ತುಂಡುಡುಗೆ ಧರಿಸುತ್ತಿದ್ದಪತ್ನಿ ಕೊಂದ ಪತಿ

ಹಾಸನ,ಡಿ.೩೧- ಪತ್ನಿ ತುಂಡುಡುಗೆ ಧರಿಸುತ್ತಾಳೆಂದು ಆಕ್ರೋಶಗೊಂಡ ಪತಿ ಆಕೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ರಾಂಪುರ ಗ್ರಾಮದ ಜ್ಯೋತಿ (೨೨) ಕೊಲೆಯಾದವರು,ಕೃತ್ಯ ನಡೆಸಿ ಪರಾರಿಯಾಗಿರುವ ಆಕೆಯ ಪತಿ ಜೀವನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಧಾರವಾಡ ಮೂಲದ ಜ್ಯೋತಿ ಹಾಗೂ ಜೀವನ್ ಇಬ್ಬರೂ ಪರಸ್ಪರ ಪ್ರೀತಿಸಿ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದ ಬಾಡಿಗೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಜ್ಯೋತಿ ತುಂಡು ಬಟ್ಟೆ ಧರಿಸುವುದು, ಮಾಡರ್ನ್ ಉಡುಪು ಧರಿಸುವುದನ್ನು ಈಕೆಯ ಪತಿ ಜೀವನ್ ವಿರೋಧಿಸುತ್ತಿದ್ದ. ಹೀಗಾಗಿ ಬಟ್ಟೆ ವಿಚಾರಕ್ಕೆ ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು.ಜ್ಯೋತಿ ನಿನ್ನೆ ಮಾಡರ್ನ್ ಬಟ್ಟೆ ಧರಿಸಿ ಹೊರಗೆ ಹೊರಟ್ಟಿದನ್ನು ಗಮನಿಸಿದ ಪತಿ ಜೀವನ್ ಡ್ರಾಪ್ ಮಾಡುವುದಾಗಿ ಹೇಳಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.