
ಸಿರುಗುಪ್ಪ : ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಬಾಪೂಜಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಶಾಲೆಯ ಅಧ್ಯಕ್ಷ ಮಹಮ್ಮದ್ ಅಸ್ಲಾಂ ನೆರವೇರಿಸಿದರು.ಅಂದು ದೇಶದ ಸ್ವತಂತ್ರಕ್ಕಾಗಿ ಒಂದಾದ ನಾಯಕರಂತೆ ಇಂದು ನಾವು ನಮ್ಮೆಲ್ಲರ ನಡುವೆ ಇರುವ ಕೋಮುವಾದ, ಭ್ರಷ್ಟಾಚಾರ, ನಮ್ಮ ದೇಶದ ಶಾಂತಿಗೆ ಧಕ್ಕೆ ತರುವ ಯಾವುದೇ ಶಕ್ತಿಗಳ ವಿರುದ್ಧ ಹೋರಾಡಲು ನಾವು ಸೇರಬೇಕಿದೆ. ಅದಕ್ಕೆ ನಾವು ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದಿಕೊಳ್ಳುವ ಜೊತೆಗೆ ಪ್ರಪಂಚ ಜ್ಞಾನವನ್ನು ಬೆಳೆಸಿಕೊಂಡು, ಶಾಲೆಯ ಮಟ್ಟದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ ಕೊಳ್ಳಬೇಕು ಎಂದು ಶಾಲೆಯ ಶಿಕ್ಷಕ ಫರೂಕ್ ಅಬ್ದುಲ್ ತಿಳಿಸಿದರು.ಶಾಲೆಯ ಮುಖ್ಯಗುರು ಅನ್ನಪೂರ್ಣ ಶಿಕ್ಷಕರಾದ ಗಾದಿಲಿಂಗಪ್ಪ, ಶಶಿಧರ್, ಗೀರಿಶ್, ಶ್ರೀದೇವಿ, ಅಲ್ಲಭಿ , ರುಕ್ಷಶಾನ ಬೇಗಂ ಹಾಗೂ ಮುಖಂಡರಾದ ರಸೊಲ್ ಸಾಬ್, ಜಿಲನ್, ದಾದವಲಿ, ಪೀರಸಾಬ್, ರಾಜಾಸಾಬ್, ಸದ್ದಂ ಇದ್ದರು.