ತುಂತೂರು ಮಳೆಯಲ್ಲಿಯೂ ಕಾರ್ತೀಕ ಮಾಸದ ಸೋಮವಾರದ ಸ್ವಾಮಿ ದರ್ಶನಕ್ಕೆ ಆಗಮಿಸಿದ ಭಕ್ತ ಸಾಗರ

ನಂಜನಗೂಡು: ನ 16. ಕಾರ್ತಿಕ ಮಾಸದ ಪ್ರಥಮ ಸೋಮವಾರದ ಪ್ರಯುಕ್ತ ರಾಜ್ಯದ ನಾನಾ ಜಿಲ್ಲೆಗಳಿಂದ ತುಂತುರು ಮಳೆಯನ್ನು (ಜಿಟಿ ಜಿಟಿ ಮಳೆ)ಲೆಕ್ಕಿಸದೆ ಶ್ರೀಕಂಠೇಶ್ವರಸ್ವಾಮಿ ಸನ್ನಿಧಿಯ ಧರ್ಶನಕ್ಕೆ ಹರಿದು ಬಂದ ಭಕ್ತಸಾಗರ.


ಕಳೆದ 8ತಿಂಗಳಿಂದಲೂ ಕೊರೋನ ವೈರಸ್ ಮಹಾಮಾರಿಯ ಕರಣದಿಂದ ಶ್ರೀಕಂಠೇಶ್ವರ ಸ್ಸ್ವಾಮಿಯ ದರ್ಶನ ಕಾಣದ ಭಕ್ತ ಸಾಗರ ಕಪಿಲಾ ನದಿಯಲ್ಲಿ ಮಿಂದು ಸ್ನಾನ ಸಂಧ್ಯಾವಂದನೆಗಳನ್ನು, ಮುಡಿಸೇವೆ, ಉರುಳುಸೇವೆ, ತುಲಾ ಭಾರ, ವಿವಿಧ ಅಭಿಷೇಕಗಳನ್ನು ಒಳಗೊಂಡ ಸೇವೆಗೆ ಭಕ್ತರು ಆಗಮಿಸಿ ಶ್ರೀಕಂಠೇಶ್ವರಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು
ದರ್ಶನ ಪಡೆದರು.


ಜಿಲ್ಲಾಅಧಿಕಾರಿಗಳ ಆದೇಶದಂತೆ ಕಳೆದ 8ತಿಂಗಳು ದೇವಸ್ಥಾನದ ಮುಖ್ಯ ಬಾಗಿಲುಗಳನ್ನು ಮುಚ್ಚಿ, ಹಬ್ಬ ಹರಿಗಳು, ಹುಣ್ಣಿಮೆ,ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಭಕ್ತರು ಆಗಮಿಸದಂತೆ ನಿರ್ಭಂದಹಾರಲಾಗಿತ್ತು, ಆದರೆ ಪ್ರಥಮ ಕಾರ್ತಿಕ ಸೋಮವಾರದ ಪ್ರಯುಕ್ತ ಇಂದು ದೇವಸ್ಥಾನದ ಸಂಪೂರ್ಣ ಬಾಗಿಲನ್ನು ತೆರೆದು ದರ್ಶನಕ್ಕೆ ಆನುವು ಮಾಡಿಕೊಟ್ತ ಹಿನ್ನೆಲೆಯಲ್ಲಿ ಇಂದು ದೇವಸ್ಥಾನದ ಎಲ್ಲಾ ಸೇವಾ ಸೌಭಾಗ್ಯಗಳು ದೊರೆತು ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಭಯ-ಭಕ್ತಿಗಳಿಂದ ಸೇವೆ ಪಡೆದು ಪುನೀತರಾದರು.
ಶಿವಾ ಹಾಗೂ ಮಹಾವಿಷ್ಣುವಿನ ನŒದೂಏ ಭೆದವಿಲ್ಲ, ಹೀಗಾಗಿ ಕಾರ್ತಿಕಮಾಸ, ಹರನಂತೆ ಹರಿಗೂ ಪ್ರಿಯವಾದ ಮಾಸ. ಹೀಗಾಗಿ ಮಹಾವಿಷ್ಣು ಯೋಗ ನಿದ್ರೆಯಿಂದ ಈ ಮಾಸದಲ್ಲಿ ಎಚ್ಚೆತ್ತುಕೊಳ್ಳುತ್ತಾನೆ. ನಾರಾಯಣನಿಗೆ ಪ್ರಿಯವಾದ ಮಾಸವೇ ಲಕ್ಷ್ಮಿಗೂ ಅತ್ಯಂತ ಪ್ರಿಯವಾದ ಮಾಸ. ಈ ಮಾಸದಲ್ಲಿ ಲಕ್ಷ್ಮಿಭೂಮಿಗೆ ಬಂದು ತನ್ನ ಭಕ್ತರನ್ನು ಹಾರಸುತ್ತಾಳೆ ಎನ್ನುವ ಪ್ರತೀತಿ ಇದೆ. ಇಂತಹ ಪವಿತ್ರ ಮಾಸದಲ್ಲಿ ಶಿವನ ಜೊತೆಗೆ ಲಕ್ಷ್ಮಿನಾರಾಯಣನನ್ನು ಆರಾಧಿಸಿದರೆ ಲಯದ ಭಯವಿಲ್ಲದೆ ಲಕ್ಷ್ಮಿಪುತ್ರರಾಗಿ ಬದುಕಬಹುದು ಎಂಬುದು ನಂಬಿಕೆ.
ಈ ಸಂದರ್ಭದಲ್ಲಿ ಪೆÇಲೀಸ್ ಇಲಾಖೆ, ಮತ್ತು ದೇವಸ್ಥಾನದ ಸಮಿತಿ ಅಧಿಕಾರಿಗಳು, ಸದಸ್ಯರುಗಳು, ಭಕ್ತರಿಗೆ ಸೇವೆ ಮಾಡಲು ಅವಕಾಶ ನೀಡಿ ಸ್ಪಂದಿಸಿದರು.