ತುಳಸಿ ನೆಟ್ಟು ಆರೋಗ್ಯ ಕಾಪಾಡಿ:ಶರಣಮ್ಮ

ಸೈದಾಪುರ:ನ.27:ತುಳಸಿಯು ಕೇವಲ ಪೂಜೆಗೆ ಸೀಮಿತವಾಗಿಲ್ಲ. ಆಯುರ್ವೇದದಲ್ಲಿ ಕ್ಯಾನ್ಸರ್‍ನಂತಹ ಮಾರಕ ಖಾಯಿಲೆಗಳಿಗೆ ಔಷಧೀಯಾಗಿದೆ. ಆದರಿಂದ ಪ್ರತಿಯೊಬ್ಬರು ತಮ್ಮ ಮನೆ ಮುಂದೆ ತುಳಿಸಿಯನ್ನು ನೆಟ್ಟು ತಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡುಬೇಕು ಎಂದು ಮಾಜಿ ಗ್ರಾಪಂ ಸದಸ್ಯೆ ಶರಣಮ್ಮ ಹಣಮಂತ ವಡವಟ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಏರ್ಪಡಿಸಿದ ತುಳಸಿ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದೂ ಧರ್ಮದಲ್ಲಿ ಶ್ರಿ ತುಳಸಿ ದೇವಿಗೆ ಒಂದು ಪವಿತ್ರವಾದ ಸ್ಥಾನವಿದೆ. ಮನೆಯ ಮುಂದೆ ತುಳಸಿ ವೃಕ್ಷದ ಪ್ರತಿಮೆ ಪ್ರತಿಷ್ಠಾಪಿಸುವುದರಿಂದ ಮನೆಯಂಗಳವು ಪರಿಶುದ್ಧ ಮತ್ತು ದುಷ್ಟ ಶಕ್ತಿಗಳು ಬರದಂತೆ ನೋಡಿಕೊಳ್ಳುತ್ತಾಳೆ. ಅನೇಕ ರೋಗಗಳಿಗೆ ರಾಮ ಬಾಣವಾಗಿ ತುಳಸಿಯ ಎಲೆಗಳನ್ನು ಬಳುಸುತ್ತಿದ್ದರು. ಅದು ವೈಜ್ಞಾನಿಕವಾಗಿ ಸತ್ಯ ಎಂಬುವುದು ಅನೇಕ ವಿಜ್ಞಾನಿಗಳ ಮತ್ತು ವೈದ್ಯರ ವಾದವಾಗಿದೆ. ಇಂದಿನ ಆಧುನಿಕ ಕಾಲದಲ್ಲಿಯೂ ತುಳಸಿ ಸಸಿಯು ಅನೇಕ ಔಷಧಿಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರಿಂದ ನಮ್ಮ ಮನೆಯ ಮುಂದೆ ಔಷಧಿಗುಣವುಳ್ಳ ಸಣ್ಣ ಸಣ್ಣ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಮುಂಚಿತವಾಗಿ ತುಳಸಿ ಕಟ್ಟೆಯನ್ನು ಸುಣ್ಣ ಬಣ್ಣ ಬಳಿದು, ತಳಿರು ತೋರಣಗಳಿಂದ ಮದುಮಗಳಂತೆ ಶೃಂಗಾರಗೊಳಿಸಿ, ಪಕ್ಕದಲ್ಲಿ ನಲ್ಲಿಕಾಯಿ ಸಸಿಯನ್ನಿಟ್ಟು ಶಾಸ್ತ್ರಬದ್ದವಾಗಿ ತುಳಸಿ ವಿವಾಹ ಮಹೋತ್ಸವನ್ನು ನೇರವೆರಿಸಿದರು.
ಬಸಮ್ಮ ವಾರದ, ತಾಯಮ್ಮ ಬುಗಪ್ಪ, ಸುಭದ್ರ ಅಂಜನೇಯ ಕಾವಲಿ, ಸಾಬಮ್ಮ ಬಾಡಿಯಾಲ, ದೇವಮ್ಮ ನಗಲಪೂರ, ಜಾನಕಿ, ದೇವಮ್ಮ ಗುಡ್ಲಗುಂಟಿ, ಅಮೃತಾ, ನಮೃತಾ, ಶಿಲ್ಪಾ ಶಂಕರ, ನಂದಿತಾ, ಭಾಗ್ಯಶ್ರೀ ಶೇಖಸಿಂದಿ ಸೇರದಂತೆ ಇತರರಿದ್ದರು.