ತುಂಬಿದ ತುಂಗಭದ್ರೆಗೆ ಸಚಿವ ಆನಂದಸಿಂಗ್ ಬಾಗಿನ

ಹೊಸಪೇಟೆ, ಜು. ೧೪- ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು.
ವಿಶೇಷ ಪೂಜೆ ಸಲ್ಲಿಸಿ ಹಾಗೂ ಬಾಗಿನ ಅರ್ಪಿಸುವ ಮೂಲಕ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ವಿಜಯನಗರ ಶಾಸಕ ಆನಂದಸಿಂಗ್ ಗಂಗೆ,ತುಂಗೆಯರ ಪೂಜೆ ಮಾಡಿದರು.
ಜಲಾನಯನ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಳೆ ಸುರಿಯುತ್ತಿರು ವದರಿಂದ ಕಳೆದ ಹತ್ತು ವರ್ಷಗಳ ನಂತರ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿದ್ದು ನದಿಗೆ ಅಪಾರ ಪ್ರಮಾಣದ ಒಳಹರಿವು ಹರಿದು ಬರುತ್ತಿರುವುದು ಅಪಾರ ಪ್ರಮಾಣದ ನೀರು ಮೊನ್ನಯಿಂದಲೇ ಕ್ರೆಸ್ಟ್ ಗೇಟ್ ಗಳ ಮೂಲಕ ನೀರುದು ಬಿಡಲಾಗುತ್ತೀದೆ. ಇಂದು ಬೆಳಿಗ್ಗೆ ದಾಖಲಾದ ಮಾಹಿತಿಯಂತೆ ೧.೧೮ ಲಕ್ಷ ಕ್ಯೂಸೆಕ್ಸೆ ನೀರು ಸದ್ಯ ಹರಿದು ಬರುತ್ತಿದ್ದು ಅಷ್ಟೇ ಸಾಮರ್ಥ್ಯದ ೧.೧೩ಲಕ್ಷ ಕ್ಯೂಸೆಕ್ಸೆ ನೀರು ಹೊರ ಬಿಡಲಾಗುತ್ತಿದೆ. ಕಣ್ಮನ ಸೆಳೆಯುತ್ತದೆ ತುಂಗಭದ್ರೆಯ ಹೊರನೋಟ.
ತುಂಗಭದ್ರೆಯ ಹೊರನೋಟ ರಸ್ತೆಯುದ್ದಕ್ಕೂ ಸಾಗುವವರಿಗೆ ಕಣ್ಮನ ಸೆಳೆಯುತ್ತಿದೆ. ಇದೀಗ ೩೧ಕ್ರಸ್ಟ್ ಗೇಟ್ಸ್ ಗಳ ಮೂಲಕ ಹಾಗೂ ಕಾಲುವೆಗಳ ಮೂಲಕವೂ ೧.೧೩ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿತ್ತಿದೆ.
ಮತ್ತೊಂದಡೆ ಅಪಾರ ಪ್ರಮಾಣದ ನೀರು ಹರಿಬಿಟ್ಟರುವುದರಿಂದ ಐತಿಹಾಸ ಹಂಪಿ ನದಿಯಲ್ಲಿರುವ ಹಾಗೂ ನದಿ ದಂಡೆಯಲಿರುವ ಸ್ಮಾರಕಗಳು ಸಹ ಜಲಾವೃತವಾಗಿವೆ. ಗ್ರಾಮ ಪಂಚಾಯತಿ ಜನರನ್ನು ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೋಡಿದೆ. ಪೊಲೀಸ ಗೃಹ ರಕ್ಷಕರು ಸರ್ಪಗಾವಲು ಹಾಕಲಾಗಿದೆ.

ನೀರಿನ ಮಟ್ಟ
ಜಲಾಶಯದ ಗರಿಷ್ಠ ಮಟ್ಟ೧೬೩೩.೬೪ ಅಡಿ, ಇಂದು ೧೬೩೧.೨೪ ಅಡಿ, ನೀರು ಸಂಗ್ರಹಣಾ ಸಾಮರ್ಥ್ಯ ೧೦೫.೭೮೮ ಟಿಎಂಸಿ, ಇಂದಿನ ಸಾಮರ್ಥ್ಯ ೯೮.೮೦೪, ಒಳಹರಿವು:೧೧೮೧೮೩ ಕ್ಯೂಸೆಕ್ಸ, ಹೊರಹರಿವು ೧೧೪೮೨೩ ಕ್ಯೂಸೆಕ್ಸ್.