
ಮಕ್ಕಳ ಚಿತ್ರಗಳು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಮತ್ತೊಂದು ಮಕ್ಕಳ ಚಿತ್ರ ” ತುಂಟರು ಸೆಟ್ಟೇರಿದೆ. ಚಿತ್ರದ ಎಲ್ಲಾ ಪಾತ್ರಗಳಲ್ಲೂ ಮಕ್ಕಳೆ ಅಭಿನಯಿಸುತ್ತಿರುವುದು ವಿಶೇಷ.ಆರ್ಯವರ್ಧನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ
ಮಹೂರ್ತದ ಬಳಕ ಮಾತಿಗಿಳಿದ ನಿರ್ದೇಶಕರು, ಚಿತ್ರದಲ್ಲಿ ಸುಮಾರು 45 ರಿಂದ 50 ಮಕ್ಕಳು ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕ, ನಾಯಕಿ, ಪೋಷಕಪಾತ್ರಗಳಲ್ಲಿ ಮಕ್ಕಳೆ ಕಾಣಿಸಿಕೊಳ್ಳುತ್ತಿದ್ದಾರೆ. “ತುಂಟರು” ಚಿತ್ರಕ್ಕೆ “ಪೋಲಿ ಹುಡುಗರು” ಎಂಬ ಅಡಿಬರಹವಿದೆ . ಇದೊಂದು ಲವ್ ಜಾನರ್ ನ ಸಿನಿಮಾ ಎನ್ನುವ ಮಾಹಿತಿ ಹಂಚಿಕೊಂಡರು. ಹದಿನೈದು ದಿನಗಳ ಕಾಲ ಕೆಂಗೇರಿಯ ಕಾಲೋನಿಯೊಂದರಲ್ಲಿ ಚಿತ್ರೀಕರಣ ನಡೆಯಲಿದೆ. ಜೂನ್ ನಲ್ಲಿ ಮಕ್ಕಳಿಗೆ ಶಾಲೆ ಆರಂಭವಾಗುವುದರಿಂದ ಶನಿವಾರ ಹಾಗೂ ಭಾನುವಾರ ಚಿತ್ರೀಕರಣ ಮಾಡುವುದಾಗಿ ತಿಳಿಸಿದ್ದಾರೆ.
ನಿರ್ಮಾಪಕರ ಪೈಕಿ ನಾಗರಾಜ್ ಹಾಗೂ ಕಲಾವಿದರ ಬಳಗದಿಂದ ಸ್ನೇಹ ಚಿತ್ರದ ಕುರಿತು ಮಾತನಾಡಿದರು. ಹರ್ಷ ಕಾಗೋಡ್ ಸಂಗೀತ ನಿರ್ದೇಶನ ಹಾಗೂ ಸೂರ್ಯ ಛಾಯಾಗ್ರಹಣ “ತುಂಟರು” ಚಿತ್ರಕ್ಕಿದೆ.
ಬಹಳ ದಿನಗಳ ನಂತರ ಮಕ್ಕಳ ಚಿತ್ರ ಸೆಟ್ಟೇರಿರುವುದು ಚಿತ್ರತಂಡ ಖುಷಿಯಿಂದ ಕೆಲಸ ಮಾಡುತ್ತಿದ್ದ. ಬೇಸಿಗೆ ರಜೆ ಅವಧಿಯಲ್ಲಿಯೇ ಚಿತ್ರೀಕರಣ ಪೂರ್ಣಗೊಳಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.