
ಕನ್ನಡ ಚಿತ್ರರಂಗದಲ್ಲಿ ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದಿರುವ ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ತಮ್ಮ ಹುಟ್ಟುಹಬ್ಬ ನೂರಾರು ಮಂದಿಗೆ ಅನುಕೂಲವಾಗಬೇಕು ಎನ್ಮುವ ಉದ್ದೇಶದಿಂದ ಆರೋಗ್ಯ ಶಿಬಿರ ಆಯೋಜಿಸಿ ಕನ್ನಡ ಚಿತ್ರರಂಗದ ಅನೇಕ ಹಿರಿಯ ಪೋಷಕ ಕಲಾವಿದರಿಗೆ ನೆರವಾಗಿದ್ದಾರೆ.
ಇದರ ಜೊತೆಗೆ ಲೈಂಗಿಕ ಅಲ್ಪ ಸಂಖ್ಯಾತರಿಗೆ ಸೂರು ಕಲ್ಪಿಸುವ ಉದ್ದೇಶ ಹೊಂದಿದ್ದಾರೆ. ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ರೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಅವರನ್ನು ಮತ್ತೆ ಓದಿನ ಕಡೆ ಮುಖ ಮಾಡುವ ಉದ್ದೇಶವನ್ನೂ ಹೊಂದಿದ್ದಾರೆ.
ಇದರ ಜೊತೆಗೆ ಕನ್ನಡದಲ್ಲಿ ಹಲವು ಹೊಸ ಚಿತ್ರಗಳು ರಾಗಿಣಿ ಕೈಯಲ್ಲಿವೆ. ಇದರ ಜೊತೆಗೆ ಬಾಲಿವುಡ್ ನಲ್ಲಿ ಚಿತ್ರವನ್ನು ಸದ್ದು ಗದ್ಲವಿಲ್ಲದೆ ಮುಗಿಸಿಕೊಂಡು ಬಂದಿದ್ದಾರೆ. ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಚಿತ್ರಗಳು ರಾಗಿಣಿ ಅವರ ಕೈಯಲ್ಲಿದೆ.
ಹುಟ್ಟುಹಬ್ಬದ ಸಂಭ್ರಮವನ್ನು ಬೆಳಗ್ಗೆ ಆರೋಗ್ಯ ಶಿಬಿರದ ಮೂಲಕ ಹಮ್ಮಿಕೊಂಡಿದ್ದ ನಟಿ ರಾಗಿಣಿ ಸಂಜೆ ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬರಲು ಎಲ್ಲರ ಸಹಕಾರ ಕಾರಣ , ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.