ತುಂಬಾಕು ಮುಕ್ತ  ಸಮಾಜ ನಿರ್ಮಾಣಕ್ಕೆ ಕರೆ


ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.11: ‌ನಗರದ 20 ನೇ ವಾರ್ಡ್ ಶ್ರೀ ದುರ್ಗಾದೇವಿ ದೇವಸ್ಥಾನ ಚಲವಾದಿ ಓಣೆಯಲ್ಲಿ ಶ್ರೀ  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಡಿಯಲ್ಲಿ  ಕ್ಷಯ ರೋಗ ಹಾಗೂ ತುಂಬಾಕು ನಿಯಂತ್ರಣ ಕಾರ್ಯಗಾರವನ್ನು ಉಪನ್ಯಾಸಕಿ ಲಲಿತಾ ನಾರಾಯಣ್ ಕಂದಗಲ್ ಉದ್ಘಾಟಿಸಿದರು..
ನಂತರ ಉದ್ಘಾಟಿಸಿ ಮಾತನಾಡಿದ ಅವರು  ತುಂಬಾಕು ಸೇವನೆಯಿಂದ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ ಆದಕಾರಣ ನಿಮ್ಮ ನಿಮ್ಮ ಮನೆಯಲ್ಲಿ ಯಾರಾದ್ರು ಸಿಗರೇಟ್ ಚುಟ್ಟಾ ಸೇದಿದ್ದರೆ ಮನೆಯಲ್ಲಿ ಮಕ್ಕಳಿಗೂ ಕೂಡ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಆದಕಾರಣ ನಿಮ್ಮ ಮನೆಯಲ್ಲಿ ಹಿರಿಯರಿಗೆ ಹೇಳಿ. ಏಕೆಂದರೆ ಈ ಒಂದು ಚಟ್ಟದಿಂದ ನಿಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಆದಕಾರಣ  ನಾವು ನೀವು ಸೇರಿಕೊಂಡು ತುಂಬಾಕು ಮುಕ್ತ  ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು.ಪ್ರತಿಯೊಂದು ಮನೆಯ ಮುಂದು ಒಂದು ಸಸಿಯನ್ನು ನೆಡಬೇಕು ಆ ಒಂದು ಸಸಿ ನಾಳೆ ದೊಡ್ಡಮರವಾಗಿ ಬೆಳದರೆ ಒಳ್ಳೆಯ ಗಾಳಿ ಸಿಗುತ್ತದೆ. ಕಾರಣ ಪ್ರತಿಯೊಂದು ಮನೆಯ ಮುಂದೆ ಒಂದು ಸಸಿಯನ್ನು ನೆಡಬೇಕು ಎಂದು  ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಪಾಟೀಲ್, ಖಾಸೀಂಬಿ,ನೆಹನಾಜ್, ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮಿ, ಶಾರದ,ಮಂಜುಳಾ ಸೇರಿದಂತೆ ಇತರರು ಇದ್ದರು