ತೂಗುದೀಪ ಶ್ರೀನಿವಾಸರ 78ನೇ ಜಯಂತಿ

ಮೈಸೂರು:ಏ:17:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ ಲಲಿತ ಮಹಲ್ ರಸ್ತೆಯಲ್ಲಿರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ನಟ ಭಯಂಕರ ತೂಗುದೀಪ್ ಶ್ರೀನಿವಾಸ್ ರವರ 78ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ನಂತರ ಮಾತನಾಡಿದ ಪರಿಸರ ಜಾಗೃತಿ ಅಧ್ಯಕ್ಷರಾದ ಮಹೇಂದ್ರಸಿಂಗ್ ಕಾಳಪ್ಪ ಬನ್ನೂರು, ಕನ್ನಡ ಸಿನಿಮಾರಂಗದಲ್ಲಿ ಖಳನಟನಿಗೂ ಬೇರೆಯದ್ದೇ ಗತ್ತು-ಗಾಂಭೀರ್ಯ ಇದೆ ಎನ್ನುವುದನ್ನ ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ತೋರಿಸಿಕೊಟ್ಟ ನಟ ತೂಗುದೀಪ ಶ್ರೀನಿವಾಸ್.
ಕಲಾವಿದನಿಗೆ ಸಾವಿಲ್ಲ. ಸಾವು ಅವರ ದೇಹಕ್ಕೆ ಮಾತ್ರ ಎನ್ನುವ ಮಾತಿದೆ. ಅಂತೆಯೇ ತೂಗುದೀಪ ಶ್ರೀನಿವಾಸ್ ಅಪಾರ ನಮ್ಮಂತಹ ಸಾವಿರಾರು ಅಭಿಮಾನಿಗಳನ್ನ ಅಗಲಿದ್ದರು ಕೂಡ ಇಂದಿಗೂ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಇಂದಿಗೂ ಅವರು ಅಜರಾಮರ ,ಹಾಗೆಯೇ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದಂತಹ ಮೇರು ಕಲಾವಿದರು ಅಂಥವರ ಪ್ರತಿಮೆಯನ್ನು ಲಲಿತಮಹಲ್ ರಸ್ತೆಯಲ್ಲಿರುವ ಅವರ ಹೆಸರಿನಲ್ಲಿರುವ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ ಅಂಥ ಮೇರು ನಟನಿಗೆ ನಗರಪಾಲಿಕೆ ಗೌರವ ಕೊಡಬೇಕೆಂದು ಇಲ್ಲವಾದಲ್ಲಿ ಅಭಿಮಾನಿಗಳೇ ಅವರ ಸ್ವಂತ ಹಣದಿಂದಲೇ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಹೇಂದ್ರ ಸಿಂಗ್ ಕಾಳಪ್ಪ ಬನ್ನೂರು, ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಲೋಹಿತ್, ಹರೀಶ್ ನಾಯ್ಡು, ಸುಚೇಂದ್ರ, ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷರಾದ ನವೀನ್, ಸಂತೋಷ್. ಎನ್, ರೋಹಿತ್, ವರುಣ್, ಸಂಜಯ್ ಮುಂತಾದವರು ಉಪಸ್ಥಿತರಿದ್ದರು.