ತುಮಕೂರಿನ ಶ್ರೀಗಳು ತ್ರಿವಿಧದ ದಾಸೋಹಿಗಳಾಗಿದ್ದರು :ಭೀಮರಾವ ಬೀದರಕರ

ಬೀದರ್,ಏ.4: ಬೀದರ ನಗರ ಬಸವೇಶ್ವರ ವೃತ್ತ ಬಳಿ ನಡೆದಾಡುವ ದೇವರೆಂದೇ ಪ್ರಖ್ಯಾತಿ ಪಡೆದ ಲಿಂಗೈಕ್ಯ ಪರಮ ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳ 114ನೇ ಜನ್ಮದಿನ ಸಿದ್ದಗಂಗಾ ಮಠ ಹಿತೈಸಿಗಳ ಸಂಘದ ವತಿಯಿಂದ ಆಚರಣೆ ಮಾಡಲಾಯಿತು.

ಸಂಘದ ಪ್ರಮುಖ್ಯ ಭೀಮರಾವ ಬೀದರಕರ ಯಾಕತಪೂರ ಅವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿ ಶ್ರೀ ಮಠದಲ್ಲಿ ಸುಮಾರು 12 ಸಾವರಕ್ಕೂ ಹೆಚ್ಚು ಮಕ್ಕಳ ಆಶ್ರಯದಾತರಾಗಿದ್ದ ಶ್ರೀಗಳು ಜೀವನದ್ದೂದ್ದಕ್ಕೂ ತ್ರಿವಿಧದ ದಾಸೋಹಿಗಳಾಗಿ ಶ್ರಮಿಸಿದರು. ಅವರ ಸಂದೇಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನಗಳಲ್ಲಿ ಅಳವಡಿಸಿಕೊಂಡು ನಡೆದರೆ ಸುಭದ್ರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನುಡಿದರು.

ಮಾಣಿಕೇಶ ಪಾಟೀಲ ಮಿರ್ಜಾಪೂರ, ಕನಕದಾಸ ವನಮಾರಪಳ್ಳಿ, ಲೋಕೇಶ ಸ್ವಾಮಿ ಯಕಲಾರ, ಮಹೇಶ ಪಾಟೀಲ ಮಿರ್ಜಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.