ತೆಂಗು ಬೆಳೆಗಾರರ ಸಮಸ್ಯೆ ಬಗೆಹರಿಸಲು  ರೈತ ಸಂಘದಿಂದ‌ ಮನವಿ

ಸಂಜೆವಾಣಿ ವಾರ್ತೆ

ದಾವಣಗೆರೆ ಆ.೭: ತೆಂಗು ಬೆಳೆಗಾರರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಲೋಕಸಭೆಯಲ್ಲಿ ಧ್ವನಿಯತ್ತಬೇಕು ಮತ್ತು ತೆಂಗು ಬೆಳೆಗಾರರಿಗೆ ನ್ಯಾಯವದಗಿಸ ಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾ ಉಪಾಧ್ಯಕ್ಷರಾದ ಹೊನ್ನೂರು ಮುನಿಯಪ್ಪನವರ ನೇತೃತ್ವದಲ್ಲಿ  ಪ್ರತಿಭಟನೆಯನ್ನು ನಡೆಸಿ ನಂತರ ಸಂಸದರ ಕಚೇರಿಗೆ ತೆರಳಿ ಸಂಸದರಾದ ಡಾ. ಜಿ ಎಂ ಸಿದ್ದೇಶ್ವರ್ ಗೆ ಮನವಿ ಸಲ್ಲಿಸಲಾಯಿತು.ಈ ವೇಳೆಜಿಲ್ಲಾಧ್ಯಕ್ಷರಾದ ಪಿ.ಪಿ ಮರುಳಸಿದ್ದಯ್ಯ ಮಾತನಾಡಿ, ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿರುವ ಹಾಗೂ ತೆಂಗಿನ ಬೆಳೆಗಾರರು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಮಸ್ಯೆಯ ಕುರಿತು ರಾಜ್ಯದ ತೆಂಗು ಬೆಳೆಗಾರರ ಕೋರ್ ಕಮಿಟಿ ಮತ್ತು ಸಮನ್ವಯ ಸಮಿತಿ ಸಭೆ ಸೇರಿ ತೀರ್ಮಾನಿಸಿ ರಾಜ್ಯಾದ್ಯಂತ ಎಲ್ಲಾ ಲೋಕಸಭಾ ಸದಸ್ಯರ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.ಈ ವೇಳೆ  ಜಿಲ್ಲಾ ಕಾರ್ಯಾಧ್ಯಕ್ಷರಾದ ಹೊನ್ನೂರು ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಶಾಲೆ ಬಸವರಾಜ್,ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯ್ಕ್, ಕಣಿವೇಬಿಳಚಿ ಅಣ್ಣಪ್ಪ,  ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಅಭಿಲಾಷ್ ಎಂ, ತಾಲೂಕು ಹಸಿರು ಸೇನೆ ಅಧ್ಯಕ್ಷ ಬಟ್ಲಕಟ್ಟೆ ಪಾಲಕ್ಷಿ, ಖಜಾಂಚಿ ಮಲ್ಲೇಶಪ್ಪ, ಕ್ಯಾತನಹಳ್ಳಿ ನಾಗರಾಜಪ್ಪ, ಮಾಯಕೊಂಡ ಬೀರಪ್ಪ, ಮಲ್ಲೇನಹಳ್ಳಿ ನಾಗರಾಜ್, ಬಳ್ಳಾಪುರ ಹನುಮಂತ, ರೇವಣ್ಣ, ಪರಮೇಶಪ್ಪ, ತಿಪ್ಪಣ್ಣ, ರಾಕೇಶ, ಎಸ್ ಟಿ ಪರಮೇಶಪ್ಪ, ಕರಿಬಸಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಮತ್ತು ರೈತ ಮುಖಂಡರು ಹಾಜರಿದ್ದರು.