ತುಂಗಭದ್ರ ಸಭಾಂಗಣದಲ್ಲಿ ಅಂಬೇಡ್ಕರ್ – ಜಗಜೀವನರಾಂ ಜಯಂತಿ ಸರಳ ಆಚರಣೆ

ದಾವಣಗೆರೆ, ಮಾ.೨೪; ಕೋವಿಡ್ ನಿಯಮಾವಳಿಗಳ ಪಾಲನೆಯೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏಪ್ರಿಲ್ 14 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯ ವೇದಿಕೆ ಕಾರ್ಯಕ್ರಮವನ್ನು ಹಾಗೂ ಏಪ್ರಿಲ್ 05 ರಂದು ಡಿಸಿ ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಜಯಂತಿಯನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.     ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ  ಏರ್ಪಡಿಸಲಾಗಿದ್ದ ಡಾ.ಬಾಬು ಜಗಜೀವನ್ ರಾಂ ರವರ 114ನೇ ಜನ್ಮ ದಿನಾಚರಣೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್‌ರವರ 130ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಕೇಂದ್ರದಲ್ಲಿ ಆಚರಣೆ ಮಾಡುವ ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.     ಸಾಂಪ್ರದಾಯಿಕವಾಗಿ ಎಲ್ಲ ಜಯಂತಿಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಪ್ರಾಕೃತಿಕ ವಿಕೋಪ, ಚುನಾವಣೆ ಸಮಯದಲ್ಲಿ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿಯೂ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಗಿತ್ತು. ಆದರೆ ಪ್ರಸ್ತುತ 62 ಸಕ್ರಿಯ ಕೊರೊನಾ ಪ್ರಕರಣ ಇರುವ ಪ್ರಯುಕ್ತ ಪರಿಸ್ಥಿತಿ ನಾಜೂಕಾಗಿದೆ. ಕೊರೊನಾ ಎರಡನೇ ಅಲೆಯ ಭೀತಿಯಲ್ಲಿದ್ದೇವೆ. ಇನ್ನೂ ನಾವು ಕೊರೊನಾ ಯುದ್ದದಿಂದ ಹೊರಬಂದಿಲ್ಲ. ಈ ಹಿನ್ನೆಲೆಯಲ್ಲಿ ಬಾಬು ಜಗಜೀವನರಾಂ ಮತ್ತು ಅಂಬೇಡ್ಕರ್‌ರವರ ಜಯಂತಿಗಳನ್ನು ಹೇಗೆ ಆಚರಿಸಬೇಕೆಂಬ ಬಗ್ಗೆ ದಲಿತ ಸಂಘಟನೆಗಳ ಪದಾಧಿಕಾರಿಗಳು ಮತ್ತು ಮುಖಂಡರು ಸಲಹೆ-ಸೂಚನೆಗಳನ್ನು ನೀಡಬೇಕೆಂದರು.      ದಲಿತ ಕಾರ್ಮಿಕರ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಎನ್. ಬಾಲಾಜಿ ಮಾತನಾಡಿ, ಕೃಷಿಗೆ ಮತ್ತು ಸಂವಿಧಾನ ರಚನೆಗೆ ಒತ್ತನ್ನು ನೀಡಿದಂತಹ ಮಹಾನ್ ಚೇತನರನ್ನು ಸ್ಮರಿಸುವಂತಹ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ದಲಿತ ಸಮುದಾಯಗಳ ಆರ್ಥಿಕ ಸಬಲೀಕರಣದಲ್ಲಿ ಹಿನ್ನೆಲೆಯಲ್ಲಿ ಈ ವರ್ಷ ಅಂಬೇಡ್ಕರ್ ಜಯಂತಿಯAದು ದಲಿತರ ಬೇಡಿಕೆಯ ದಿನವನ್ನಾಗಿ  ಆಚರಿಸಬೇಕು. ಶಾಸಕರು, ಸಂಸದರು, ಜನಪ್ರತಿನಿಧಿಗಳು ಮತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಮುಖಂಡರುಗಳನ್ನು ಕರೆತಂದು ಅವರ ಸಮ್ಮುಖದಲ್ಲಿ ತಮ್ಮ ಬೇಡಿಕೆಯನ್ನು ಇಟ್ಟು ಸರ್ಕಾರಕ್ಕೆ ಈ ಬೇಡಿಕೆಗಳನ್ನು ಸಲ್ಲಿಸುವಂತೆ ಆಚರಿಸಬೇಕೆಂದು ಮನವಿ ಮಾಡಿದರು.ಡಿಎಸ್‌ಎಸ್ ರಾಜ್ಯ ಸಂಚಾಲಕ ಮಲ್ಲೇಶಪ್ಪ ಮಾತನಾಡಿ, ಅಂಬೇಡ್ಕರ್ ಜಯಂತಿ ಆಚರಣೆಗೆ ಸಾಮಾನ್ಯವಾಗಿ ಚುನಾವಣೆಗಳು ಅಡ್ಡಿ ಮಾಡುತ್ತಿದ್ದು, ಕಳೆದ ವರ್ಷ ಕೊರೊನಾದಿಂದ ಸರಳ ಆಚರಣೆ ಮಾಡಲಾಗಿತ್ತು. ಇದರಿಂದಾಗಿ ಅಂಬೇಡ್ಕರ್‌ರವರ ಚಿಂತನೆ, ಆದರ್ಶಗಳು, ವಿಚಾರಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ದಾವಣಗೆರೆ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಅನೇಕ ವರ್ಷಗಳಿಂದ ಬೇಡಿಕೆ ಇಟ್ಟಿದ್ದೇವೆ. ಈ ವರ್ಷ ಜಯಂತಿಯ ವೇಳೆಗಾದರೂ ಶಂಕು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು. ದಲಿತ ಚಳುವಳಿಗೆ  ಚೈತನ್ಯ ತುಂಬಿದ ಕರ್ನಾಟಕದ ಪ್ರೊ.ಬಿ.ಕೃಷ್ಣಪ್ಪ ರವರ ಸಮುದಾಯ ಭವನ ಹರಿಹರದ ಮೈತ್ರಿವನದಲ್ಲಿದ್ದು ಇದನ್ನು ಟ್ರಸ್ಟ್ಗೆ ವಹಿಸಿರುವುದು ಸರಿಯಲ್ಲ. ಈ ಬಗ್ಗೆ ನಮ್ಮ ಆಕ್ಷೇಪ ಇದ್ದು, ಈ ಭವನವನ್ನು ಸರ್ಕಾರ ವಹಿಸಿಕೊಂಡು ಸಾರ್ವಜನಿಕರಿಗೆ ಮುಕ್ತವಾಗಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಡಿಎಸ್‌ಎಸ್ ದಾವಣಗೆರೆ ಜಿಲ್ಲಾಧ್ಯಕ್ಷರಾದ ದುಗ್ಗಪ್ಪ ಮಾತನಾಡಿ, ಸತತವಾಗಿ 3 ವರ್ಷಗಳಿಂದ ಚುನಾವಣೆ ಮತ್ತಿತರೆ ಕಾರಣಗಳಿಂದ ಮೆರವಣಿಗೆ ನಡೆಯದೇ ಸರಳವಾಗಿ ಜಯಂತಿಯನ್ನು ಆಚರಿಸಲಾಗಿದೆ. ಆವರಗೆರೆಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು. ಹಾಗೂ ಜಯಂತಿಯ ಸಂದರ್ಭದಲ್ಲಿ ಅಂಬೇಡ್ಕರ್ ಭವನ ಶಂಕುಸ್ಥಾಪನೆ ನೆರವೇರಿಸಬೇಕೆಂದು ಮನವಿ ಮಾಡಿದರು.ಡಿಎಸ್‌ಎಸ್ ತಾಲ್ಲೂಕು ಕಾರ್ಯದರ್ಶಿ ವಿಶ್ವನಾಥ್ ಮಾನತಾಡಿ, ಹರಿಹರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗದ ತೊಂದರೆಯಿದ್ದು, ದಲಿತ ಜನಾಂಗದವರು ಸಭೆ, ಸಮಾರಂಭಗಳನ್ನು ಮಾಡಬೇಕಾದರೆ  ಬಾಡಿಗೆ ಕಟ್ಟಡ ತೆಗೆದುಕೊಂಡು ಮಾಡುವಂತಹ ಪರಿಸ್ಥಿತಿಯಿದ್ದು ಅಂಬೇಡ್ಕರ್ ಭವನದ ಅವಶ್ಯಕತೆ ಇದೆ. ಹಾಗೂ ಅಂಬೇಡ್ಕರ್ ಮತ್ತು ಪ್ರೊ. ಬಿ.ಕೃಷ್ಣಪ್ಪರವರ ಪುತ್ಥಳಿಗಳನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.ಮುಖಂಡರಾದ ಮಂಜುನಾಥ್ ಮಾತನಾಡಿ, ಅಂಬೇಡ್ಕರ್‌ರವರು ದಲಿತರಿಗೆ ಮಾತ್ರ ಸೀಮಿತ ಅಲ್ಲ. ಡಾ.ಅಂಬೇಡ್ಕರ್‌ರವರ ಜೀವನಯಾನ ಬಿಂಬಿಸುವ “ಭಾರತ ಭಾಗ್ಯ ವಿಧಾತ” ಕಿರುಚಿತ್ರವನ್ನು ಜಯಂತಿಯಂದು ಪ್ರದರ್ಶಿಸಬೇಕೆಂದರು.ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಕರು ಹಾಗೂ ಡಾ.ಬಾಬು ಜಗಜೀವನರಾಂ ರೀಸರ್ಚ್ ಸ್ಟಡಿ ಸೆಂಟರ್‌ನ ಛೇರ್ಮನ್ ಹೆಚ್.ವಿಶ್ವನಾಥ್ ಮಾತನಾಡಿ,  ರಾಷ್ಟç ಕಂಡ ಎರಡು ಧ್ರುವತಾರೆಗಳ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಬಾಬು ಜಗಜೀರಾಂರವರ ಮೌಲ್ಯಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಪ್ರಬುದ್ದ ಭಾರತದ ಕನಸು ಅವರದ್ದಾಗಿತ್ತು. ಅಂಬೇಡ್ಕರ್ ಮತ್ತು ಜಗಜೀವನರಾಂರವರ ಇಬ್ಬರ ಜಯಂತಿಗಳೂ ಒಂದೇ ವೇದಿಕೆಯಲ್ಲಿ ಆಚರಿಸಿದರೆ ಸೂಕ್ತ. ಅಂಬೇಡ್ಕರ್‌ರವರು ಒಂದೇ ಸಮುದಾಯದ ಆಸ್ತಿಯಲ್ಲ. ಇಡೀ ದೇಶದ ಆಸ್ತಿ ಅವರಾಗಿದ್ದು ಎಲ್ಲರೂ ಕೈಜೋಡಿಸಿ ಜಯಂತಿಗಳ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕು.ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ನಿರ್ಮಾಣ ಕುರಿತು ಎಂಎಲ್‌ಎ ಮತ್ತು ಜನಪ್ರತಿನಿಧಿಗಳ ಸಭೆ ಕರೆದು ಶಂಕುಸ್ಥಾಪನೆ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಹೇಳಿದಂತೆ ಬೇರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಜಯಂತಿ ಆಚರಣೆ ಆಗಬೇಕು ಎಂದರು,ಆದಿಜಾಂಬವ ಸಂಘದ ಅಧ್ಯಕ್ಷರಾದ ಟಿ.ರಮೇಶ್ ಮಾತನಾಡಿ, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಹಾಯಧನ ನೀಡಿದರೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.    ಮುಖಂಡರಾದ ಹೆಚ್.ಹುಲಿಗೇಶ್ ಮಾತನಾಡಿ, ಅಂಬೇಡ್ಕರ್ ದಲಿತ ಸಮುದಾಯಕ್ಕೆ ಮಾತ್ರ ಸೀಮಿತ ಅಲ್ಲ. ಅವರೊಬ್ಬ ವಿಶ್ವನಾಯಕ. ಅಂಬೇಡ್ಕರ್ ಸಂವಿದಾನ ರಚಿಸದಿದ್ದರೆ, ಪ್ರೊ ಬಿ.ಕೃಷ್ಣಪ್ಪ ಹೋರಾಡದಿದ್ದರೆ ನಾವಿಂದು ತಲೆ ಎತ್ತಿ ಓಡಾಡಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹಾನ್‌ವ್ಯಕ್ತಿಗಳ ಜಯಂತಿಯ ಸಭೆಗೆ ಕೇವಲ ದಲಿತ ಮುಖಂಡರನ್ನು ಆಹ್ವಾನಿಸಿದರೆ ಸಾಲದು. ಶಾಸಕರು, ಎಲ್ಲ ಜನಪ್ರತಿನಿಧಿಗಳನ್ನು ಕರೆಯಬೇಕು. ಹಾಗೂ ಎಲ್ಲರೂ ಒಳಗೊಂಡು ಜಯಂತಿ ಆಚರಿಸಬೇಕೆಂದರು.    ಮುಖಂಡರು ಹಾಗೂ ಸಿಪಿಐ ಪಕ್ಷದ ಉಮೇಶ್ ಮಾತನಾಡಿ, ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಯಂತಿಯಲ್ಲಿ ಪಾಲ್ಗೊಳ್ಳಬೇಕು. ವೇತನ ಸಹಿತ ರಜೆ ತೆಗೆದುಕೊಂಡು ರಜೆ ಅನುಭವಿಸುವುದು ಸಲ್ಲದು. ಕೋವಿಡ್ ನೆಪ ಮಾಡಿಕೊಂಡು ಕೇವಲ ಫೋಟೊ ಇಟ್ಟು ಪೂಜಿಸುವುದು ಬೇಡ. ಹಾಗೂ ಗಾಂಧಿನಗರ, ಆವರಗೆರೆ, ಭರತ್ ಕಾಲೋನಿ ಇಲ್ಲಿಂದ ಮೆರವಣಿಗೆ ಎಂಬ ಕಟ್ಟುಪಾಡು ಹೋಗಬೇಕು. ನಗರದ ಯಾವುದೇ ಭಾಗದಲ್ಲಿ ಅಂಬೇಡ್ಕರ್ ಮೆರವಣಿಗೆ ಹೊರಡಬೇಕು. ಅವರು ಎಲ್ಲರಿಗೂ ಸಲ್ಲುವ ಚೇತನವಾಗಿದ್ದು ಎಲ್ಲರೂ ಕೂಡಿ ಜಯಂತಿ ಆಚರಿಸಬೇಕು. ಹಾಗೂ ಅವರ ಜೀವನ ಚರಿತ್ರೆ ಬಿಂಬಿಸುವ ವಾರ್ತಾ ಇಲಾಖೆ ಪ್ರಸ್ತುತಪಡಿಸಿದ “ಭಾರತ ಭಾಗ್ಯ ವಿಧಾತ” ಕಿರುಚಿತ್ರ ಗ್ರಾ.ಪಂ ಮಟ್ಟದಲ್ಲಿ ಪ್ರದರ್ಶನ ಮಾಡಬೇಕು. ಹಾಗೂ ಅಂಬೇಡ್ಕರ್‌ರವರ ಮಹಾನಾಯಕ ಧಾರಾವಾಹಿಯನ್ನು ಸಂಜೆ ಹೊತ್ತು ಚಂದನವಾಹಿನಿಯಲ್ಲಿ ಪ್ರಸಾರ ಮಾಡಬೇಕೆಂಬ ತಮ್ಮ ಹಕ್ಕೊತ್ತಾಯವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕೆಂದರು.     ಮುಖಂಡರಾದ ಸೋಮ್ಲಾಪುರ ಹನುಮಂತಪ್ಪ ಮಾತನಾಡಿ, ಯಾವುದೇ ಸಭೆ ಸಮಾರಂಭಗಳಲ್ಲಿ ದಲಿತರ ಸಮಸ್ಯೆಗಳು ಇದುವರೆಗೆ ಪರಿಹಾರ ಕಂಡಿಲ್ಲ. ಈ ನಿಟ್ಟಿನಲ್ಲಿ ಅರ್ಥಪೂರ್ಣ ಕೆಲಸಗಳು ಮತ್ತು ಎಸ್‌ಸಿಎಸ್‌ಟಿ ಅನುದಾನ, ಯೋಜನೆಗಳು ಸಮರ್ಪಕ ಬಳಕೆ ಆಗಬೇಕು. ಹಾಗೂ ಅಂಬೇಡ್ಕರ್‌ರ ಬಗ್ಗೆ ತಿಳಿದ ಪಂಡಿತರನ್ನು ಕರೆಸಿ ಅವರ ವಿಚಾರಧಾರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಆಗಬೇಕು ಎಂದರು.    ಮುಖಂಡರಾದ ಹೆಗ್ಗೆರೆ ರಂಗಪ್ಪ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣ ವಿಚಾರ 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರ ಬಳಸಿ ಕ್ರಮ ಕೈಗೊಳ್ಳಬೇಕೆಂದರು. ಎಸಿ ಕಚೇರಿ ಜಾಗದಲ್ಲಿ ಅಂಬೇಡ್ಕರ್ ಭವನ ಸ್ಥಾಪನೆಯಾದರೆ ಅನುಕೂಲವಾಗುತ್ತದೆ ಎಂದ ಅವರು ನಗರದ ಬಾಬು ಜಗಜೀವನರಾಂ ಭವನ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಕಿಟಕಿ ಇಲ್ಲ, ಪಕ್ಷಿಗಳು ಗೂಡು ಕಟ್ಟಿಕೊಂಡಿವೆ. ಭವನ ನಿರ್ವಹಿಸಲು ಉಸ್ತುವಾರಿ ಸಮಿತಿ ನೇಮಿಸಬೇಕೆಂದು ಅವರೊಂದಿಗೆ ಇತರೆ ಸದಸ್ಯರೂ ಒತ್ತಾಯಿಸಿದರು. Attachments area