ತೆಂಗಿನ ತೋಟದಲ್ಲಿ ನಾಡ ಬಂದೂಕು ಜಪ್ತಿ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ ಮಾ 4 :- ತಾಲೂಕಿನ ಇಕ್ಕಡಹಳ್ಳಿ ಗ್ರಾಮದ ತೋಟದ ಮನೆಯ ನೀರಿನ ಪಂಪ್ ಹೌಸ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 154 ಸೆಂ. ಮೀಟರ್ ಉದ್ದದ ಒಂಟಿ ನಳಿಕೆಯ ಒಂದು ನಾಡ ಬಂದೂಕನ್ನು ಕೊಳ್ಳೇಗಾಲ ಡಿ.ವೈ. ಎಸ್. ಪಿ ಯ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೆÇಲೀಸರು ಗುರುವಾರ ಸಂಜೆ ಆಕ್ರಮ ಒಂಟಿನಳಿಕೆ ನಾಡ ಬಂದೂಕವನ್ನು ಜಪ್ತಿ ಮಾಡಿದ್ದಾರೆ.
ಇಕ್ಕಡಹಳ್ಳಿ ಗ್ರಾಮದ ನಿವಾಸಿ ಸಿದ್ದಪ್ಪ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಈತ ವ್ಯವಸಾಯ ಮಾಡುತ್ತಿದ್ದ ತನಗೆ ಸೇರಿದ ತೆಂಗಿನ ತೋಟದಲ್ಲಿ ನಾಡ ಬಂದೂಕು ಜತೆಗೆ ಕಪ್ಪು ಬಣ್ಣದಿಂದ ಕೂಡಿದ ಗೌನ್ ಪೌಡರ್, ಸಿಲಿಂಡರ್ ಆಕಾರದ 10 ಬುಲೇಟ್ ಗಳು , ಬೇರಿಂಗ್ ಬಾಲ್ಸ್ ಗಳು, ಸಣ್ಣಗಾತ್ರದ 12 ಸೀಸದ ಗುಂಡುಗಳು 180 ಬಾಲ್ಸಗಳು ಹಾಗೂ ಇತರ ಕಬ್ಬಿಣದ ಕಟಿಂಗ್ ಪ್ಲೇರ್ ಗಳು ಪೆÇಲೀಸರಿಗೆ ಪತ್ತೆಯಾಗಿದೆ. ಆಕ್ರಮವಾಗಿ ಇಟ್ಟಿಕೊಂಡಿದ ವಸ್ತುಗಳನ್ನು ಜಪ್ತಿ ಮಾಡಿದರು. ಪೆÇಲೀಸರು ತೆಂಗಿನ ತೋಟಕ್ಕೆ ಬರುವುದನ್ನು ಗಮನಿಸಿದನಾಡ ಬಂದೂಕು ದಾಸ್ತಾನು ಮಾಡಿದ್ದ ಆರೋಪಿ ಸಿದ್ದಪ್ಪ ಸ್ಥಳದಿಂದ ಪರಾರಿಯಾಗಿದ್ದು, ಈತನ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಸಬ್ ಇನ್ಸೆಕ್ಟರ್ ಗಣೇಶ್ ಪ್ರಸಾದ್ ಸಸ್ತಶ್ರ ಕಾಯಿದೆ ಸೆಕ್ಷನ್ 3 ಮತ್ತು 25 ರಂತೆ ಪ್ರಕರಣ ಪ್ರಕರಣ ದಾಖಲಿಸಿ, ಮುಂದಿನ ಬಗ್ಗೆ ತನಿಖೆಗೆ ಕ್ರಮ ಕೈಗೊಂಡಿದ್ದಾರೆ.