ತೂಲಹಳ್ಳಿಯಲ್ಲಿ ಬಿತ್ತನೆ ಬೀಜ ಮಾರಾಟ ಕೇಂದ್ರ ಆರಂಭ

ಕೊಟ್ಟೂರು ಜೂ.04 ತಾಲೂಕಿನಲ್ಲಿ ವರುಣನ ಕೃಪೆಯಿಂದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಯು ಅತ್ಯಂತ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಕೋವಿಡ್-19ರ 2ನೇ ಅಲೆಯು ಭೀಕರತೆಯ ಹೆಚ್ಚಾಗಿರುವುದರಿಂದ ಗ್ರಾಮಾಂತರ ಪ್ರದೇಶಗಳ ರೈತಾಪಿ ಜನರು ಹೊಬಳಿ ಮಟ್ಟದಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿನೀಡಿ, ಸರ್ಕಾರದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಕೊಳ್ಳಲು ಅಡಚಣೆಯಾಗಬಾರದೆಂಬ ಉದ್ದೆಶದಿಂದ , ತೂಲಹಳ್ಳಿ & ನಾಗರಕಟ್ಟೆ ಗ್ರಾ.ಪಂ ವ್ಯಾಪ್ತಿಯಲ್ಲಿನ ಗ್ರಾಮಗಳ ರೈತರಿಗೆ ಅನುಕೂಲವಾಗುವಂತೆ ತೂಲಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಳಿಗೆಯಲ್ಲಿ ಕೃಷಿ ಇಲಾಖೆಯು ತಾತ್ಕಾಲಿಕವಾಗಿ ಹೆಚ್ಚುವರಿ ಬೀಜ ಮಾರಾಟ ಕೇಂದ್ರವು ವನ ನಿನ್ನೆಯಿಂದ ಕಾರ್ಯಾರಂಭ ಮಾಡಿದೆ.ಈ ಸೌಲಭ್ಯವನ್ನು ತೂಲಹಳ್ಳಿ ಹಾಗೂ ಸುತ್ತಮುತ್ತಲಿನ ಭಾಗದ ರೈತ ಸಮುದಾಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ, ರೈತರಿಗೆ ಅಗತ್ಯವಾದ ಬೀಜಗಳನ್ನು ಸಮರ್ಪಕವಾಗಿ ಪೂರೈಸಲು ಇಲಾಖೆಯು ಅಗತ್ಯ ಕ್ರಮಗಳನ್ನು ಈಗಾಗಲೆ ಕ್ರಮಕೈಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ವಾಮದೇವ ಕೊಳ್ಳಿ ತಿಳಿಸಿದರು.
ಹೆಚ್ಚುವರಿ ಬೀಜ ಮಾರಾಟ ಕೇಂದ್ರವನ್ನು ಕೋರೊನಾ ಲಾಕ್ಡೌನ್ ಸಮಯದಲ್ಲಿ ತೆರೆದಿದ್ದರಿಂದ ನಮಗೆ ಹೆಚ್ಚು ಅನುಕೂಲವಾಗಿದೆ ಎಂದು ತೂಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
.ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಯಾದ ಶ್ಯಾಮ್ ಸುಂದರ್ ಸಹಕಾರ ಸಂಘದ ಅಧ್ಯಕ್ಷರಾದ .ಎಂ.ವೀರೇಶ್, ಮುಖ್ಯಕಾರ್ಯನಿರ್ಹಕರಾದ ಶ್ರೀ ಪ್ರದೀಪ್ ಎಂ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳಾದ ತಿಮ್ಮಣ್ಣ, ಪಿ.ಕೊಟ್ರೇಶ್ ಗ್ರಾಮದ ರೈತ ಮುಖಂಡರು ಹಾಜರಿದ್ದರು.