(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.07: ಕಳೆದ ಹಲವು ದಿನಗಳಿಂದ ಮಲೆನಾಡಿನಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಶಿವಮೊಗ್ಗದ ಬಳಿ ಇರುವ ತುಂಗಾ ಜಲಾಶಯ ತುಂಬಿ ನದಿಗೆ ನೀರನ್ನು ಹರಿ ಬಿಡಲಾಗಿದೆ.
ಬಹುತೇಕ ಈ ಬಾರಿಯ ಮುಂಗಾರಿನಲ್ಲಿ ತುಂಬಿದ ಮೊದಲ ಜಲಾಶಯ ಇದಾಗಿದೆ.
3.24 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿನ್ನೆ ಭರ್ತಿಯಾಗಿ ನದಿಗೆ 16 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಬಿಡಲಾಗಿದೆ.
ಈ ನೀತು ನಮ್ಮ ತುಂಗಭದ್ರ ನದಿಗೆ ಬಂದು ಸೇರಲಿದ್ದು. ಕೆಲ ದಿನಗಳಲ್ಲಿ ಬರಿದಾಗಿರುವ ತುಂಗಭದ್ರ ಜಲಾಶಯಕ್ಕೆ ನೀರಿನ ಒಳಹರಿವು ಇದರಿಂದಾಗಿ ಹೆಚ್ಚಳವಾಗಲಿದೆ.
ಇದು ಸಣ್ಣ ಪ್ರಮಾಣದ ನೀರಾಗಿದ್ದು ಭದ್ರ ಜಲಾಶಯದಿಂದ ನಮಗೆ ನೀರು ಬರಬೇಕು. ಅಲ್ಲದೆ ಶಿವಮೊಗ್ಗ, ದಾವಣಗೆರೆ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನದಾಗಿ ಮಳೆ ಬಿದ್ದರೆ ನಮ್ಮಜಲಾಶಯಕ್ಕೆ ನೀರಿನ ಸಂಗ್ರಹ ಹೆಚ್ಚಲಿದೆ.
ಸಧ್ಯ ಕುಡಿಯುವ ನೀರಿನ ಸಮಸ್ಯೆಗಂತೂ ನಮ್ಮಜಲಾಶಯದ ಭಾಗದ ಜನತೆಗೆ ಚಿಂತೆಯಿಲ್ಲದಂತಾಗಲಿದೆ.