ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಮೈಸೂರು: ಜ.04: ನೆಲಜಿ ಫಾರ್ಮರ್ಸ್ ಡೆವಲಪ್‍ಮೆಂಟ್ & ರಿಕ್ರಿಯೇಷನ್ಸ್ ಅಸೋಷಿಯೇಷನ್ ಇವರ , ವತಿಯಿಂದ 2 ನೇ ವರ್ಷದ ರಾಜ್ಯ ಮಟ್ಟದ ಮುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಜನವರಿ 09 ರಂದುನೆಲಜಿ ಅಂಬಲದಲ್ಲಿ ಆಯೋಜಿಸಲಾಗಿದೆ ಎಂದು ಮನ್ದಿರಾ ಕೆ ನಂಜಪ್ಪ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಸ್ಪರ್ಧೆಯು 0.22 ಮತ್ತು 12 ನೇ ಬೋರ್ ಕೋವಿಯನ್ನು ಒಳಗೊಂಡಿರುತ್ತದೆ .
ಸ್ಪರ್ಧೆಯ ಉದ್ಘಾಟನೆಯನ್ನು ನೆಲ್ಲಮಕ್ಕಡ ಶರತ್ ಸೋಮಣ್ಣ ಅಮ್ಮತ್ತಿ , ಪಾಲೆಕಂಡ ಸಾಯಿ ಮತ್ತು ಮಾಚೆಟ್ಟಿರ ನವೀನ್ ರವರು ಉದ್ಘಾಟಿಸಲಿದ್ದಾರೆ . ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಚೌಂಡೀರ ಪಿ . ಪೂಣಚ್ಚ, ಚೀಯಕಪೂವಂಡ ಕೆ ಬೋಪಣ್ಣ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು,
ಸುದ್ದಿಗೋಷ್ಟಿಯಲ್ಲಿ ಉಮೇಶ್ ಉತ್ತಪ್ಪ , ದೇವಯ್ಯ , ಮಾಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.