ತುಲಾಭಾರ ಕಾರ್ಯಕ್ರಮ: ತಿಪ್ಪರಾಜು ಭಾಗಿ

ರಾಯಚೂರು, ಏ.೦೨- ಗ್ರಾಮೀಣ ಮತಕ್ಷೇತ್ರದ ಗುಂಜಹಳ್ಳಿ ಗ್ರಾಮದಲ್ಲಿ ಶ್ರೀ ಅಯ್ಯಾಳೇಶ್ವರ ಮತ್ತು ಶ್ರೀ ಬನ್ನೆಪ್ಪ ದೇವರ ಕಟ್ಟಡ ನಿರ್ಮಾಣ ಹಾಗೂ ಭಂಡಾರ ಪೂಜೆ ಮತ್ತು ಕನಕಗುರು ಪೀಠದ ಪರಮ ಪೂಜ್ಯ ಶ್ರೀ ಸಿದ್ದರಾಮನಂದಾಪುರಿ ಮಹಾಸ್ವಾಮಿಗಳ ೬೨ನೇ ತುಲಾಭಾರ ಕಾರ್ಯಕ್ರಮದಲ್ಲಿ ಎಸ್.ಟಿ ಮೋರ್ಚಾ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ
ತಿಪ್ಪರಾಜು ಹವಲ್ದಾರ್ ಭಾಗಿಯಾಗಿ ದರ್ಶನ ಪಡೆದರು
ಈ ಸಂದರ್ಭದಲ್ಲಿ ಲಕ್ಷ್ಮಣ ತಾತ ಗಾಣದಾಳ, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಕೆ.ಬಸವಂತಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಮಾಸ್ ದೊಡ್ಡಿ ನರಸಿಂಹಲು, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಕೊತ್ತದೊಡ್ಡಿ ರಾಮಚಂದ್ರ, ತಾಲೂಕ ವಿದ್ಯಾರ್ಥಿ ಘಟಕ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಕೆ.ತಾಯಣ್ಣ ಅನ್ವರ ಸೇರಿದಂತೆ ೭,೦೦೦ಕ್ಕೂ ಅಧಿಕ ಹಾಲುಮತ ಸಮಾಜದ ಬಂಧುಗಳು ಭಾಗವಹಿಸಿದರು