ತುಳಸಿ ಕಷಾಯ

ತುಳಸಿ ಗಿಡ ಪ್ರತಿ ದಿನ ಮುತೈದೆಯರಿಂದ ಪೂಜೆ ಮಾಡಿಸಿಕೊಳ್ಳುವುದು ಮಾತ್ರ ಅಲ್ಲದೆ ಸಣ್ಣ ಪುಟ್ಟ ನೆಗಡಿ, ಕೆಮ್ಮು ಓಡಿಸುವ ಔಷದೀಯ ಗುಣ ಹೊಂದಿದೆ. ಮಳೆಗಾಲ, ಚಳಿಗಾಲದಲ್ಲಿ ಮನೆಮಂದಿಯೆಲ್ಲಾ ಕುಡಿಯಬಹುದಾದ , ಸುಲಭವಾಗಿ ಮಾಡಬಹುದಾದ, ಯಾವುದೇ ಪೂರ್ವ ತಯಾರಿ ಇಲ್ಲದೆ ಕೇವಲ ಹತ್ತು ನಿಮಿಷದಲ್ಲಿ ಮಾಡಬಹುದಾದ ತುಳಸಿ ಕಷಾಯ
ಮಾಡುವ ವಿಧಾನ:-
ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು, ಅರ್ಧ ಇಂಚು ಚಕ್ಕೆ, ಎರಡು ಲವಂಗ, ಒಂದು ಏಲಕ್ಕಿ, ನಾಲ್ಕು ಕರಿ ಮೆಣಸು, ಅರ್ಧ ಇಂಚು ಸಿಪ್ಪೆ ತೆಗೆದು ಶುಂಠಿ, ಒಂದು ಇಂಚು ಕಲ್ಲು ಸಕ್ಕರೆ ಜೊತೆಗೆ ಕುಟ್ಟಿ ಒಂದು ದೊಡ್ಡ ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನೀರು ಅರ್ಧಕ್ಕೆ ಅರ್ಧ ಆದಾಗ ಸೋಸಿ ಬಿಸಿ ಬಿಸಿಯಾಗಿ ಸೇವಿಸಿ.
ಕಲ್ಲು ಸಕ್ಕರೆ ಬದಲು ಬೆಲ್ಲ ಬೇಕಾದರೆ ಹಾಕಬಹುದು. ಸೋಸಿದ ಪದಾರ್ಥಗಳನ್ನು ಎಸೆಯದೆ ಸಂಜೆ ಮಸಾಲಾ ಟೀ ಮಾಡುವಾಗ ಹಾಕಬಹುದು.