ತುಂಗಭದ್ರ ಹೂಳು ತೆಗೆಯಲುಮೋದಿಗೆ ಉಗ್ರಪ್ಪ ಪತ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:  ತುಂಗಭದ್ರಾ ‌ಜಲಾಶಯದಲ್ಲಿನ  ಹೂಳು ತೆಗೆಯಬೇಕೆಂದು ಪ್ರಧಾನಿ ಮೋದಿ ಮತ್ತು ಸಂಬಂಧಿಸಿದ ಕರ್ನಾಟಕ, ತೆಲಂಗಾಣ ಮತ್ತು ಅಸಂದ್ರ ಪ್ರದೇಶದ ಮುಖ್ಯ ಮಂತ್ರಿಗಳಿಗೆ  ಪತ್ರ ಬರೆದಿರುವುದಾಗಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ಅವರು ನಿನ್ನೆ  ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸಿ. ಗಂಗಾ ಕಾವೇರಿ, ಗೋದಾವರಿ ಕಾವೇರಿ ನದಿ ಜೋಡಣೆ ಮಾಡಯವ ಬಗ್ಗೆ  ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. ಆದರೆ ಈ ಬಗ್ಗೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಸಧ್ಯ  ತುಂಗಭದ್ರಾ ಡ್ಯಾಂ ನ ಊಳಿನ ಸಮಸ್ಯೆಯನ್ನಾದರೂ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
 ತುಂಗಭದ್ರ ಜಲಾಶಯ 28,180 ಚದುರ ಮೀಟರ್ ರ್ಪ್ರದೇಶ ಇದೆ. ಈ  ಡ್ಯಾಂ ಮೂಲಕ ಪ್ರತಿ ವರ್ಷ ನೂರಾರು ಟಿಎಂಸಿ ನೀರು ಹರಿದು ಸಮುದ್ರದ ಪಾಲಾಗ್ತಿದೆ. 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರೋ ಜಲಾಶಯದಲ್ಲಿ 28 ಟಿಎಂಸಿ  ಹೂಳು ತುಂಬಿದೆ.
ನೀರನ್ನು ರಾಷ್ಟ್ರೀಯ ಸಂಪತ್ತಾಗಿ ಘೋಷಣೆ ಮಾಡಿ.
ತುಂಗಭದ್ರ ಡ್ಯಾಂ ಊಳನ್ನ ತೆಗೆಯಲು ರಾಷ್ಟ್ರೀಯ ಯೋಜನೆ ಮಾಡಿ. ತುಂಗಭದ್ರ ಮಂಡಳಿಗೆ ನಿರ್ದೇಶನ ನೀಡಿ ಡ್ಯಾಂನ ಊಳು ತೆಗೆಯಲು ವರದಿ ಪಡೆದು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

One attachment • Scanned by Gmail