
’ತೂ ಜೂಠಿ ಮೈಂ ಮಕ್ಕರ್’ ಫಿಲ್ಮ್ ನ ಯಶಸ್ಸಿಗೆ ಪತಿ ರಣಬೀರ್ ಕಪೂರ್ ಅವರನ್ನು ಅಭಿನಂದಿಸಿದ ಆಲಿಯಾ ಭಟ್ಟ್, ಶ್ರದ್ಧಾ ಕಪೂರ್ ರನ್ನು ’ಮೋಹಕವಾದ ಸುಳ್ಳುಗಾರ್ತಿ’ ಎಂದು ಕರೆದಿದ್ದಾರೆ.
ತೂ ಜೂಠಿ ಮೈಂ ಮಕ್ಕರ್ ಫಿಲ್ಮ್ ನ ಬಗ್ಗೆ ಆಲಿಯಾ ಭಟ್ಟ್ ಅವರು ರಣಬೀರ್ ಕಪೂರ್ ರಿಗೆ ಅಭಿನಂದನೆ ನೀಡಿದ್ದಾರೆ. ರಣಬೀರ್ ಮತ್ತು ಶ್ರದ್ಧಾ ಕಪೂರ್ ತಮ್ಮ ’ತೂ ಜೂಠಿ ಮೈಂ ಮಕ್ಕರ್’ ಫಿಲ್ಮ್ ನ ಮೂಲಕ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
ರಣಬೀರ್ ಮತ್ತು ಶ್ರದ್ಧಾ ರ ’ತೂ ಜೂಠಿ ಮೈಂ ಮಕ್ಕರ್’ ಫಿಲ್ಮ್ ನ ಅದ್ಭುತ ಬಾಕ್ಸ್ ಆಫೀಸ್ ಕಲೆಕ್ಷನ್‌ನಿಂದಾಗಿ ಈ ದಿನಗಳಲ್ಲಿ ಪ್ರಚಾರದಲ್ಲಿದ್ದಾರೆ. ಫಿಲ್ಮ್ ನ ಯಶಸ್ಸಿಗೆ ಎಲ್ಲರೂ ಇವರಿಬ್ಬರನ್ನು ಹೊಗಳುತ್ತಿದ್ದಾರೆ.

ಈ ನಡುವೆ, ಖ್ಯಾತ ನಟಿ ಆಲಿಯಾ ಭಟ್ಟ್ ಕೂಡ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರನ್ನು ’ತು ಜೂಠಿ ಮೈಂ ಮಕ್ಕರ್’ ಫಿಲ್ಮ್ ನ ಉತ್ತಮ ಬಾಕ್ಸ್ ಆಫೀಸ್ ಪ್ರದರ್ಶನಕ್ಕಾಗಿ ಹೊಗಳಿದ್ದಾರೆ.
’ತೂ ಜೂಠಿ ಮೈಂ ಮಕ್ಕರ್’ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ೫೩ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದಕ್ಕಾಗಿ
ಆಲಿಯಾ ಅವರು ರಣಬೀರ್ ಮತ್ತು ಶ್ರದ್ಧಾ ರನ್ನು ಅಭಿನಂದಿಸಿದ್ದಾರೆ.
ತನ್ನ ಚಿತ್ರವನ್ನು ಪೋಸ್ಟ್ ಮಾಡಿದ ಆಲಿಯಾ, ಸಬ್ಸೆ ಪ್ಯಾರಿ ಜೂಠಿ’ ಮತ್ತು ’ಸಬ್ಸೆ ಪ್ಯಾರಿ ಮಕ್ಕರ್’ ಅವರೊಂದಿಗಿನ ಚಲನಚಿತ್ರದಲ್ಲಿ “ಲವ್ ಲಿ ಸಮಯ” ….ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ನಂತರ ಅವರು ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ರನ್ನು ಅಭಿನಂದಿಸಿದರು.
ಇದೀಗ ಆಲಿಯಾ ಅವರ ಈ ಪೋಸ್ಟ್ ನ ನಂತರ ಅಭಿಮಾನಿಗಳ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಕೆಲವರು ಆಲಿಯಾರನ್ನು ಮುದ್ದಾಗಿ ಕರೆದರೆ, ಇನ್ನು ಕೆಲವರು ಲವ್ಲಿ ಎನ್ನುತ್ತಿದ್ದಾರೆ. ಎಲ್ಲಾ ಅಭಿಮಾನಿಗಳು ಆಲಿಯಾರ ಮೇಲೆ ತಮ್ಮ ಪ್ರೀತಿಯನ್ನು ಸುರಿಸುತ್ತಿದ್ದಾರೆ.
ಲವ್ ರಂಜನ್ ನಿರ್ದೇಶನದ ತೂ ಜೂಠಿ ಮೈಂ ಮಕ್ಕರ್ ಹೋಳಿ ಸಮಯದಲ್ಲಿ ಬಿಡುಗಡೆಯಾದ ಮೊದಲ ದಿನವೇ ೧೫ ಕೋಟಿ ರೂ. ಗಳಿಸಿದೆ. ನಂತರ ಅದರ ಗಳಿಕೆಯು ವಾರದಲ್ಲಿ ನಿಧಾನವಾಗಿತ್ತು ಆದರೆ ಶನಿವಾರ ಅದು ೧೬.೬ ಕೋಟಿ ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಫಿಲ್ಮ್ ಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಫಿಲ್ಮ್ ಬಿಡುಗಡೆಗೂ ಮುನ್ನ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಪ್ರತ್ಯೇಕ ಪ್ರಚಾರಗಳನ್ನು ಮಾಡಿದ್ದರು. ಸಂದರ್ಶನವೊಂದರಲ್ಲಿ, “ಶ್ರದ್ಧಾ ಜೊತೆಗಿನ ಫೋಟೋವನ್ನು ಪ್ರಚಾರ ಮಾಡದಂತೆ ಆಲಿಯಾ ಕೇಳಿಕೊಂಡಿದ್ದಾರಾ ?”ಎಂದು ರಣಬೀರ್ ಅವರನ್ನು ಕೇಳಲಾಯಿತು.
ಇದಕ್ಕೆ ನಟ ನಗುತ್ತಾ ಉತ್ತರಿಸಿದರು, “ನೀವು ವದಂತಿಗಳನ್ನು ಹರಡುತ್ತಿದ್ದೀರಿ, ಆಲಿಯಾ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ, ನೀವು ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ. ನನ್ನ ಜೀವನದಲ್ಲಿ ಈಗ ಯಾವುದೇ ವಿವಾದಗಳಿಲ್ಲ” ಎಂದಿದ್ದರು. ಆಲಿಯಾ ಇತ್ತೀಚೆಗಷ್ಟೇ ಹೋಳಿಗೂ ಮುನ್ನ ಮುಂಬೈಗೆ ಮರಳಿದ್ದರು. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಫಿಲ್ಮ್ ನ ಚಿತ್ರೀಕರಣಕ್ಕಾಗಿ ಅವರು ಕಾಶ್ಮೀರದಲ್ಲಿದ್ದರು. ಅವರ ಮಗಳು ರಾಹಾ, ತಾಯಿ ಸೋನಿ ರಜ್ದಾನ್ ಮತ್ತು ಸಹೋದರಿ ಶಾಹೀನ್ ಭಟ್ಟ್ ಕೂಡಾ ಇದ್ದರು. ಕರಣ್ ಜೋಹರ್ ನಿರ್ದೇಶನದ ಈ ಫಿಲ್ಮ್ ನಲ್ಲಿ ರಣವೀರ್ ಸಿಂಗ್, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ನಟಿಸಿದ್ದಾರೆ. ಇದು ಈ ವರ್ಷ ಜುಲೈನಲ್ಲಿ ಬಿಡುಗಡೆಯಾಗಲಿದೆ.
ನಿಮ್ರತ ಕೌರ್ ಜನ್ಮದಿನ: ಬಾಲಿವುಡ್ ಮೊದಲೇ ಅವರು ಹಾಲಿವುಡ್ ಪ್ರವೇಶಿಸಿದ್ದರು
ಬಾಲಿವುಡ್ ಗೂ ಮೊದಲು ಹಾಲಿವುಡ್ ಗೆ ಎಂಟ್ರಿ ಕೊಟ್ಟ ನಿಮ್ರತ ಕೌರ್ ಬಾಲಿವುಡ್ ನ ಖ್ಯಾತ ನಟಿ. ನಿಮ್ರತ ಕೌರ್ ನಿನ್ನೆ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರು ೧೩ ಮಾರ್ಚ್ ೧೯೮೨ ರಂದು ರಾಜಸ್ತಾನದ ಪಿಲಾನಿಯಲ್ಲಿ ಜನಿಸಿದ್ದರು.
ನಿಮ್ರತ ಸೇನಾ ಕುಟುಂಬಕ್ಕೆ ಸೇರಿದವರು. ‘ಲಂಚ್ ಬಾಕ್ಸ್’, ‘ಏರ್ ಲಿಫ್ಟ್’ ಫಿಲ್ಮ್ ಗಳ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿದವರು ನಿಮ್ರತ ಕೌರ್. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳು ಇಲ್ಲಿವೆ.

ನಿಮ್ರತ ತಂದೆ ಸೇನೆಯಲ್ಲಿದ್ದರು:
ನಿಮ್ರತ ಕೌರ್ ಅವರ ತಂದೆ ಸೇನೆಯಲ್ಲಿದ್ದರು. ಅವರ ತಂದೆ ೧೯೯೪ ರಲ್ಲಿ ಉಗ್ರರ ಎನ್‌ಕೌಂಟರ್‌ನಲ್ಲಿ ಹುತಾತ್ಮರಾಗಿದ್ದರು. ಒಂದೆಡೆ ನಿಮ್ರತ ನಟನೆಯತ್ತ ಒಲವು ತೋರಿದರೆ ಮತ್ತೊಂದೆಡೆ ತಂಗಿ ರುಬಿನಾ ಮನಶ್ಶಾಸ್ತ್ರಜ್ಞೆ. ನಿಮ್ರತ ದೆಹಲಿಯಲ್ಲಿ ಓದು ಮುಗಿಸಿದ್ದಾರೆ. ಲೇಡಿ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಶಿಕ್ಷಣ ಮುಗಿಸಿದ ನಂತರ ಅವರು ಮುಂಬೈಗೆ ತೆರಳಿದರು.

೩೦ ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದರು:
ನಿಜವಾಗಿ ಹೇಳಬೇಕೆಂದರೆ ಕಾಲೇಜು ದಿನಗಳಿಂದಲೂ ನಿಮ್ರತ ಗೆ ನಟನೆಯ ಬಗ್ಗೆ ಒಲವು ಇತ್ತು, ಹಾಗಾಗಿ ಕಾಲೇಜಿನಲ್ಲಿದ್ದಾಗಲೇ ಅನೇಕ ಥಿಯೇಟರ್ ಶೋಗಳನ್ನು ಮಾಡುತ್ತಿದ್ದರು. ಇದಾದ ನಂತರ ಮುಂಬೈಗೆ ಬಂದ ಆಕೆ ಇಲ್ಲಿ ಪ್ರಿಂಟ್ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ೩೦ ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದರು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಅಷ್ಟೇ ಅಲ್ಲ, ಬಾಲಿವುಡ್‌ಗೆ ಕಾಲಿಡುವ ಮೊದಲೇ ಹಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.
ಹಾಲಿವುಡ್ ಪ್ರವೇಶಿಸಿದವರು (ಒನ್ ನೈಟ್ ವಿತ್ ದಿ ಕಿಂಗ್):
ನಿಮ್ರತ ಅವರ ಮೊದಲ ಫಿಲ್ಮ್ ‘ಒನ್ ನೈಟ್ ವಿತ್ ದಿ ಕಿಂಗ್’. ಇದಾದ ನಂತರ ೨೦೧೨ರಲ್ಲಿ ’ಪೆಡ್ಲರ್ಸ್’ ಫಿಲ್ಮ್ ನ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇರ್ಫಾನ್ ಖಾನ್ ಅಭಿನಯದ ’ಲಂಚ್ ಬಾಕ್ಸ್’ ದಿಂದ ನಿಜವಾದ ಮನ್ನಣೆ ಪಡೆದಿದ್ದರೂ ಈ ಫಿಲ್ಮ್ ನ್ನು ಅನುರಾಗ್ ಕಶ್ಯಪ್ ನಿರ್ಮಿಸಿದ್ದಾರೆ. ಈ ಒಂದು ಫಿಲ್ಮ್ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು.
’ಹ್ಯಾಪಿ ಟೀಚರ್ಸ್ ಡೇ’ (ಹ್ಯಾಪಿ ಟೀಚರ್ಸ್ ಡೇ ಫಿಲ್ಮ್) ಫಿಲ್ಮ್ ನಲ್ಲಿಯೂ ಕಾಣಿಸಿ ಕೊಳ್ಳಲಿದ್ದಾರೆ:
ಅಷ್ಟೇ ಅಲ್ಲ, ೨೦೧೬ರಲ್ಲಿ ನಿಮ್ರತ ಅಕ್ಷಯ್ ಕುಮಾರ್ ಅಭಿನಯದ ’ಏರ್‌ಲಿಫ್ಟ್’ ಸಿನಿಮಾ ಮಾಡಿದ್ದರು. ೬ ವರ್ಷಗಳ ನಂತರ, ೨೦೨೨ ರಲ್ಲಿ, ನಿಮ್ರತ ಯಾಮಿ ಗೌತಮ್ ಮತ್ತು ಅಭಿಷೇಕ್ ಬಚ್ಚನ್ ಅವರ ’ದಸ್ವಿನ್’ ಫಿಲ್ಮ್ ದೊಂದಿಗೆ ಪುನರಾಗಮನ ಮಾಡಿದರು. ಮತ್ತೊಂದೆಡೆ, ಮುಂಬರುವ ಯೋಜನೆಗಳ ಕುರಿತು ಮಾತನಾಡುತ್ತಾ, ನಿಮ್ರತ ಅವರ ಮತ್ತೊಂದು ಫಿಲ್ಮ್ ’ಹ್ಯಾಪಿ ಟೀಚರ್ಸ್ ಡೇ’ ೨೦೨೩ ರ ಶಿಕ್ಷಕರ ದಿನದ ಸಂದರ್ಭದಲ್ಲಿ ಬಿಡುಗಡೆ ಆಗಲಿದೆಯಂತೆ.