ತೆಕ್ಕಲಕೋಟೆ ಪಟ್ಟಣದಲ್ಲಿ ವಿಶೇಷ ಬೋಧನೆಯ ಮೂಲಕ ರಂಜಾನ್ ಹಬ್ಬ ಆಚರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.22: ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಮುಸ್ಲಿಂ ಬಂದವರು ಎಲ್ಲಾ ಸೇರಿ ಸಂತೋಷ‌ ಸಡಗರ ದಿಂದ ರಂಜಾನ್ ಹಬ್ಬವನ್ನು ಆಚರಿಸಿದರು.
ಪಟ್ಟಣದ ಎಲ್ಲಾ ಮುಸ್ಲಿಂ ಸಮುದಾಯದವರು ಸೇರಿ ಈ ರಂಜಾನ್ ದಿನದಂದು ಒಬ್ಬರನ್ನು ಒಬ್ಬರು ಹಪ್ಪಿಕೊಂಡು ದ್ವೇಷವನ್ನು ಮರೆತು, ದಾನವನ್ನು ಮಾಡಿ ಸಂತೋಷ ದಿಂದ ಸಿಹಿ ಹಂಚಿ ಸಡಗರದಿಂದ ಆಚರಿಸಲಾಯಿತು.
ಮುಸ್ಲಿಂ ಸಮುದಾಯದ ಪವಿತ್ರ ಮಾಸವಾದ ರಂಜಾನ್  ಈ ಒಂದುತಿಂಗಳಲ್ಲಿ ಮುಸ್ಲಿಂ ಸಮುದಾಯದ ಜನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅಲ್ಲಾನನ್ನು ಪೂಜಿಸುತ್ತಾರೆ. ಈ ರಂಜಾನ್ ತಿಂಗಳಲ್ಲಿ  29-30 ದಿನಗಳವರೆಗೆ ಉಪವಾಸವನ್ನು ಇಡಲಾಗುತ್ತದೆ. ತದನಂತರ ಈದ್-ಉಲ್-ಫಿತರ್ ಆಚರಣೆಯೊಂದಿಗೆ ರಂಜಾನ್ ಕೊನೆಗೊಳ್ಳುತ್ತದೆ.
ಶಿಸ್ತುಬದ್ಧ ಉಪವಾಸಾನುಷ್ಠಾನದ ಪವಿತ್ರ ತಿಂಗಳಾದ ರಂಜಾನ್‌ ಇಸ್ಲಾಮೀ ಇತಿಹಾಸದ ಅನೇಕ ಮಹತ್ವಪೂರ್ಣ ಘಟನೆಗಳ ಅಪೂರ್ವ ಸಂಗಮವೂ ಆಗಿದೆ. ಈ ಪಾವನ ಮಾಸಕ್ಕೆ ವಿದಾಯ ಕೋರುವ ಈದುಲ್‌ ಫಿತ್ರ, ರಮ್ಜಾನ್‌ ಸಾರುವ ಉನ್ನತ ಆದರ್ಶಗಳ ಸವಿನೆನಪಿಗಾಗಿ ವಿಶ್ವಾದ್ಯಂತ ಆಚರಿಸಲ್ಪಡುತ್ತದೆ. ಉಪವಾಸ ವ್ರತವು ಸೃಷ್ಟಿಸುವ ಮಾನಸಿಕ ಶುಭ್ರತೆ ಮತ್ತು ಆತ್ಮಸಂಯಮವನ್ನು ಕೇವಲ ಅದೊಂದು ಮಾಸಕ್ಕೆ ಮಾತ್ರ ಸೀಮಿತಗೊಳಿಸದೆ ವರ್ಷದುದ್ದಕ್ಕೂ ಕಾಯ್ದುಕೊಳ್ಳಬೇಕೆಂಬ ಆದರ್ಶದೊಂದಿಗೆ ಈದುಲ್‌ ಫಿತ್ರ ಆಚರಿಸಲ್ಪಡುತ್ತದೆ ಎಂದು ತೆಕ್ಕಲಕೋಟೆಯ ಮನ್ಸೂರ್ ಮಸೀದಿಯ ಇಮಾಮ್(ಹಜರತ್) ಮಸ್ತೂರ್ ವಲಿ  ಭೋದನೆಯನ್ನು ಮಾಡಿದರು.