ತುಗಾಂವಕರ್ ನಿಧನಕ್ಕೆ ಸಚಿವ ಚವ್ಹಾಣ್ ಸಂತಾಪ

ಬೀದರ:ಮೇ.20: ಭಾರತೀಯ ಜನತಾ ಪಕ್ಷದ ಬೀದರಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ,ಕಲಬುರಗಿ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಿದ ಅತ್ಯುತ್ತಮಕಾರ್ಯಕರ್ತದತ್ತಾತ್ರೇಯತುಗಾಂವಕರ್‍ಕೋವಿಡ್ ಸೋಂಕಿನಿಂದ ನಿಧನರಾಗಿ ನಮ್ಮನ್ನೆಲ್ಲಾಅಗಲಿದ್ದು,ಅತೀವದುಃಖತಂದಿದೆಎಂದುಪಶು ಸಂಗೋಪನೆ ಹಾಗೂ ಬೀದರಜಿಲ್ಲಾಉಸ್ತುವಾರಿ ಸಚಿವರಾದ ಪ್ರಭುಚವ್ಹಾಣ್‍ಅವರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಬಾಲ್ಯದಿಂದಲೇ ಗುರುತಿಸಿಕೊಂಡಿದ್ದ ಇವರು, ಅತ್ಯಂತಸರಳಜೀವಿ,ಉತ್ತಮ ಸಂಘಟಕರಾಗಿದ್ದರು.ಭಾಲ್ಕಿ ನಗರಸಭೆ ಸದಸ್ಯರಾಗಿ, ಎರಡು ಬಾರಿಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂಎರಡು ಬಾರಿ ಕಲಬುರಗಿ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು.ಕ್ರೀಯಾಶೀಲ ಯುವಕನಾಗಿಅವರು ಸದಾ ನಮ್ಮೆಲ್ಲರ ನೆನಪಿನಲ್ಲಿಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

ಇತ್ತೀಚಿನ ಬಸವಕಲ್ಯಾಣ ಉಪಚುನಾವಣೆಯಲ್ಲಿಅತ್ಯಂತ ಶ್ರಮಿಸಿದ್ದರು.ಸಂಘಟನಾತ್ಮಕ ಬೂತ್‍ಕಾರ್ಯ, ಕಾರ್ಯಕರ್ತರಜೋಡಣೆ, ವಿವಿಧಸಮಾಜಗಳ ಮುಖಂಡರಜೋಡಣೆಯಂತಹಕೆಲಸಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು.ಇಪ್ಪತ್ತು ದಿನ ತಮ್ಮಜೊತೆಗಿದ್ದುಕೆಲಸ ಮಾಡಿದ್ದರು. ನಂತರ ಭಾಲ್ಕಿಯಲ್ಲಿಕೋವಿಡ್‍ಕೇರ್ ಸೆಂಟರ್‍ಪ್ರಾರಂಭಿಸಿ, ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸಿದ್ದರು.ಇವರ ಅಗಲಿಕೆ ಪಕ್ಷ ಹಾಗೂ ಸಂಘಪರಿವಾರಕ್ಕೆತುಂಬಲಾರದ ನಷ್ಟವಾಗಿದೆ.

ಅವರಕುಟುಂಬದವರಿಗೆ ಹಾಗೂ ಪಕ್ಷದಕಾರ್ಯಕರ್ತರಿಗೆಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನುದೇವರುಕರುಣಿಸಲಿ ಹಾಗೂ ಅವರಆತ್ಮಕ್ಕೆ ಸದ್ಗತಿದೊರೆಯಲಿ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.