ತೆಗಲತಿಪ್ಪಿ ಗ್ರಾಮದಲ್ಲಿ ಗ್ರಾಮ ಸಭೆ

ಕಾಳಗಿ.ಜೂ23 : ತಾಲೂಕಿನ ಹಲಚೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತೆಗಲತಿಪ್ಪಿ ಗ್ರಾಮದಲ್ಲಿ ಪಿಡಿಓ ಮಲ್ಲಿಕಾರ್ಜುನ್ ಗಿರಿ ಅವರ ನೇತೃತ್ವದಲ್ಲಿ 2021-22 ನೇ ಸಾಲಿನ ಬಸವ ವಸತಿ ಮತ್ತು ಡಾಕ್ಟರ್ ಬಿಆರ್ ಅಂಬೇಡ್ಕರ್ ನಿವಾಸ ವತಿಯಿಂದ ಗ್ರಾಮ ಸಭೆ ನಡೆಯಿತು.

ಗ್ರಾಮದಲ್ಲಿ ನೀರಿನ ಸಮಸ್ಯೆ,ಚರಂಡಿ ಸಮಸ್ಯೆ, ವಿದ್ಯುತ್ ಸಮಸ್ಯೆ ಇದೆಯೆಂದು ಗ್ರಾಮದ ಜನರು ಮನವಿ ಕೊಟ್ಟರು. ಹಾಗೂ ಗ್ರಾಮದಲ್ಲಿ ಬಡ ಜನರಿಗೆ ಮನೆ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್, ಕಂಪ್ಯೂಟರ್ ಆಪರೇಟರ್ ಅಂಬಿಕ, ಗ್ರಾಮ ಪಂಚಾಯತನ ಸದಸ್ಯರಾದ ಅಂತ ಶಾಮರಾವ್ ಮೋಥಕಪಲ್ಲಿ, ಮಲ್ಲಿಕಾರ್ಜುನ ಪಾಟೀಲ್, ಅನುಸೂಯ ಬಾಯಿ ಟಿ ಟಿ, ಅನೇಕ ಗ್ರಾಮದ ಜನರು ಉಪಸ್ಥಿತರಿದ್ದರು.