ತುಂಗಭದ್ರ ಪ್ರವಾಹ ಪರಿಶೀಲಿಸಿದ
ಸಚಿವ ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.14-  ಜಿಲ್ಲಾ ಉಸ್ತುವಾರಿ ಸಚಿವ ಇಂದು ತುಂಗಭದ್ರ ನದಿ ಪ್ರವಾಹ ಪೀಡಿತ ಕಂಪ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿವರ್ಷದಂತೆ ಈ ವರ್ಷವೂ ನದಿಗೆ ನೀರು ಬಂದಿದೆ. ಕಂಪ್ಲಿ- ಗಂಗಾವತಿ ಸೇತುವೆ ಮುಳುಗಿದೆ. ನದಿ ದಂಡೆಯ ಸುತ್ತಮುತ್ತಲ ಪ್ರದೇಶ ಜಲಾವೃತ್ತವಾಗಿದೆ. ಅಧಿಕಾರದಲ್ಲಿದ್ದವರು, ಪ್ರತಿ ಪಕ್ಷದಲ್ಲಿದ್ದವರು ಬಂದು ಭೇಟಿ ಮಾಡಿ ಹೋಗುವಂತೆ ಇಂದು  ಸೇತುವೆ ಮುಳುಗಡೆ ಪ್ರದೇಶಕ್ಕೆ ಮೊದಲು ಶಾಸಕ ಗಣೇಶ, ನಂತರ ಸಚಿವ ಶ್ರೀರಾಮುಲು ಭೇಟಿ ನೀಡಿದರು.
ಅಧಿಕಾರಿಗಳ ಜೊತೆ ಚರ್ಚೆ ಮಾಡಿದ ಸಚಿವರು. ಈ ಸೇತುವೆಯನ್ನು ಪುನರ್ ನಿರ್ಮಾಣಕ್ಕೆ ಸರಕಾರ ಮಂಜೂರಾತಿ ನೀಡಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ
ಆದರೂ ಕಂಪ್ಲಿ ಶಾಸಕ ಗಣೇಶ್  ಅವರು ಈ ಬಗ್ಗೆ ಅಸಮಾಧಸನ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಸಚಿವ ಶ್ರೀರಾಮುಲು ಅವರು. ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟಿದೆ ಈ ಸಮಯದಲ್ಲಿ ಜನರಿಗೆ ಸಹಕಾರ ಮಾಡೋ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದು ಬಿಟ್ಟು ಕೇವಲ ವಿರೋಧ ಪಕ್ಷದಲ್ಲಿ ಇದ್ದೇವೆ ಎನ್ನುವ ಮಾತ್ರಕ್ಕೆ ಹೋರಾಟ ಮಾಡ್ತೇವೆ.
ಜನರನ್ನು ದಾರಿ ತಪ್ಪಿಸಲು ನೂತನ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಜೆ  ಇಚ್ಚೆಯಿಲ್ಲ ಹೋರಾಟ ಮಾಡ್ತೀವಿ ಎಂದರೆ ಮಾಡಿ ಎಂದರು.
ಶ್ರೀರಾಮುಲುಗಿಂತ ಮೊದಲೇ  ಸೇತುವೆ ಮೇಲೆ ಬಂದಿದ್ದ ಶಾಸಕ ಗಣೇಶ್
ಪ್ರತಿ ವರ್ಷ ಜಲಾಶಯದಿಂದ ನೀರು ಬಿಟ್ಟಾಗ ಸೇತುವೆ ಮುಳುಗುತ್ತದೆ. ಹೊಸ ಸೇತುವೆ ನಿರ್ಮಾಣ ಕುರಿತು ಹಲವು ಹೋರಾಟ ಮಾಡಿದ್ದೇವೆ ಸದನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದೇನೆ ಆದ್ರೇ ಯಾವುದೇ ಪ್ರಯೋಜನವಾಗಿಲ್ಲ.‌ನದಿ ನೀರು ಕಡಿಮೆಯಾದ ಬಳಿಕ ಸೇತುವೆ ಬಳಿಯೇ ಹೋರಾಟ ಮಾಡ್ತೇವೆ ಎಂದಿದ್ದರು.
ಎಲ್ಲರದ್ದೂ ಅಷ್ಟೇ ಈ ಹಿಂದೆ ಹೊಸಪೇಟೆ ಕ್ಷೇತ್ರಕ್ಕೆ ಕಂಪ್ಲಿ ಸೇರಿದಾಗ ಅಂದು ಶಾಸಕರಾಗಿದ್ದ. ಗವಿಯಪ್ಪ, ಆನಂದ್ ಸಿಂಗ್, ಸುರೇಶ್ ಬಾಬು ಸೇತುವೆ ನಿರ್ಮಿಸುವ ಬಗ್ಗೆ ಹೇಳಿದ್ದರು. ಆದರೆ ಇನ್ನೂ ಆಗಿಲ್ಲವೆಂಬುದಂತೂ ಸತ್ಯ.

Attachments area