ತುಂಬಿ ತುಳುಕಿದ ರಸ್ತೆಗಳು

ಬಳ್ಳಾರಿ, ಜೂ.08: ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ತರಲು ನಾಳೆಯಿಂದ ಜೂನ್ 14ರ ಬೆಳಿಗ್ಗೆ 6ರ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಇಂದು ಮಧ್ಯಾಹ್ನದವರೆಗೆ ದಿನಸಿ ಮದ್ಯ ಸೇರಿದಂತೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಖರೀದಿಗಾಗಿ ಜನ ಮುಗಿಬಿದ್ದಿದ್ದರಿಂದ ನಗರದ ರಸ್ತೆಗಳು ವಾಹನ ಮತ್ತು ಜನರಿಂದ ತುಂಬಿ ತುಳುಕಿದವು.
ಬೆಳಿಗ್ಗೆ 6ರಿಂದಲೇ ರೇಷನ್ ಅಂಗಡಿ, ಬೇಕರಿ, ಮದ್ಯ ಮೊದಲಾದ ಅಂಗಡಿಗಳ ಮುಂದೆ, ಜನ ಸಾಲಾಗಿ ನಿಂತ ಖರೀದಿ ನಡೆಸಿದ್ದರು. ಅದೇ ರೀತಿ ನಗರದ ಹಲವು ಪ್ರದೇಶದಲ್ಲಿನ ತರಕಾರಿ ಮಾರುಕಟ್ಟೆಗಳಲ್ಲೂ ಜನ ಖರೀದಿ ಭರಾಟೆ ನಡೆಸಿದ್ದರು.
ಅಲ್ಲದೆ ಅನುಮತಿ ಇಲ್ಲದಿದ್ದರೂ ಅಲ್ಲಲ್ಲಿ ಬೀದಿ ಬದಿ ಕೆಲ ಸಣ್ಣ ಮಳಿಗೆಗಳಲ್ಲಿ ಬಟ್ಟೆ ಮಾರಾಟ, ಮೊಬೈಲ್, ವಾಚ್ ರಿಪೇರಿ, ಸಣ್ಣ ಹೋಟೆಲ್ ಗಳು ತೆರೆದಿದ್ದವು. ಒಟ್ಟಾರೆ ರಸ್ತೆಗಳಲ್ಲಿ ಜನ ಜಂಗುಳಿ ಹೆಚ್ಚಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.