ತೆಂಗಿನಮರಕ್ಕೆ ಬಾಧೆ: ಸಂಕಷ್ಟದಲ್ಲಿ ರೈತ

ಲಕ್ಷ್ಮೇಶ್ವರ, ಜೂ 6: ತಗ್ಗು ದಿಣ್ಣೆಗಳಿಂದ ಕೂಡಿದ್ದ ಹಾಳಾದ ಜಮೀನನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಮೀನು ರೂಪಕ್ಕೆ ತಂದು ಅಲ್ಲಿಯೇ ನೂರಾರು ತೆಂಗಿನ ಸಸಿಗಳನ್ನು ನೆಡುವ ಮೂಲಕ ಯುವ ರೈತನೋರ್ವ ಈಗ ಅದೇ ಜಮೀನಿನಲ್ಲಿ ಸಾಕಷ್ಟು ತೆಂಗಿನಕಾಯಿಗಳನ್ನು ಬೆಳೆಯುತ್ತಿದ್ದರು ಗಿಡಗಳಿಗೆ ಬಾಧಿಸುತ್ತಿರುವ ಕಾಯಿ ಉದುರುವಿಕೆ ರೈತನನ್ನು ಚಿಂತಾಕ್ರಾಂತನನ್ನಾಗಿ ಮಾಡಿದೆ.
ತಾಲೂಕಿನ ಹುಲ್ಲೂರು ಗ್ರಾಮದ ಎಂ.ಎಂ ಗಾಡುಗೋಳಿ ಅವರು ಪರಿಶ್ರಮಪಟ್ಟು ಆಂಧ್ರ ಪ್ರದೇಶದಿಂದ 400ಕ್ಕೂ ಹೆಚ್ಚು ಸಸಿಗಳನ್ನು ಪ್ರತಿ ಗಿಡಕ್ಕೆ 250 ರೂಗಳಂತೆ ಖರೀದಿ ಮಾಡಿ 5 ಎಕರೆ 20 ಗುಂಟೆಯಲ್ಲಿ ಕಲ್ಪ ವೃಕ್ಷ ಬೆಳೆದ್ದಿದ್ದು, ಎರಡೂ ವರ್ಷಗಳ ಕಾಲ ಉತ್ತಮ ಇಳುವರಿ ನೀಡಿದ್ದ ಟೆಂಗಿನಗಿಡಗಳಲ್ಲಿನ ಸಿಂಗಾರನಲ್ಲಿ ಹೂವು, ಸಣ್ಣ ಕಾಯಿ ಆಗಿ ( ಹೀಚು ) ಉದುರುತ್ತಿರುವುದರಿಂದ ಇಳುವರಿ ಕುಂಠಿತಗೊಂಡಿದೆ.
ಸಸಿಗಳನ್ನು ನಾಟಿ ಮಾಡುವ ಪೂರ್ವದಲ್ಲಿಯೇ ಮಣ್ಣು ಮತ್ತು ನೀರನ್ನು ಪರೀಕ್ಷಿಸಿ ನಾಟಿ ಮಾಡಲಾಗಿದ್ದರೂ ಈಗ ಉದುರುತ್ತಿರುವುದು ಸಂಕಷ್ಟಕ್ಕೆ ಈಡು ಮಾಡಲಾಗಿದೆ. ಈ ಕುರಿತು ರೈತ ಬೇಸರ ವ್ಯಕ್ತಪಡಿಸಿ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿಲ್ಲ ಎಂದು ಹೇಳಿದರು.
ಈ ಕುರಿತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಕುಂಬಾರ ಅವರು ಟೆಂಗಿನಗಿಡಕ್ಕೆ ಬಾದಿಸಿರುವ ಕಾಯಿ ಉದುರುವುದಕ್ಕೆ ರಂಜಕ್ಕಾ, ಪೆÇೀಟಾಷಿಯಂ, ಪೆÇೀರ್ಡಾಫ್, ಜಿಂಕ್ ಸಲಾಯಿಡ, ಫೇರಾ ಸಲ್ಫಾಯಿಟ್, ಬೊರೋನ್ ಮತ್ತಿತರ ಮಿಶ್ರಣಗಳನ್ನು ತಡೆಗಟ್ಟಕವ ಮೂಲಕ ತಡೆಗಟ್ಟಬಹುದು.