ತುಂಬಿಹರಿದ ಎಂ ಬಿ ಅಯ್ಯನಹಳ್ಳಿ ಕೆರೆ, ಮುಖಂಡರಿಂದ ಬಾಗಿನಾ ಅರ್ಪಣೆ.


ಸಂಜೆವಾಣಿ
ಕೂಡ್ಲಿಗಿ ನ 7 :-  ತಾಲೂಕಿನ  ಎಂ.ಬಿ.ಅಯ್ಯನಹಳ್ಳಿಯ ಕೆರಯೂ ಹಲವು ವರ್ಷಗಳ ಬಳಿಕ ತುಂಬಿಯುತ್ತಿದ್ದು ಮುಖಂಡರು ಹಾಗೂ  ಗ್ರಾಮಸ್ಥರು ಸೇರಿ ಬಾಗಿನ ಅರ್ಪಿಸಿದರು.
ಗ್ರಾಮಸ್ಥರೆಲ್ಲರೂ ಕೆರೆಯ ಬಳಿ ಸೇರಿ ಗಂಗಾ ಪೂಜೆ ನೆರವೇರಿಸಿ ದೈವಸ್ಥರ ಸಮ್ಮುಖದಲ್ಲಿ ಬಾಗಿನ ಸಲ್ಲಿಸಲಾಯಿತು.
ನಂತರ ಗ್ರಾಮ ಪಂಚಾಯತಿ ಅಧ್ಯಕ್ಷ ರೇಣುಕಾಚಾರಿ ಮಾತನಾಡಿ,  ಹಲವು ವರ್ಷಗಳ ಬಳಿಕ ಕೆರೆ ತುಂಬಿದ್ದು ಸಂತಸವಾಗಿದ್ದು, ಜನ,ಜನುವಾರುಗಳಿಗೆ ನೀರಿನ ಬವಣೆ ನೀಗಲಿದೆ ಎಂದರು.
ಮುಖಂಡರಾದ ನಾಗಭೂಷಣ, ಶರಣಪ್ಪ, ಕರಿಯಣ್ಣ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.