ತುಂಗಭದ್ರ ಮುಂದುವರೆದ ಪ್ರವಾಹ  1.64 ಲಕ್ಷ ಕ್ಯೂಸೆಕ್ಸ್ ತಲುಪಿದ  ಹೊರಹರಿವು.


(ಸಂಜೆವಾಣಿ ಪ್ರತಿನಿಧಿಯಿಂದ)
ಹೊಸಪೇಟೆ ಜು18: ಕಲ್ಯಾಣ ಕರ್ನಾಟಕ ಹಾಗೂ ಆಂದ್ರಾ ಮತ್ತು ತೆಲಂಗಾಣ ರಾಜ್ಯದ ಜೀವನಾಡಿ ತುಂಗಭದ್ರೆಗೆ ಒಳಹರಿವು ಮತ್ತೆ ಗಣನೀಯವಾಗಿ ವೃದ್ದಿಯಾಗಿರುವುದು ಪ್ರವಾಹವೂ ಮುಂದುವರೆಯಲು ಕಾರಣವಾಗಿದೆ.
ಜಲಾನಯನ ಪ್ರದೇಶ ಸೇರಿದಂತೆ  ಜಿಲ್ಲೆಯ ತುಂಗಭದ್ರೆಗೆ ಅತಿ ಹೆಚ್ಚಿನ ನೀರು ಹರಿದು ಬರುತ್ತಿದ್ದು ನದಿಗೆ ಅಪಾರ ಪ್ರಮಾಣದ ಒಳ ಹೊರ ಹರಿವಿನ ಕಾರಣವಾಗಿದ್ದು ಪ್ರಮಾಣದ ನೀರು  ಕ್ರೆಸ್ಟ್ ಗೇಟ್ ಗಳ ಮೂಲಕ ಹಾಗೂ ಕಾಲುವೆಗಳಿಗೆ  ಬಿಡಲಾಗುತ್ತೀದೆ.
ಇಂದು ದಾಖಲಾದ ಮಾಹಿತಿಯಂತೆ 1.66 ಲಕ್ಷ ಕ್ಯೂಸೆಕ್ಸೆ ನೀರು ಸದ್ಯ ಹರಿದು ಬರುತ್ತಿದ್ದು  ಒತ್ತಡ ತಡೆಯುವ ದೃಷ್ಟಿಯಿಂದ ಹೆಚ್ಚು ಸಾಮರ್ಥ್ಯದ ಅಂದರೆ  1.55 ಲಕ್ಷ ಕ್ಯೂಸೆಕ್ಸೆ ನೀರು ಹೊರ ಬಿಡಲಾಗುತ್ತಿದೆ.    
 ತುಂಗಭದ್ರೆಯ ಹೊರನೋಟ.
ತುಂಗಭದ್ರೆಯ ಹೊರನೋಟ ದಿನ ದಿಂದ ದಿನಕ್ಕೆ ರಮಣೀಯವಾಗಿ ಕಾಣುತ್ತಿದ್ದು. ಇದೀಗ 30 ಕ್ರಸ್ಟ್ ಗೇಟ್ಸ್‌ ಗಳ  ಹಾಗೂ ಕಾಲುವೆಗಳ ಮೂಲಕವೂ  ಒಟ್ಟು 1.55 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿತ್ತಿದ್ದು ತುಂಗಭದ್ರೆಯ ಹೊರನೋಟವು ರಮಣೀಯವಾಗಿ ಕಾಣುತ್ತಿದೆ. ಭಾನುವಾರ ಸಂಜೆ ಸುರಿದ ಮಳೆಯನ್ನು ಲಕ್ಕಿಸದೆ ಸಹಸ್ರಾರು ಪ್ರವಾಸಿಗರು ತುಂಗಭದ್ರೆಯ ಸೊಬಗನ್ನು ಸವಿಯಲು ಆಗಮಿಸಿದ್ದರು.
ಮತ್ತೊಂದಡೆ ಅಪಾರ ಪ್ರಮಾಣದ ನೀರು ಹರಿಬಿಟ್ಟರುವುದರಿಂದ ಐತಿಹಾಸ ಹಂಪಿ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಮತ್ತಷ್ಟು ಅಪಾಯವನ್ನು ತಂದೊಡ್ಡಬಹುದಾಗಿದ್ದು ಅಗತ್ಯ ಮುನ್ನೆಚ್ಚರಿಕೆ ಜಿಲ್ಲಾಡಳಿತ ನೀಡಿದ್ದು, ಪೊಲೀಸರು, ಗೃಹ ರಕ್ಷಕರು ಸರ್ಪಗಾವಲು ಸಹ ಮುಂದುವರೆದಿದೆ. ನದಿಪಾತ್ರಕ್ಕೆ ಜನ ಜಾನುವಾರ ಚಲಿಸದಂತೆಯೂ ಕ್ರಮ ವಹಿಸಲಾಗಿದೆ.
 ನೀರಿನ ಮಟ್ಟ.
ಜಲಾಶಯದ ಗರಿಷ್ಠ ಮಟ್ಟ1633 ಅಡಿ, ಇಂದು 1630.73 ಅಡಿ, ನೀರು ಸಂಗ್ರಹಣಾ ಸಾಮರ್ಥ್ಯ 105.788 ಟಿಎಂಸಿ, ಇಂದಿನ ಸಾಮರ್ಥ್ಯ 96.838, ಒಳಹರಿವು:164978 ಕ್ಯೂಸೆಕ್ಸ, ಹೊರಹರಿವು  155474 ಕ್ಯೂಸೆಕ್ಸ ದಾಖಲಾಗಿದ್ದು ಇದು ಕ್ಷಣಕ್ಷಣಕ್ಕೂ ಬದಲಾಗುತ್ತಿದೆ.

Attachments area