
ಸಂಜೆವಾಣಿ ವಾರ್ತೆ
ಹರಪನಹಳ್ಳಿ : ತಾಲೂಕಿನ ಜಂಗಮ ತುಂಬಿಗೆರೆ ಗ್ರಾಮದಲ್ಲಿ ನೂತನ ಭೊಗೇಶ್ವರ ರಥೋತ್ಸವ ವೈಭವದಿಂದ ಜರುಗಿತು.
ರಥೋತ್ಸವಕ್ಕೂ ಮುನ್ನ ಭೊಗೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ, ಹೋಮಹವನ, ಡೊಳ್ಳು, ಭಜನೆ, ನಂದಿಕುಣಿತದೊಂದಿಗೆ ಬೀದಿಯಲ್ಲಿ ಮೆರವಣಿಗೆ ಜರುಗಿತು.ನಂತರ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ನೂತನ ರಥೋತ್ಸವದ ಕಳಸಾರೋಹಣ ಕಾರ್ಯಕ್ರಮ.ದಿನಾಂಕ:30-3-2023 ರಾಮನವಮಿ ದಿವಸದಂದು ಆಂಜನೇಯಸ್ವಾಮಿ ಮತ್ತು ಬಸವೇಶ್ವರ ಸ್ವಾಮಿಗಳ ಉಚ್ಛಯ್ಯಗಳು ಜರುಗಿದವು.
ಗ್ರಾಮದ ಹೊರಹೊಲಯದಲ್ಲಿರುವ ಐತಿಹಾಸಿಕ ಭೊಗೇಶ್ವರ ದೇವಸ್ಥಾನದಲ್ಲಿ ಭಕ್ತಸಮೂಹ ಪೂಜೆ ನೆರವೇರಿಸಿದರು.ಸಂಜೆ 5ಗಂಟೆಗೆ ನೂತನ ರಥೋತ್ಸವಕ್ಕೆ ಹಣ್ಣು,ಉತ್ತತ್ತಿ ಎಸೆದು,ತೆಂಗಿನ ಕಾಯಿ ಸಮರ್ಪಿಸಿ ಭಕ್ತಿ ಪರ್ವಮೆರೆದರು.ರಥೋತ್ಸವಕ್ಕೆ ನೆರೆಹೊರೆಯ ಗ್ರಾಮದ ಗಡಿಗುಡಾಳ್, ಶ್ರೀನಿವಾಸಪುರ, ಅಣಜಿಗೆರೆ, ರಾಮಘಟ್ಟ, ಉಚ್ಚಂಗಿದುರ್ಗ ಸೇರಿದಂತೆ ಭಕ್ತರು ಆಗಮಿಸಿ ದೈವ ಭಕ್ತಿಗೆ ಪಾತ್ರರಾದರು.
ಗ್ರಾಮಪಂಚಾಯಿತಿ ಸದಸ್ಯ ಟಿ.ಶಿವಣ್ಣ ಅವರು ರೂ 265000 ಕ್ಕೆ ಪಟ ಹರಾಜು ಪಡೆದರು.ಕೆ ಬಿ.ಅಜ್ಜನಗೌಡ ಅವರು ರೂ 35000 ಕ್ಕೆ ಹೂವಿನ ಹಾರ ಹರಾಜು ಪಡೆದರು.
ಜಂಗಂತುಂಬಿಗೆರೆ ಹಾಲಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಸಂದರ್ಭದಲ್ಲಿ ಮುಖಂಡರಾದ ಪರುಶರಾಮಪ್ಪ,ಈ.ಹಾಲೇಶ್, ರಮೇಶ್, ಟಿ.ಎಂ.ರವೀಂದ್ರ, ಅಜ್ಜನಗೌಡ್ರು, ದ್ಯಾಮನಗೌಡ, ಟಿ.ಶಿವಣ್ಣ, ಹನುಮಂತಪ್ಪ, ಜ್ಯೋತಿ ಪರುಶರಾಮ್, ಜಯ್ಯಮ್ಮ ಹಿರೇಗೌಡ, ಮಂಜಕ್ಕ ಕೊಟ್ರೇಶಪ್ಪ, ರುದ್ರೇಶ್, ಸೇರಿದಂತೆ ಭಾಗವಹಿಸಿದ್ದರು.