ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ಮತ ಚಲಾವಣೆಗೆ12 ಡಿ ಫಾರ್ಮ ಭರ್ತಿ ಮಾಡಿಕೊಡಬೇಕು: ಗೋವಿಂದರೆಡ್ಡಿ

ಬೀದರ, ಏ. 04: ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ಮತ ಚಲಾವಣೆ ಮಾಡಲು ನಮೂನೆ 12 ಡಿ. ಫಾರ್ಮ ಭರ್ತಿ ಮಾಡಿಕೊಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ತುರ್ತು ಸೇವೆಯ ಇಲಾಖೆಗಳಾದ ವಿದ್ಯುತ್ ಇಲಾಖೆ, ಬಿ.ಎಸ್.ಎನ್.ಎಲ್, ರೇಲ್ವೆ, ದೂರದರ್ಶನ, ಆರೋಗ್ಯ ಇಲಾಖೆ, ಪೆÇೀಲಿಸ್, ಸಾರಿಗೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ ಚಲಾಯಿಸಲು ನಮೂನೆ 12 ಡಿ. ಫಾರ್ಮ ಅನ್ನು ಈ ತಿಂಗಳ 17 ತಾರೀಖಿನ ಒಳಗೆ ಭರ್ತಿಮಾಡಿ ರಿಟನಿರ್ಂಗ ಅಧಿಕಾರಿಗಳಿಗೆ ಕೊಡಬೇಕು. ಬೇರೆ ಜಿಲ್ಲೆಯವರಾಗಿದ್ದರು ಆಯಾ ಜಿಲ್ಲೆಗೆ ಅವುಗಳನ್ನು ಕಳಿಸಿಕೊಡಲಾಗುತ್ತದೆ ಎಂದರು.

ಮೇ 2 ತಾರೀಖು ಪೆÇೀಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ತಮಗೆ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಮತದಾನ ಮಾಡಿದವರ ಪಟ್ಟಿಯನ್ನು ಮಾರ್ಕ್ ಮಾಡಲಾಗುತ್ತದೆ. ಮತದಾನದಿಂದ ಯಾರು ವಂಚನೆ ಆಗಬಾರದು ಎಂಬ ಕಾರಣಕ್ಕಾಗಿ ಭಾರತ ಚುನಾವಣಾ ಆಯೋಗ ಈ ನಿರ್ದೇಶನವನ್ನು ನೀಡಿದೆ ಎಂದರು.

ತುರ್ತು ಸೇವೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೆÇೀಸ್ಟಲ್ ಬ್ಯಾಲೆಟ್ 12 ಡಿ ಫಾರ್ಮ ಕೊಡುತ್ತೆವೆ ಇದನ್ನು ಭರ್ತಿಮಾಡಿ ಏಪ್ರಿಲ್ 17 ರ ಒಳಗೆ ಕೊಡಬೇಕು ಎಲ್ಲರೂ ತಮ್ಮ ತಮ್ಮ ಇಲಾಖೆಯ ಸಿಬ್ಬಂದಿಗಳ ವಿವರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೆÇೀಲಿಸ್ ಅಧಿಕ್ಷಕರಾದ ಮಹೇಶ ಮೇಘಣ್ಣವರ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.