ತುಳಜಾಭವಾನಿಯ ಪರಮಭಕ್ತ ಶಿವಾಜಿ ಮಹಾರಾಜರು:ಜೋಶಿ

ತಾಳಿಕೋಟೆ:ಫೆ.21: ತಾಯಿ ಜೀಜಾಬಾಯಿ, ತಂದೆ ಶಹಾಜಿ ಅವರ ಸಂಸ್ಕಾರದಿಂದ ಬೆಳೆದುಬಂದಿದ್ದ ಛತ್ರಪತಿ ಶಿವಾಜಿ ಮಹಾರಾಜರು ತಾಯಿಯ ಹಾಗೂ ತುಳಜಾಭವಾನಿಯ ಮಹಾ ಪುಜೆ ಗೈಯುತ್ತಾ ವಲುಮೆಯನ್ನು ಪಡೆದುಕೊಂಡಿದ್ದೇ ಅವರು ಯುದ್ದದಲ್ಲಿ ಜಯ ಸಾದಿಸಲು ಕಾರಣವಾಯಿತೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ದಿನಕರ ಜೋಶಿ ಅವರು ಹೇಳಿದರು.
ಗುರುವಾರರಂದು ಸ್ಥಳೀಯ ಕ್ಷತ್ರೀಯ ಮರಾಠಾ ಸಮಾಜ, ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಅಭಿವೃದ್ದಿ ಸಂಘ ಹಾಗೂ ಮಾತೋಶ್ರೀ ಜೀಜಾಮಾತಾ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಶ್ರೀ ಶಿವಭವಾನಿ ಮಂದಿರದಲ್ಲಿ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಅಂದಿನ ರಾಜಮಹಾರಾಜರ ದಬ್ಬಾಳಿಕೆ, ಸ್ಥಿತಿಗತಿಯನ್ನು ಅರೀತ ಛತ್ರಪತಿ ಶಿವಾಜಿ ಮಹಾರಾಜರು 12ನೇ ವಯಸ್ಸಿನಲ್ಲಿಯೇ ನಾನು ರಾಜಕಾರಬಾರ ಮಾಡಬೇಕು ದೇಶದ ರಕ್ಷಣೆ ಮಾಡಬೇಕು ಮಹಿಳೆಯರನ್ನು ಮಾತೆಯರನ್ನು ದೇವತೆಯ ಸ್ವರೂಪದಲ್ಲಿ ಕಾಣುವಂತೆ ಮಾಡಬೇಕು ಇದು ಅಲ್ಲದೇ ಗೋ ಹತ್ಯ ತಡೆಯಬೇಕೆಂದು ಪಣತೊಟ್ಟ ಶಿವಾಜಿ ಮಹಾರಾಜರು ಈ ಎಲ್ಲದರಲ್ಲಿಯೂ ಜಯ ಸಾದಿಸಿ ಅಂದಿನ ಸಮಯದಲ್ಲಿ ರಕ್ಷಣೆ ಮಾಡಿರುವದನ್ನು ನೋಡಿದರೆ ಅವರಲ್ಲಿಯ ಕ್ಷಾತ್ರ ತೇಜಸ್ಸು ಹೇಗಿತ್ತೆಂಬುದು ಅವರ ಇತಿಹಾಸ ಬರೆದಿದ್ದನ್ನು ಓದಿದರೆ ಗೊತ್ತಾಗುತ್ತದೆ ಎಂದ ಅವರು ಕ್ಷತ್ರೀಯರು ಯಾವುದೇ ಆಸೆ ಆಮಿಷಕ್ಕೆ ಒಳಪಟ್ಟವರಲ್ಲಾ ಧರ್ಮ ರಕ್ಷಣೆ ದೇಶ ರಕ್ಷಣೆ ಮಾಡಬೇಕೆಂದು ಆಸೆಹೊತ್ತು ಬಂದವರಾಗಿದ್ದಾರೆ ಆ ಹಿಂದಿನ ಸ್ಥಿತಿಗತಿಯನ್ನು ಅವಲೋಕಿಸಿ ಎಲ್ಲ ಕ್ಷತ್ರೀಯರು ಅಷ್ಟೇ ಅಲ್ಲಾ ಇನ್ನುಳಿದ ಜನಾಂಗದವರೂ ಕೂಡಾ ಶಿವಾಜಿ ಮಹಾರಾಜರ ಮಾತೃ ಪ್ರೇಮ, ಪಿತೇಪ್ರಮ ಹಾಗೂ ದೇಶ ಪ್ರೇಮವನ್ನು ರಊಡಿಸಿಕೊಂಡು ಸಾಗಬೇಕೆಂದ ಜೋಶಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನೇ ಉಪಸ್ಥಿತ ಎಲ್ಲ ಜನಾಂಗಕ್ಕೆ ಮನವರಿಕೆ ಮಾಡಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಳಿಕೋಟೆ ತಾಲೂಕಾ ತಹಶಿಲ್ದಾರರಾದ ಶ್ರೀಮತಿ ಕೀರ್ತಿ ಚಾಲಕ ಅವರು ಮಾತನಾಡಿ ಛತ್ರಪತಿ ಅಂದರೆ ರಕ್ತ ಹುರಿದುಂಬಿಸುತ್ತದೆ ಶಿವಾಜಿ ಮಹಾರಾಜರು ಯಾವ ರೀತಿ ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಮಾತೃಪ್ರೇಮ ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ಚಿಕ್ಕಂದಿನಲ್ಲಿಯೇ ಅವರ ತಾಯಿ ಮಾತೆ ಜೀಜಾಬಾಯಿ ಅವರು ಕಲಿಸಿಕೊಟ್ಟ ಕಾರಣದಿಂದಲೇ ಅವರು ಹೆಸರು ಪಡೆಯಲು ಸಾಧ್ಯವಾಯಿತೆಂದು ಹೇಳಿದ ಅಧಿಕಾರಿ ಶ್ರೀಮತಿ ಕೀರ್ತಿ ಚಾಲಕ ಅವರು ಎಲ್ಲ ಮಾತೆಯರು ಜೀಜಾಮಾತೆಯ ಆದರ್ಶವನ್ನು ಅಳವಡಿಸಿಕೊಂಡು ನಡೆಯಬೇಕು ಶಿವಾಜಿ ಮಹಾರಾಜರಿಗೆ ನೀಡಿದ ಈ ಹಿಂದಿನ ಇತಿಹಾಸ ಪುಟಗಳಲ್ಲಿ ವಿಜೃಂಬಿಸಿದ ಕಥೆಗಳನ್ನು ಹೇಳುವಂತಹ ಕಾರ್ಯವಾಗಬೇಕು ಇಂತಹದ್ದರಿಂದಲೇ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಕಾರ್ಯವಾಗಲಿದೆ ಎಂದರು. ಇಂದು ಕ್ಷತ್ರೀಯ ಮರಾಠಾ ಸಮಾಜ ಬಾಂದವರು ತಮ್ಮ ಶಿವಭವಾನಿ ಮಂದಿರಕ್ಕೆ ನಮ್ಮನ್ನು ಅಹ್ವಾನಿಸಿ ಶ್ರೀ ಅಂಬಾಭವಾನಿಯ ದರ್ಶನ ಮಾಡಿಸಿರುವದು ಹಾಗೆ ನನಗೆ ಸನ್ಮಾನಿಸಿ ಗೌರವಿಸಿರುವದನ್ನು ನೋಡಿದರೆ ಇನ್ನಷ್ಟು ನನ್ನ ಸೇವಾ ಕಾರ್ಯದಲ್ಲಿ ಮುಂದುವರೆಯಲು ತಿಳಿಸಿದಂತಾಗಿದೆ ಶ್ರೀ ಭವಾನಿಯ ಆಶಿರ್ವಾದದ ಫಲ ಇದ್ದರೆ ಬೇಕಾದುದ್ದನ್ನು ಸಾದಿಸಬಹುದಾಗಿದೆ ಎಂದು ಬಹು ಮಾರ್ಮಿಕವಾಗಿ ವಿವರಿಸಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಪುರಸಭಾ ಮಾಜಿ ಸದಸ್ಯರಾದ ಪ್ರಭುಗೌಡ ಮದರಕಲ್ಲ ಅವರು ಮಾತನಾಡಿ ಧರ್ಮ ಸಂಸ್ಕøತಿಯನ್ನು ಸರಿ ದಾರಿಗೆ ಕೊಂಡೊಯುವ ಸಲುವಾಗಿ ಶಿವಾಜಿ ಮಹಾರಾಜರು ತಮ್ಮ ಇಡೀ ಜೀವನದಲ್ಲಿಯೇ ಯುದ್ದದೊಂದಿಗೆ ಹೋರಾಟ ನಡೆಸಿ ಅಂತಹ ಶೂರ ಸತ್ಪುರುಷನಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಅಂದಿನ ಆಡಳಿತ ಇಂದಿನ ವರೆಗೂ ವಿಜೃಂಬಿಸುತ್ತಾ ಸಾಗಿದೆ 397ವರ್ಷ ಘತಿಸಿದರೂ ಅವರ ಹೆಸರು ಅಜರಾಮರವಾಗಿದೆ ಪರಕೀಯರ ಸೇವೆಗೆ ನಾವು ಇರಬಾರದೆಂಬುದನ್ನು ಗಮನಿಸಿದ ಅವರು ಗುಲಾಮಗಿರಿಯಲ್ಲಿರುವಂತಹ ಅಂತಹ ಸ್ಥಿತಿಯಲ್ಲಿ ಶಿವಾಜಿ ಮಹಾರಾಜರು ಬಾಲ್ಯದಲ್ಲಿಯೇ ತಾಯಿಯಿಂದ ತಂದೆಯಿಂದ ಆದರ್ಶತನವನ್ನು ಅಳವಡಿಸಿಕೊಂಡು ಮಾವಳಿ ಜನಾಂಗದವರನ್ನು ಸಂಗ್ರಹ ಮಾಡಿಕೊಂಡು ಸಮಾಜಕ್ಕಾಗಿ, ದೇಶಕ್ಕಾಗಿ ಬಧುಕಬೇಕೆಂಬ ಇಚ್ಚೆ ವ್ಯಕ್ತಪಡಿಸಿ ಸ್ವರಾಜ್ಯದ ಕನಸ್ಸು ಕಂಡು ನನಸು ಮಾಡಿದ್ದಾರೆಂದರು.
ಸಾನಿದ್ಯ ವಹಿಸಿದ ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರು ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಚಿಕ್ಕವಯಸ್ಸಿನಲ್ಲಿಯೇ ತೋರಣಗಡವನ್ನು ಗೆಲ್ಲುತ್ತಾರೆ ಸ್ವತಂತ್ರವಾಗಿ ರಾಜ್ಯ ಕಟ್ಟಬೇಕಾದರೆ ಶೂನ್ಯದಿಂದಲೇ ಸೃಷ್ಠಿಯನ್ನು ಸೃಷ್ಠಿಸಿ ಸ್ತ್ರೀಯರನ್ನು ಮಾತೆಯ ಸ್ಥಾನದಲ್ಲಿ ನೋಡುತ್ತಾ ಅಕ್ರಮಣಕಾರರನ್ನು ಸೋಲಿನ ದವಡೆಗೆ ಸಿಲುಕಿಸಿ ರಾಜ್ಯಕಾರಬಾರು ಮಾಡಿದ ಛತ್ರಪತಿ ಶಿವಾಜಿ ಮಹಾರಾಜರು 50 ವರ್ಷಗಳಲ್ಲಿಯೇ ಜಗತ್ ಪ್ರಸಿದ್ದತೆಯನ್ನು ಪಡೆದಿದ್ದಾರೆಂದು ಹೇಳಿದ ಅವರು ಜೇಷ್ಠ ಶುದ್ದ ತ್ರೇಯೋದಶಿ ದಿನದಂದು ಈಗಲೂ ಛತ್ರಪತಿ ಶಿವಾಜಿ ಮಹಾರಾಜರ ಅವರ ಇದ್ದ ಸಮಯದಲ್ಲಿ ಆಚರಿಸಿದಂತೆ ಅವರ ಪಟ್ಟಾಭಿಷೇಕವು ಈ ಸಮಯದಲ್ಲಿ ರಾಯಘಡದಲ್ಲಿಯೂ ಆಚರಿಸಲ್ಪಡುತ್ತದೆ ಮಹಾರಾಷ್ಟ್ರದ ಜನತೆ ಅದನ್ನು ವಿಕ್ಷೀಸಲು ಪ್ರತಿ ವರ್ಷ ಜೇಷ್ಠ ಶುದ್ದ ತ್ರಯೋದಶಿ ದಿನದಂದು ಈಗಲೂ ತೆರಳಿ ಛತ್ರಪತಿ ಶಿವಾಜಿ ಮಹಾರಾಜರ ಅಂದಿನ ಇತಿಹಾಸವನ್ನು ನೆನಪಿಸಿ ಗೌರವಿಸಿಕೊಂಡು ಬರುತ್ತಿರುವದು ನಡೆದಿದೆ ಎಂದರು. ಅದೇ ರೀತಿ ಮಾತೆಯರು ಪ್ರತಿಯೊಂದು ಮನೆಗೆ ಶಿವಾಜಿ ಮಹಾರಾಜರಂತೆ ಮಕ್ಕಳನ್ನು ಬೆಳೆಸಿ ದೇಶ ಪ್ರೇಮ ಸಮಾಜದ ಮೇಲಿನ ಪ್ರೇಮ, ಗುರುಹಿರಿಯರ ಮೇಲಿಟ್ಟ ಭಕ್ತಿಯನ್ನು ಅಳವಡಿಸುವ ಕಾರ್ಯ ಮಾಡಬೇಕೆಂದರು.
ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಸಾನಿದ್ಯ ವಹಿಸಿದ್ದರು.
ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ ಅವರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಪ್ರಸ್ಥಾವಿಕ ಮಾತನಾಡಿದರು. ಕಾರ್ಯಕ್ರಮಕ್ಕೂ ಮುಂಚೆ ಶ್ರೀ ಭವಾನಿ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪುರಸಭೆ ಸದಸ್ಯರುಗಳಾದ ದುಂಡಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಜೀಜಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಶಾಂತಾಬಾಯಿ ನೂಲಿಕರ, ಶ್ರೀಮತಿ ಯಶೋದಾ ಶೇವಳಕರ, ಅವರು ಉಪಸ್ಥಿತರಿದ್ದರು.
ಪುರಸಭಾ ಸದಸ್ಯ ಅಣ್ಣಾಜಿ ಜಗತಾಪ ನಿರೂಪಿಸಿದರು. ವಿಷ್ಣು ಸಾಳುಂಕೆ ನಿರೂಪಿಸಿ ವಂದಿಸಿದರು.