ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ಅರಳಿದ ಕಮಲ

ಸಿರುಗುಪ್ಪ ನ 08 : ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಚುನಾವಣೆಯು ಶನಿವಾರ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷ ಸ್ಥಾನ ಎಸ್.ಟಿ. ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 20 ಸದಸ್ಯರನ್ನು ಹೊಂದಿರುವ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ 16ನೇವಾರ್ಡನ ಸದಸ್ಯೆ ಕೆ.ಲಕ್ಷ್ಮಿ ಮಾರುತಿ, ಕಾಂಗ್ರೇಸ್ ಪಕ್ಷದಿಂದ 12ನೇವಾರ್ಡನ ಸದಸ್ಯೆ ಎಸ್.ಪೂರ್ಣಿಮ ನರೇಂದ್ರಸಿಂಹ ಸೇರಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ 2ನೇವಾರ್ಡ ಸದಸ್ಯ ವಡ್ಡರ ಮಂಜುನಾಥ, ಕಾಂಗ್ರೇಸ್ ಪಕ್ಷದಿಂದ 6ನೇ ವಾರ್ಡ ಸದಸ್ಯ ಮೇಲ್ಗಡೆ ಖಾದರವಲೀ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಬಿಜೆಪಿ ಪಕ್ಷದ 16ನೇವಾರ್ಡನ ಸದಸ್ಯೆ ಕೆ.ಲಕ್ಷ್ಮಿಮಾರುತಿ ಅಧ್ಯಕ್ಷೆ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2ನೇವಾರ್ಡ ಸದಸ್ಯ ವಡ್ಡರ ಮಂಜುನಾಥ ಪರವಾಗಿ 10 ಮತಗಳು ಹಾಗೂ ಸಂಸದ ಸಂಗಣ್ಣ ಕರಡಿ, ಶಾಸಕ ಎಂ.ಎಸ್.ಸೋಮಲಿಂಗಪ್ಪರವರ ಎರಡು ಮತಗಳು ಸೇರಿ 12 ಸದಸ್ಯರು ಕೈಎತ್ತುವ ಮೂಲಕ ಬೆಂಬಲಿಸಿದರು. ಕಾಂಗ್ರೇಸ್ ಪಕ್ಷದ 12ನೇವಾರ್ಡನ ಸದಸ್ಯೆ ಎಸ್.ಪೂರ್ಣಿಮ ನರೇಂದ್ರಸಿಂಹ ಅಧ್ಯಕ್ಷೆ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ ಸದಸ್ಯ ಮೇಲ್ಗಡೆ ಖಾದರವಲೀ ಪರವಾಗಿ 9 ಸದಸ್ಯರು ಕೈಎತ್ತುವ ಮೂಲಕ ಬೆಂಬಲಿಸಿದರು. 17ನೇ ವಾರ್ಡನ ಸದಸ್ಸ ಎಲೆಮಟ್ಟಿ ಪರಸಣ್ಣ ಅವರು ಗೈರು ಹಾಜರಾಗಿದ್ದರು.
ಮತ ಚಲಾಯಿಸಿದ 20 ಮತಗಳಲ್ಲಿ 16ನೇವಾರ್ಡನ ಸದಸ್ಯೆ ಕೆ.ಲಕ್ಷ್ಮಿಮಾರುತಿ ಮತ್ತು 2ನೇವಾರ್ಡ ಸದಸ್ಯ ವಡ್ಡರ ಮಂಜುನಾಥ ಪರವಾಗಿ 12 ಮತಗಳು ಪಡೆಯುವ ಮೂಲಕ ಅಧ್ಯಕ್ಷೆಯಾಗಿ 16ನೇವಾರ್ಡನ ಸದಸ್ಯೆ ಕೆ.ಲಕ್ಷ್ಮಿಮಾರುತಿ ಮತ್ತು ಉಪಾಧ್ಯಕ್ಷರಾಗಿ 2ನೇವಾರ್ಡ ಸದಸ್ಯ ವಡ್ಡರ ಮಂಜುನಾಥ ಆಯ್ಕೆಯಾಗಿ ಜಯಶೀಲರಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಾಗೂ ತಹಶೀಲ್ದಾರ್ ಬಿ.ಎಸ್.ಕೂಡಲಗಿ ಘೋಷಿಸಿದರು.
ಇದೆ ಸಂದರ್ಭದಲ್ಲಿ ಪ.ಪಂ.ಪ್ರಭಾರಿ ಮುಖ್ಯಾಧಿಕಾರಿ ಬಿ.ಅಬ್ದುಲ್ ರೆಹಮಾನ್, ಉಪತಹಶೀಲ್ದಾರ್ ಉಮಾಮಹೇಶ, ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರ ದೊರೆ ಇದ್ದರು.