ತುರವಿಹಾಳ ಪಿಎಸ್ಐ ಅಮಾನತ್ತು – ಡಿಎಸ್ಎಸ್ ಪ್ರತಿಭಟನೆ

ಸಿಂಧನೂರು.ನ.11- ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ದಲಿತರ ಮೇಲೆ ಸವರ್ಣಿಯರು ಹಲ್ಲೆ ಮಾಡಿ ಸಾಮಾಜಿಕ ಬಹಿಷ್ಕಾರ ಹಾಕಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ ಎನ್.ಮೂರ್ತಿ ಬಣ ಜಿಲ್ಲಾ ಸಮಿತಿ‌ ನೇತೃತ್ವದಲ್ಲಿ ‌ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಕಛೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ‌ಪತ್ರ ಸಲ್ಲಿಸಲಾಯಿತು.
ಎಲೆಕೂಡ್ಲಿಗಿ ಗ್ರಾಮದ ಸರ್ಕಾರಿ ಜಮೀನು ಸರ್ವೆ ನಂ – 6,13,78,81, 90, 91 ಈ ಜಮೀನನ್ನು ಸಾಗುವಳಿ ‌ಮಾಡಿಕೊಂಡು ಬಂದಿರುವ ದಲಿತರಿಗೆ ಹಕ್ಕು ಪತ್ರ ನೀಡಬೇಕು ಗ್ರಾಮವನ್ನು ಸಮಾಜಕಲ್ಯಾಣ ಇಲಾಖೆ ದತ್ತು ತೆಗೆದುಕೊಂಡು ಮನೆ ,‌ಕೊಳವೆ ಬಾವಿ , ಶಾಲೆ,‌ಅಂಗನವಾಡಿ‌ ಕೇಂದ್ರ ,ಸಮುದಾಯ ಭವನ,ಹಾಲಿನ ಡೈರಿ ನಿರ್ಮಿಸಿ ಕುರಿ‌‌ ಮತ್ತು ಕೋಳಿ ಸಾಕಾಣಿಕೆಗೆ‌ ಸಾಲ‌ ನೀಡಬೇಕೆಂದು ಮನವಿ‌ಪತ್ರ ದಲ್ಲಿ ತಿಳಿಸಲಾಗಿದೆ.
ಅಕ್ರಮ‌ ಕೂಟ ಕಟ್ಟಿಕೊಂಡು ‌ದಲಿತರ ಮೇಲೆ ಹಲ್ಲೆ ಮಾಡಿದ ಜಿ.ಪ‌ ಮಾಜಿ‌ ಸದಸ್ಯರಾದ ಶಿವನಗೌಡ ಹಾಗೂ ಅವರ ಸಹಚರರನ್ನು ಬಂಧಿಸಿ ಅವರ ಆಸ್ತಿ‌ ಮುಟ್ಟುಗೋಲು ಹಾಕಿಕೊಂಡು ಚುನಾವಣೆಗೆ ‌ಸ್ಪರ್ಧಿಸಿದಂತೆ ನಿರ್ಭಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದಲಿತರ ಮೇಲೆ ಹಲ್ಲೆ ‌ಸಾಮಾಜಿಕ ಬಹಿಷ್ಕಾರ ಕ್ಕೆ ಕುಮ್ಮಕ್ಕು ನೀಡಿ ತುರವಿಹಾಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ವಿನಾಕಾರಣ ಅಮಾಯಕ ದಲಿತ ಮುಖಂಡರು ,ಯುವಕರು ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಸುಳ್ಳು ಕೇಸ್ ಹಾಕಿದ ತುರವಿಹಾಳ ಪಿಎಸ್ಐ ಯರಿಯಪ್ಪ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ,80 ಜನ ದಲಿತರ ಮೇಲೆ ಹಾಕಿದ ಸುಳ್ಳು ಕೇಸ್ ಗಳನ್ನು ರದ್ದುಪಡಿಸಬೇಕೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಪ್ರಗತಿಪರ ಸಂಘಟನೆಗಳ ಮುಖಂಡರಾದ ಚಂದ್ರಶೇಖರ ಗೋರೆಬಾಳ, ಡಿ.ಎಚ್.ಕಂಬಳಿ ಸೇರಿದಂತೆ ಇತರರು ಹೋರಾಟದ ಬೆಂಬಲ‌ ಸೂಚಿಸಿ‌ ಮಾತನಾಡಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಅಶೋಕ ನಂಜಲದಿನ್ನಿ‌,ರಂಗಪ್ಪ, ಬಸವರಾಜ ಕುಣೆ ಕೆಲ್ಲೂರು, ಸುರೇಶ, ಸಣ್ಣ ನಿರುಪಾದಿ, ಮುಖೇಶ್ ,‌ಬಸವಲಿಂಗ ,‌ಬಸವರಾಜ, ಸುಖಮುನಿಯಪ್ಪ, ನಾಗಪ್ಪ ಪೂಜಾರಿ, ಹರಿ ಹರ ಗೋಖಲೆ , ಶ್ರೀನಿವಾಸ‌ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.