ತುಕರಾಂ ಗೆಲುವಿಗೆ ಹಗರಿಬೊಮ್ಮನಹಳ್ಳಿಯಲ್ಲಿಪರಿಶಿಷ್ಟ ಜಾತಿಯ ಒಗ್ಗಟ್ಟಿನ ಪ್ರದರ್ಶನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03:  ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ವಿಜಯನಗರ ಜಿಲ್ಲೆ ಹಗಿರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಮುಖಂಡರೆಲ್ಲ. ಕಾಂಗ್ರೆಸ್ ಅಭ್ಯರ್ಥಿ ಇ.ತುಕರಾಂ ಅವರ ಗೆಲಯವಿಗಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಿದರು.
ಸಭೆಯಲ್ಲಿ ಕೆಎಂಎಫ್  ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಲ್.ಬಿ.ಪಿ  ಭೀಮನಾಯ್ಕ್,  ಲಿಡ್ಕರ್ ಮಂಡಳಿಯ ಅಧ್ಯಕ್ಷ  ಮುಂಡ್ರಿಗಿ ನಾಗರಾಜ್  ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭೀಮಾನಾಯ್ಕ್,  ಕಳೆದ ನಾಲ್ಕು ವಿಧಾನ ಸಭಾ ಚುನಾವಣೆಯಲ್ಲಿ ಸಂಡೂರು‌ಕ್ಷೇತ್ರದಿಂದ ಆಯ್ಕೆಯಾಗಿರುವ ಸರಲಕ ವ್ಯಕ್ತಿತ್ವದ ತುಕರಾಂ ಅವರನ್ನು ಲೊಕಸಭೆಗೆ ಕಳಿಸಲು ನಾವೆಲ್ಲ ಶ್ರಮಿಸೋಣ, ಅವರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಬಲಪಡಿಸೋಣ ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ, ಮೀಸಲಾತಿಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ನರೇಂದ್ರ ಮೋದಿಯವರು ದಲಿತರಿಗೆ,  ಹಿಂದುಳಿದವರ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕಾಂಗ್ರೆಸ್ ಕೊಡುತ್ತಾರೆ ಎಂದು  ತಮ್ಮ ಪ್ರಚಾರ ಭಾಷಣದಲ್ಲಿ  ಸುಳ್ಳು ಹೇಳುತ್ತಾರೆ. ಮೋದಿಯವರು ನಮ್ಮ ಸಂವಿಧಾನವನ್ನು ಓದಬೇಕು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಮೀಸಲಾತಿಗೆ ಅರ್ಹರು ಎಂದು ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ನರೇಂದ್ರ ಮೋದಿಗೆ ದಲಿತರು, ಹಿಂದುಳಿದವರನ್ನು ಮುಸಲ್ಮಾನರ ವಿರುದ್ಧ ಎತ್ತಿ ಕಟ್ಟುತ್ತಾ ದ್ವೇಶದ ರಾಜಕಾರಣ ಮಾಡುತ್ತಿದ್ದಾರೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ  ಒಬ್ಬ ಕುರುಬ, ಒಬ್ಬ ಮುಸಲ್ಮಾನನಿಗಾಗಲಿ, ಒಬ್ಬ ಕ್ರಿಶ್ಚಯನ್ನರಿಗಾಗಲಿ ಟಿಕೇಟು ನೀಡಿಲ್ಲ. ಏಕೆಂದರೆ ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯೇ ಇಲ್ಲ ಅದಕ್ಕಾಗಿ  ಸರ್ವರಿಗೂ ಸಮಪಾಲು, ಸಮಬಾಳ್ವೆ ಎನ್ನುವ ಕಸಂಗ್ರೆಸ್ ನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರಲು ತುಕರಾಂ ಅವರನ್ನು ಗೆಲಿಸೋಣ ಈ ಬಗ್ಗೆ ನಮ್ಮ ಸಮುದಾಯಕ್ಕೆ ತಿಳಿಸಿ ಅವರಿಗೆ ಮತ ಹಾಕಿಸಬೇಕು ಎಂದರು. 
 ಸಭೆಯಲ್ಲಿ ಹೆಗ್ಡಾಳ್ ರಾಮಣ್ಣ, ಎಲ್.ಮಾರೆಣ್ಣ, ಕೆ. ಪರಶುರಾಮ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಕ್ಕಿ ತೊಟೇಶ್, ಮುಂತಾದವರು ಇದ್ದರು.