈ ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರವಾಸಿಗರ ದೊಡ್ಡ ದಂಡೇ ಹರಿದು ಬರುತ್ತಿದೆ.
ಚಿತ್ರದ ಕಥಾವಸ್ತು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಅನಾಥ ಆನೆಗಳನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಸುತ್ತ ನಡೆಯುವ ಕಥೆಗೆ ಅತ್ಯುತ್ತಮಸಾಕ್ಷ್ಯ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಬಂದಿದೆ.
ಆನೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಪ್ರತಿಕ್ರಿಯಿಸಿ “ಇದೊಂದು ಉತ್ತಮ ಕ್ಷಣ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ಆನೆ ನನ್ನ ಅಚ್ಚುಮೆಚ್ಚಿನ ಪ್ರಾಣಿ ಮತ್ತು ಆಸ್ಕರ್ ಪ್ರಶಸ್ತಿ ಗೆದ್ದಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ತಮಿಳು ಸಾಕ್ಷ್ಯಚಿತ್ರದ ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ನಿರ್ಮಾಪಕ ಗುನೀತ್ ಮೊಂಗಾ ಅವರು ೯೫ ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಚಿನ್ನದ ಪ್ರತಿಮೆಯ ಪ್ರಶಸ್ತಿ ಪಡೆದರು.
ಪ್ರಶಸ್ತಿ ಪಡೆದ ನಂತರ ಕಾರ್ತಿಕಿ ಗೊನ್ಸಾಲ್ವೆಸ್, ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಸಂಬಂಧ ಬಗ್ಗೆ ಮಾತನಾಡಲು ಇಲ್ಲಿ ನಿಂತಿದ್ದೇನೆ. ಸ್ಥಳೀಯ ಸಮುದಾಯಗಳ ಗೌರವಕ್ಕಾಗಿ. ಇತರ ಜೀವಿಗಳ ಕಡೆಗೆ ಅಸ್ತಿತ್ವಕ್ಕಾಗಿ ಹೋರಾಡುವುದಾಗಿ ತಿಳಿಸಿದ್ದಾರೆ.
ಸ್ಥಳೀಯ ಜನರು ಮತ್ತು ಪ್ರಾಣಿಗಳನ್ನು ಎತ್ತಿ ತೋರಿಸುವ ಚಿತ್ರವನ್ನು ಗುರುತಿಸಿದ್ದಕ್ಕಾಗಿ ಅಕಾಡೆಮಿಗೆ ಧನ್ಯವಾದಗಳು. ಈ ಚಿತ್ರದ ಶಕ್ತಿ ನಂಬಿದ್ದಕ್ಕಾಗಿ ನೆಟ್‌ಫ್ಲಿಕ್ಸ್‌ಗೆ. ನಿರ್ಮಾಪಕರಿಗೆ ಮತ್ತು ನನ್ನ ಇಡೀ ತಂಡಕ್ಕೆ ತಾಯಿ ತಂದೆ ಮತ್ತು ಸಹೋದರಿಗೆ ಧನ್ಯವಾದ ಅರ್ಪಿಪಿಸಿದ್ದಾರೆ.
ಗುನೀತ್ ಮೊಂಗಾ ಆಸ್ಕರ್ ಪ್ರಶಸ್ತಿ ಗೆದ್ದಿರುವುದು ಇದೇ ಮೊದಲಲ್ಲ. ೨೦೧೯ ರಲ್ಲಿ, ಮೊಂಗಾ ಅವರ ಸಾಕ್ಷ್ಯಚಿತ್ರ ಅವಧಿ. ‘ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್’ ವಿಭಾಗದಲ್ಲಿ ಎಂಡ್ ಆಫ್ ಸೆಂಟೆನ್ಸ್’ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.