ತುಮಕೂರು ವಿವಿ ನೂತನ ಕುಲಪತಿಗೆ ಅಭಿನಂದನೆ

ತಿಪಟೂರು, ಜು. ೨೩-ತುಮಕೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಪ್ರೊ. ವೆಂಕಟೇಶ್ವರಲು ಅವರನ್ನು ವಿ.ವಿ ಮಾಜಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಕೆ.ಎಸ್.ಸದಾಶಿವಯ್ಯ ಅಭಿನಂದಿಸಿದ್ದಾರೆ.
ತುಮಕೂರು ವಿ.ವಿ ಕುಲಸಚಿವರಾಗಿ ಈ ಹಿಂದೆ ಪ್ರೊ. ರಾಜಾಸಾಬ್‌ರವರು ಕುಲಪತಿಗಳಾಗಿದ್ದಾಗ ಪ್ರೊ. ವೆಂಕಟೇಶ್ವರಲು ಕಾರ್ಯನಿರ್ವಹಿಸಿದ್ದು ಅವರಿಗೆ ತುಮಕೂರು ವಿ.ವಿ. ಆಡಳಿತದ ಪರಿಚಯ ಈಗಾಗಲೇ ಆಗಿದ್ದು ನೆನಗುದಿಗೆ ಬಿದ್ದಿರುವ ತುಮಕೂರು ವಿ.ವಿ ಕ್ಯಾಂಪಸ್ ಪೂರ್ಣಗೊಳಿಸುವುದರ ಜತೆಗೆ ತಿಪಟೂರಿನ ಕಲ್ಪಸಿರಿ ವಿ.ವಿ ಸ್ನಾತಕೋತ್ತರ ಅಭಿವೃದ್ಧಿಪಡಿಸುವುದು, ಸಿರಾ ಸ್ನಾತಕೋತ್ತರ ಅಭಿವೃದ್ಧಿ ಕೇಂದ್ರ ಅಭಿವೃದ್ಧಿಪಡಿಸುವುದರ ಜತೆಗೆ ವಿ.ವಿ. ಶೈಕ್ಷಣಿಕ ಗುಣಮಟ್ಟ ಸೇರಿದಂತೆ ಜಿಲ್ಲೆಯ ಅಭಿವ್ಯಕ್ತಿಗೆ ಪೂರಕವಾಗಿ ಆಡಳಿತ ಸಮನ್ವಯದೊಂದಿಗೆ ವಿ.ವಿ.ಯನ್ನು ಬೆಳೆಸುವ ಹೊಣೆಗಾರಿಕೆ ನೂತನ ಕಲಪತಿಗಳ ಮೇಲೆ ಇದ್ದು ದೇಶದಲ್ಲೆ ಮಾದರಿ ವಿಶ್ವವಿದ್ಯಾನಿಲಯವನ್ನಾಗಿ ಮಾಡರ್ಪಡಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.