ತುಟ್ಟಿಭತ್ಯೆ ಮಂಜೂರಾತಿಗೆ ಆಗ್ರಹ

ಬೆಂಗಳೂರು.ಏ.೬: ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಶೇ.೪ರಷ್ಟು ತುಟ್ಟಿಭತ್ಯೆಯನ್ನು ಏ.೧ರಿಂದ ಪೂರ್ವನ್ವಯವಾಗುವಂತೆ ಮಂಜೂರಾತಿ ನೀಡಿ ಸರ್ಕಾರಿ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಏ.೧ರಿಂದಲೇ ಪೂರ್ವನ್ವಯವಾಗುವಂತೆ ನಗದು ರೂಪದಲ್ಲಿ ತುಟ್ಟಿಭತ್ಯೆ ಯನ್ನು ಮಂಜೂರಾತಿ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತಿ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಬೈರಪ್ಪ ರವರು ಪತ್ರಿಕಾ ಹೇಳಿಕೆ ಮುಂಖಾಂತರ ಸರ್ಕಾರವನ್ನು ಆಗ್ರಹಿಸಿದ್ದಾರೆ.