ತುಕಾರಾಂ ಪರ ಮೋಕಾದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಸಚಿವ  ನಾಗೇಂದ್


* ಸಾವಿರಾರು ಜನರು ಭಾಗಿ
* ಯುವಕರ ಜೊತೆ ಡಿಜೆ ಬೀಟ್ಸ್ ಗೆ ಹೆಜ್ಜೆ ಹಾಕಿದ ಸಚಿವರು.
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.04: ತಾಲೂಕಿನ ಗ್ರಾಮೀಣ ಕ್ಷೇತ್ರದ ಮೋಕಾ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಪರವಾಗಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿ. ಕಾರ್ಯಕರ್ತರೊಂದಿಗೆ ಡಿಜೆ ಸಂಗೀತಕ್ಕೆ ಹೆಜ್ಜೆಹಾಕಿ ಸಂಭ್ರಮಿಸಿದರು.
ಪ್ರಚಾರದ ವೇಳೆ ಮೋಕಾ ಗ್ರಾಮ ಸೇರಿದಂತೆ ಅಕ್ಕ.ಪಕ್ಕದ ಗ್ರಾಮಗಳಿಂದಲೂ ಸಾವಿರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಅಗಮಿಸಿ ರೋಡ್ ಶೋ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಸಚಿವ ಬಿ.ನಾಗೇಂದ್ರ ಮಾತನಾಡಿ, ಇವತ್ತು ಇಲ್ಲಿ ಸೇರಿರುವ ಕಾರ್ಯಕರ್ತರ ಸಂಖ್ಯೆ ಮತ್ತು ಉತ್ಸಾಹ ನೋಡಿದ್ರೆ ನಮ್ಮ ಅಭ್ಯರ್ಥಿ ತುಕಾರಾಂ ಅವರು ಎರೆಡೂವರೆ ಲಕ್ಷ ಬಹುಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನಿಸುತ್ತದೆ, ಚುನಾವಣೆಗೂ ಮುನ್ನ  ಐದು ಗ್ಯಾರೆಂಟಿಗಳನ್ನ  ಕೊಡುವುದಾಗಿ ಹೇಳಿದ್ದೇವು ಅಗ ಬಿಜೆಪಿಯವರು ಕೊಡಲು ಸಾದ್ಯವಿಲ್ಲ ಅಂತ ಅಪ ಪ್ರಚಾರ ಮಾಡಿದ್ರು.ಇವತ್ತು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಪಂಚ ಗ್ಯಾರೆಂಟಿಗಳನ್ನ ನೀಡುವ ಮೂಲಕ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಡಿ ಯಾಕೆಂದರೆ ಅವರು ಅಧಿಕಾರಕ್ಕೆ ಬಂದರೆ ಎಲ್ಲಾ ಯೋಜನೆಗಳನ್ನ ಸ್ಥಗಿತ ಮಾಡುತ್ತಾರೆ ಅವರಿಗೆ ಬಡವರು ಉದ್ದಾರವಾಗುವುದು ಬೇಕಿಲ್ಲ,ಬಡವರನ್ನ ಬಡವರನ್ನಾಗಿಡಲು ಹವಣಿಸುತ್ತಾರೆ ಎಂದು.
ಇತ್ತೀಚೆಗೆ ಬಿಜೆಪಿಯ ಮಾಜಿ ಸಂಸದರು,  ಯಜಮಾನರೆ ಮೋಕಾ ನಾಗೇಂದ್ರ ಅವರ ಅಪ್ಪಂದ‌ ಅಂತ ಕೇಳಿದ್ದೀರಿ. ಹೌದು.. ಮೋಕಾ ನಮ್ಮಪ್ಪಂದು..ನಂದು….ಕಾಂಗ್ರೆಸ್ ಪಕ್ಷದ್ದು ಎಂದು ಅಬ್ಬರಿಸಿದರು.
ನಂತರ ಪ್ರಚಾರದ ವಾಹನದಿಂದ ಕೆಳಗಿಳಿದು ಬಂದು ಯುವಕರ ಜೊತೆ ಡಿಜೆ ಹಾಡಿಗೆ ಸಕತ್ ಸ್ಟೆಪ್ಸ್ ಹಾಕಿ ಕುಣಿದು ರಂಜಿಸಿದರು.