ತುಳಸಿದಾಸಪ್ಪ ಆಸ್ಪತ್ರೆಯಲ್ಲಿ 100 ಬೆಡ್‍ಗಳ ಸಿದ್ಧ

ಮೈಸೂರು,ಏ.26:- ಮೈಸೂರು ನಗರದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನತೆ ಗಾಬರಿಗೊಳಗಾಗುತ್ತಿದ್ದು, ಮೈಸೂರು ನಗರದಲ್ಲಿರುವ ತುಳಸಿದಾಸಪ್ಪ ಆಸ್ಪತ್ರೆಯಲ್ಲಿ ತುರ್ತಾಗಿ 100 ಹಾಸಿಗೆಗಳ ಆಕ್ಸಿಜನ್ ಬೆಡ್ ಗಳನ್ನು ಸಿದ್ಧಪಡಿಸಿ ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲಾಗುತ್ತಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.
ಅವರು ಇಂದು ಈ ಸಂಬಂಧ ತುಳಸಿದಾಸ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಕೊರೋನಾ ಹೆಚ್ಚುತ್ತಿರುವ ಭೀತಿಯಿರುವ ಸಂದರ್ಭದಲ್ಲಿ ಸೌಲಭ್ಯಗಳನ್ನು ಹೆಚ್ಚು ಮಾಡುವ ದೃಷ್ಟಿಕೋನದಲ್ಲಿ ಸಚಿವರು ಕಳೆದ ಬಾರಿ ಬಂದ ಸಂದರ್ಭದಲ್ಲಿ ಎಂತಹ ಪರಿಸ್ಥಿತಿಯಲ್ಲೂ ಎಲ್ಲ ಸಂಸ್ಥೆಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಪ್ರಾಧಿಕಾರದ ಅಧ್ಯಕ್ಷರಾದ ನನಗೆ ಕೂಡ ತಿಳಿಸಿದ್ದರು ಆ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುತ್ತಿದೆ ಎಂದು ತಿಳಿಸಿದರು.
ತುಳಸೀದಾಸ ಆಸ್ಪತ್ರೆಯಲ್ಲೂ ರಾಮದಾಸ್ ಅವರು ಚರ್ಚೆ ಮಾಡುತ್ತಿದ್ದಂತೆಯೇ ತಕ್ಷಣ ಹೋಗಿ ಇದ್ದು ಆರಂಭಿಸಿ ಎಂದು ಕೊರೋನಾ ಪಾಸಿಟಿವ್ ಇರಲಿ, ನೆಗೆಟಿವ್ ಇರಲಿ ತಕ್ಷಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದರು. ಪಾಲಿಕೆಯ ಆಯುಕ್ತರು, ನಾನು ಕಾವೇರಿ ಆಸ್ಪತ್ರೆಯವರ ಜೊತೆ ಚರ್ಚೆ ಮಾಡಿದ್ದೇವೆ. ವಿಶೇಷವಾಗಿ ವೈದ್ಯರು ಪಾರಾ ಮೆಡಿಕಲ್ಸ್ ನ ದೊಡ್ಡ ಶಕ್ತಿ ಬೇಕಾಗಿದೆ. ವ್ಯವಸ್ಥೆ ಸುವ್ಯವಸ್ಥಿತವಾಗಿರಬೇಕು. ವೈದ್ಯರ ಜವಾಬ್ದಾರಿಯನ್ನು ಪಾರಾಮೆಡಿಕಲ್ ಏನು ಶಕ್ತಿ ಬೇಕೋ ಅದನ್ನು ಕೊಡುತ್ತೇವೆ ಎಂದು ಹೇಳಿದ ಮೇಲೆ, ಚರ್ಚೆ ನಡೆಸಿದಾಗ ಈ ಕಟ್ಟಡಕ್ಕೆ ಪರ್ಮನೆಂಟ್ ಇಲೆಕ್ಟ್ರಿಕ್ ಸಿಟಿ ಬೇಕಿತ್ತು, ಸಂಜೆ ಒಳಗಡೆ ಆನ್ ಆಗಲಿದೆ. ನೀರಿನ ಸಂಪರ್ಕ ಬೇಕಿತ್ತು, ಅದೀಗಾಗಲೇ ಮೂವ್ ಆಗಿದೆ. ಇನ್ನೊಂದು ಸಭೆ ನಡೆಯಲಿದ್ದು, ನೀರಿನ ಕುರಿತ ಸಂಪರ್ಕಕ್ಕೆ ತಕ್ಷಣಕ್ಕೆ ನಿರ್ಣಯ ಕೈಗೊಂಡು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
52 ಪಾಯಿಂಟ್ ಗಳಲ್ಲಿ ಆಕ್ಸಿಜನ್ ಮಾಡಲು ಲೈನಿಂಗ್ ಆಗಿದೆ. ಇನ್ನು 50ಪಾಯಿಂಟ್ ಗಳ ಕ್ರಿಯೇಟ್ ಮಾಡುವ ದೃಷ್ಟಿಯಿಂದ ಚರ್ಚೆ ಮಾಡಿ ತಕ್ಷಣಕ್ಕೆ ಕಾಮಗಾರಿ ಆರಂಭವಾಗತ್ತೆ. ಈಗಾಗಲೇ ನಮ್ಮ ಅಧಿಕಾರಿಗಳು ಬೆಂಗಳೂರಿನಲ್ಲಿ ಸಂಬಂಧಿಸಿದವರ ಜೊತೆ ಸಂಪರ್ಕ ಸಾಧಿಸಿ ಮಾತನಾಡಿದ್ದಾರೆ. ಮಧ್ಯಾಹ್ನದ ನಂತರ 50ಸಂಖ್ಯೆಯ ಆಕ್ಸಿಜನ್ ಪೂರೈಕೆಗೆ ಲೈನಿಂಗ್ ಮಾಡುವ ಕೆಲಸಗಳು ಆರಂಭವಾಗಲಿದೆ. ನಿನ್ನೆ ಆಕ್ಸಿಜನ್ ಕಂಪನಿಯವರ ಜೊತೆ ಚರ್ಚೆ ಮಾಡಿದ್ದೇವೆ. ಮೆಗಾ ಸಿಲಿಂಡರ್ ಗಳನ್ನು ಇನ್ಸ್ಟಾಲ್ ಮಾಡಲು ಒಂದು ವಾರ ಬೇಕು ಅಂತ ಹೇಳಿದ್ದಾರೆ. ತಕ್ಷಣಕ್ಕೆ 6 ನೀಡಲು ಕೊಡಬೇಕು ಅಂತ ಆಗಿದೆ. ತಕ್ಷಣಕ್ಕೆ ಮೂರು ಕೊಟ್ಟರೂ 25ರಿಂದ 50 ಪೆಟ್ಟಿಗೆಗಳನ್ನು ತುಂಬಿಸಿ ಎಕ್ಸಟೆಂಡ್ ಮಾಡಲು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಪಾಲಿಕೆಯ ಎಲ್ಲ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಜೊತೆಗೆ ನಿಂತಿರುವುದರಿಂದ ಎಲ್ಲ ಇಲಾಖೆಗಳು ಜಿಲ್ಲಾಡಳಿತದ ಜೊತೆ ಸೇರಿಕೊಂಡು ಪ್ರಾಧಿಕಾರದ ಮೇಲ್ವಿಚಾರಣೆ ಮತ್ತು ಅದಕ್ಕೆ ಬೇಕಾದ ಖರ್ಚು ವೆಚ್ಚಗಳನ್ನು ಹಾಕುವುದರಲ್ಲಿ ಪ್ರಾಧಿಕಾರಕ್ಕೆ ಜವಾಬ್ದಾರಿ ನೀಡಿ ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್ ನ್ನು ನಡೆಸಬೇಕೆಂದು ಈ ಕ್ಷಣದ ಅನಿವಾರ್ಯತೆ ಮತ್ತು ಅಗತ್ಯತೆಗನುಗುಣವಾಗಿ ಹೆಜ್ಜೆ ಇರಿಸಿದ್ದು, ಕ್ಲಿನಿಕ್ ಸಂಜೆ ಒಳಗೆ ಸಿದ್ಧವಾಗಲಿದೆ ಎಂದು ತಿಳಿಸಿದರು.
ಬೆಡ್ ಗೆ ಟೆಂಪರರಿಯಾಗಿ ಕಾಟ್ ತರಲು ಮಾತುಕತೆ ನಡೆದಿದೆ. ಬೇಕಾದ ಎಲ್ಲ ಸೌಲಭ್ಯಗಳನ್ನು ಪಿನ್ ಟು ಪಿನ್ ನೋಟ್ ಮಾಡಿಕೊಳ್ಳಲಾಗಿದೆ. ಮಂತ್ರಿಗಳು ನಾಳೆ ಸ್ಥಳ ಪರಿಶೀಲನೆ ಮಾಡಲು ಬರುವವರಿದ್ದಾರೆ. ಅದಕ್ಕೂ ಮುಂಚಿತವಾಗಿ ಇವತ್ತು ಆಗಬೇಕಾದ ಪ್ರಿಪರೇಷನ್ ಗೆ ಹೆಜ್ಜೆ ಹಾಕಿದ್ದೇವೆ. ರಾಮದಾಸ್ ಅವರು ಗುಣಮುಖರಾದ ತಕ್ಷಣ ಬಂದು ನಮ್ಮ ಜೊತೆ ಕೈಜೋಡಿಸಲಿದ್ದಾರೆ. ನೀಡಿದ ಜವಾಬ್ದಾರಿ ನಿರ್ವಹಿಸಿಲಿದ್ದೇವೆ. ಬೆಡ್, ಆಕ್ಸಿಜನ್ ಹೆಚ್ಚಿಸಿ ಮೈಸೂರಿನಲ್ಲಿರುವ ಆತಂಕದ ವಾತಾವರಣವನ್ನು ನೀಗಿಸಲು ಒಂದು ಜವಾಬ್ದಾರಿ ಹೊತ್ತು ಹೆಜ್ಜೆ ಹಾಕಲಿದ್ದೇವೆ. ಎಲ್ಲ ಇಲಾಖೆಯವರಿಗೂ ಜವಾಬ್ದಾರಿ ವಹಿಸಿ ಆ ಸಮಯದೊಳಗಡೆ ಆಸ್ಪತ್ರೆಯನ್ನು ಶೀಘ್ರದ ಆರಂಭಿಸಲಿದ್ದೇವೆ ಎಂದು ಹೇಳಿದರು.
ಜನರು ಭೀತಿಗೊಳಗಾದ ಸಂದರ್ಭದಲ್ಲಿ ನಮಗೇನು ಅವಕಾಶವಿದೆ ಈ ರೀತಿಯ ನೂರಾರು ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರವಾಗಿ ಈ ಆಸ್ಪತ್ರೆ ಆರಂಭವಾಗಲಿದೆ. 100ಬೆಡ್ ಗಳ ಆಕ್ಸಿಜನೇಟೆಡ್ ಬೆಡ್ ಗಳನ್ನು ಜಾಸ್ತಿ ಮಾಡುವ ದೃಷ್ಟಿಯಲ್ಲಿ ಮೈಸೂರಿನಲ್ಲಿ ಇರತಕ್ಕ ಆತಂಕದ ವಾತಾವರಣ ನೀಗಿಸಲು ಈ ಹೆಜ್ಜೆ ಇಡುತ್ತಿದ್ದೇವೆ. ಜನರು ಭಯಬೀಳುವ ಅಗತ್ಯವಿಲ್ಲ. ಜಿಲ್ಲಾಡಳಿತ ಕೂಡ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಗಳಲ್ಲಿ 250ಬೆಡ್ ಗಳನ್ನು ಕೂಡ ಆರಂಭಿಸಲು ಹೆಜ್ಜೆಗಳನ್ನು ಹಾಕಿದೆ. ಜನತೆ ಮೊದಲು ಆತಂಕಕ್ಕೆ ಒಳಗಾಗುವುದನ್ನು ಕಡಿಮೆ ಮಾಡಿ, ಕೊರೋನಾ ತಡೆಗೆ ಮುಂಜಾಗ್ರತೆ ವಹಿಸಿ ಎಂದರು.
ಸುದ್ದಿಗೋಷ್ಠಿಯಲ್ಲಿ ಮನಪಾ ಆಯುಕ್ತರಾದ ಶಿಲ್ಪನಾಗ್, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಉಪಸ್ಥಿತರಿದ್ದರು