ತುಂತುರು ಮಳೆಗೆ ಬಿತ್ತನೆ ಜೋರು!


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.15: ಒಂದು ವಾರದಿಂದ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಕೊಟ್ಟೂರು ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಿತ್ತನೆಯ ಕಾರ್ಯ ಜೋರಾಗಿದೆ!
ಹ್ಯಾಳ್ಯಾ, ಮಲ್ಲನಾಯಕನಹಳ್ಳಿ, ದೂಪದಹಳ್ಳಿ, ಕಂದಗಲ್ಲು ಈ ಭಾಗಗಳಲ್ಲಿ ಮಳೆ ಸುರಿದಿತ್ತು ಆದರೇ ತೇವಾಂಶ ಕಡಿಮೆ ಇದ್ದ ಪರಿಣಾಮವಾಗಿ ರೈತರ ಬಿತ್ತನೆ ಕಡಿಮೆಯಾಗಿತ್ತು ಈಗ ಒಂದು ವಾರದಿಂದ ತುಂತುರು ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ.
ಸತತ ಒಂದು ವಾರದಿಂದ ತುಂತುರು ಮಳೆ ಸುರಿತ್ತಿರುವುದರಿಂದ ಹ್ಯಾಳ್ಯಾ, ಮೋತಿಕಲ್ ತಾಂಡ ಮಲ್ಲಕನಾಯಕನಹಳ್ಳಿ, ಬೇವೂರು,  ಬೋರನಹಳ್ಳಿ, ಭಾಗಗಳಲ್ಲಿ ಬೀಜ ಬಿತ್ತನೆ ಮಾಡುವುದು ಜೋರಾಗಿದೆ.
ಮುಂಗಾರು ಮಳೆಯಿಂದಾಗಿ ಕಾಳಾಪುರ, ನಡುಮಾವಿನಹಳ್ಳಿ, ರಾಂಪುರ, ಅಯ್ಯನಹಳ್ಳಿ, ಹರಾಳು, ಈ ಭಾಗಗಳಲ್ಲಿ ಮುಂಗಾರು ಮಳೆಯು ಬೀಜ ಮೊಳಕೆ ಒಡೆಯುವ ಮಟ್ಟಿಗೆ ತೇವಾಂಶ ಭರಿತ ಮಳೆ ಸುರಿದಿದ್ದು ರೈತರು ಮೆಕ್ಕೆಜೋಳ, ರಾಗಿ, ಜೋಳ, ಬೆಳೆಗಳನ್ನು ಬಿತ್ತನೆ ಮಾಡಿದ್ದರು.
ಈ ಪ್ರದೇಶದಲ್ಲಿ ವಾರ್ಷಿಕ ಮಳೆ ಆಗುವುದಕ್ಕಿಂತ 30ರಷ್ಟು ಮಳೆ ಅಷ್ಟೇ ಸುರಿದಿದೆ ಒಂದು ವಾರದಿಂದ  ತುಂತುರು ಮಳೆಯಿಂದಾಗಿ ರೈತರು ಬೀಜ ಬಿತ್ತನೆ ಮಾಡೋದಕ್ಕೆ ಕಾರ್ಯನಿರತರಾಗಿದ್ದಾರೆ.

ಕೊಟ್ಟೂರು ಹೋಬಳಿ
 ಒಟ್ಟು ಪ್ರದೇಶ 23೦೦೦ ಹೆಕ್ಟರ್
ಬಿತ್ತನೆಯಾದ ಪ್ರದೇಶ 15000 ಹೆಕ್ಟರ್
 ಬಿತ್ತನೆಯಾಗಬೇಕಾದ ಪ್ರದೇಶ 8,000 ಹೆಕ್ಟರ್. ತುಂತುರು ಮಳೆಯಿಂದಾಗಿ ರೈತರು ಮೆಕ್ಕೆಜೋಳವನ್ನು 80 ರಷ್ಟು, ರಾಗಿ 10 ರಷ್ಟು, ಸಜ್ಜೆ 5 ರಷ್ಟು ಬೀಜ ಬಿತ್ತನೆ ಮಾಡುವುದರಲ್ಲಿ ಕಾರ್ಯನಿರತರಾಗಿದ್ದಾರೆ.

 ರೈತರ ಸಂಪರ್ಕ ಕೇಂದ್ರದಿಂದ 80ರಷ್ಟು ಮೆಕ್ಕೆಜೋಳ ಬೀಜವನ್ನು ವಿತರಣೆ ಮಾಡಲಾಗಿದೆ. ತುಂತುರು ಮಳೆಗೆ ಬೀಜ ಬಿತ್ತನೆ ಕಾರ್ಯವನ್ನು ರೈತರು ಪ್ರಾರಂಭಿಸಿದ್ದಾರೆ
  ಶಾಮ್ ಸುಂದರ್
 ಕೃಷಿ ಅಧಿಕಾರಿ ಕೊಟ್ಟೂರು