ತೆಕ್ಕಲಕೋಟೆ ಪ.ಪಂ ಉಪಾಧ್ಯಕ್ಷರ ಆಯ್ಕೆ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ಜ.21: ಪಟ್ಟಣ ಪಂಚಾಯಿತಿಗೆ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ವಡ್ಡರ ದೇವಣ್ಣ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ತಿಳಿಸಿದರು.
 ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಅಧ್ಯಕ್ಷೆ ಎಚ್.ಕೆ.ನೀಲಮ್ಮ, ಮಾಜಿ ಅಧ್ಯಕ್ಷರಾದ ಎಂ.ಕೆ.ರುದ್ರಮ್ಮಕೊಮಾರೆಪ್ಪ, ಲಕ್ಷ್ಮೀಮಾರುತಿ,  ಸದಸ್ಯರಾದ ದೊಡ್ಡರುದ್ರಮ್ಮ, ಪರಸಪ್ಪ, ಸಿಂಗ್ರಿಸಿದ್ದಯ್ಯ, ಹುಸೇನಪ್ಪ, ಜೆ.ರಾಘವೇಂದ್ರ, ಮಂಜುನಾಥ, ಕೆ.ಲಕ್ಷ್ಮಿ, ಹನುವಾಳ್ ಹುಸೇನಿ ಹಾಗೂ ಪ.ಪಂ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.